Friday, 10 March 2017

ಕುವೆಂಪು - ವೃಷಭೇಂದ್ರರ ದಿನಚರಿಯ ಕನ್ನಡಿಯಲ್ಲಿ --- ಚಂದ್ರು ಎಂ ಹುಣಸೂರು

ಕುವೆಂಪು - ವೃಷಭೇಂದ್ರರ ದಿನಚರಿಯ ಕನ್ನಡಿಯಲ್ಲಿ

ಜ್ಞಾನಾಕಾಂಕ್ಷಿಯ ಪ್ರಣಾಮಗಳಲಿ
ರಸಋಷಿ ವಿಷಯವೆ ಹೃದಯಾಜ್ಞೆ
ವೃಷಭರ ಆಲಿಕೆ, ಧನ್ಯತಾ ಹೋಲಿಕೆ
ತಿಳಿಯದೆ ಮನವಿದು ಕರಗುತಿದೆ,,

ಪ್ರತಿಪುಟದಲ್ಲಿಯೂ ಅನುಭವ ಸಹಿತ
ಮಿರಮಿರ ಮಿನುಗುವ ಧ್ಯಾನದಾ ಹಿತ
ಗುರುಭಕ್ತಿಯಾ ಸೆಲೆಗೆ ಆತ ಧನ್ಯ
ಗುರುಗಾರು ಸಮಾನರೋ ವೃಷಭೇಂದ್ರನ,,

ಧನ್ಯವೆನ್ನೋ ಮಾತು ವಿರಳ
ನಿಮ್ಮ ಜೀವನ ಸಫಲತೆಗೆ
ಅಂತೂ ಬೆಳ್ಳಿಯೇ ಆದರಲ್ಲ
ಸಾರ್ಥಕ ನಿಮ್ಮಂತವರೊಂದೊಂದು ಹಳ್ಳಿಗೆ,,

ಕೆಸರಲ್ಲುಟ್ಟಿ ಪಸರಿಸೋ ಹೂ
ಪರಿಮಳ ಪರಿಮಿತಿ ಮೀರುವ ತರಹ
ವೃಷಭೇಂದ್ರ ಸ್ವಾಮಿ ನಿಮ್ಮ ಬದುಕಾಯ್ತು
ಅರಿತು ನಿಮ್ಮ ಗುರುವಾದಿಯ ಬರಹ,,

ಗುರುಸಾಕ್ಷಾತ್ ಪರಭ್ರಹ್ಮ, ಪರದೈವ
ನಿಮ್ಮನ್ನಾವರಿಸಿತ್ತೇ ಕಣಕಣಗಳಲಿ
ಎಮ್ಮ ಕೃತಜ್ಞತೆ ರಚಿಸಿದ್ದಕ್ಕೆ ನೀವು

ಕುವೆಂಪು- ನನ್ನ ದಿನಚರಿಯ ಕನ್ನಡಿಯಲಿ,,

No comments:

Post a Comment