Monday, 2 May 2016

ಅನುಭವ + ಅಭಿನಯ(ಅಂಕಣ)------ಚಂದ್ರು ಎಂ ಹುಣಸೂರು





       ಅನುಭವ + ಅಭಿನಯ

(2009-2011 ನೇ ಸಾಲಿನಲ್ಲಿ ಡಿ.ಎಡ್ ವಿದ್ಯಾರ್ಥಿಯಾಗಿದ್ದಾಗಿನ ನನ್ನ ಅನುಭವಗಳನ್ನು ಇಲ್ಲಿ ಹೇಳಿದ್ದೇನೆ. ತಮ್ಮ ಅಭಿಪ್ರಾಯಕ್ಕಾಗಿ -----ಚಂದ್ರು ಎಂ ಹುಣಸೂರು,,,, 



(ಪ್ರಥಮ ಡಿ ಎಡ್ ನಲ್ಲಿ ಶೈಕ್ಷಣಿಕ ಪ್ರವಾಸ,,ಕೂಡಲ ಸಂಗಮದಲ್ಲಿ)
 ಆಗಸ್ಟ್2015->ಅಲೆದಾಡುತ್ತಿದ್ದ ಅಲೆಮಾರಿಯ ಅಂತರಂಗದಲ್ಲಿ ಚಿತ್ರಗೊಳ್ಳುತ್ತಿದ್ದ ಅನೇಕ ಚಿಂತನಾ ಲಹರಿಗಳ ಪೈಕಿ ಪ್ರಾಧಾನ್ಯತೆ ಪಡೆದುಕೊಂಡಿದ್ದ ಸಂಕಟ ಸೌಮ್ಯದಿಂದಲೂ, ಗೌಪ್ಯದಿಂದಲೂ, ಮುದದಿಂದಲೂ ಹೃದಯ ನೇವರಿಸಿ, ಇರುಳು ಸಂಜೆಯ ಮಬ್ಬು ಮಬ್ಬು ಬೆಳದಿಂಗಳಿನಂದದ ಸವಿಯನ್ನರಿಯದೆ ಸಾಕಾಗಿ, ಬೇಸತ್ತು ಬೆಂದ ಮುಗಿಲಿನತ್ತ ಮುಖಮಾಡಿ ಮೌನಿಯಾಗಿದ್ದವನ ಕಣ್ಣನಿ, ಚರಣದ ಸಹಭಾಳ್ವಿಕೆಯಿಲ್ಲದೆ ಏಕಾಂಗಿಯಾಗಿ ಉಮ್ಮಳಿಸಿ ಸರಾಗವಾಗಿ ನನ್ನ ಕೈ ಬೆರಳಿಗಿಳಿದಿತ್ತು.
       ಜೀವನದ ಮಾಮೂಲಿ ಸಂತೆಯಲ್ಲಿನ ಸಂಗಡಿಗರಾಗಲಿ, ಬಂಧು-ಬಳಗವೆನ್ನುವ ಇದ್ದಾಗ ಈರ್ಮಡಿ ಪ್ರೀತಿಸುವವರಾಗಲಿ, ಹೆತ್ತು ಹೊತ್ತು ಮೃತ್ಯುಂಜಯನಾಗಲೆಂದು ಆಶಿಸುವ ಧಾರಾಳ ಮಾತಾ-ಪಿತೃಗಳಾಗಲಿ, ಸಂಧರ್ಭಕ್ಕೆ ಮನದ ಸನ್ನಿವೇಶಕ್ಕೆ ಭಾಗಿಗಳಾಗಿರಲಿಲ್ಲ. ಅಥವಾ ನನ್ನ ಸ್ಥಿತಿಗೂ ಅವರೆಲ್ಲರಿಗೂ ಯಾವ ಸಂಬಂದವೂ ಇರಲಿಲ್ಲ. ಎರಡು ತಿಂಗಳು ಸಾಕಿದ್ದ ನಾಯಿಮರಿ ಅಚಾನಕ್ಕಾಗಿ ಸತ್ತರೆ ಹೆತ್ತದ್ದನ್ನು ಕಳೆದುಕೊಂಡೆವೆಂಬಂತೆ ದುಃಖಿಸುವವರ ಸಾಲಿನಲ್ಲಿ ಸಂಧರ್ಭ ಭಾವುಕತೆಗೆ ಔಚಿತ್ಯಪೂರ್ಣವೆ.
          ಅದು ಪಿ ಯು ಸಿ ಯಲ್ಲಿ ಹಾಗೋ ಹೀಗೋ ಪಾಸಾಗಿ ಮುಂದೇನು ಮಾಡಬೇಕೆಂದು ಚಿಂತಿಸುವ ಸಂಧರ್ಭ. ತಿಳಿದವರ ಅನಿಸಿಕೆಯಂತೆ, ಅನಿಸಿಕೆಯನ್ನು ಆಶೀರ್ವಾದವೆಂದು ಭಾವಿಸೊ ತಂದೆಯ ಆಜ್ಞೆಯಂತೆ, ಡಿ ಎಡ್ ತರಭೇತಿಗೆ ತರಾತುರಿಯಲಿ,್ಲ ಇಲ್ಲದ ಧನವನ್ನು ಉಳ್ಳವರ ಬಳಿಚಾಚಿ ಪಡೆದು, ಕಾಲೇಜು ಪ್ರವೇಶಿಸಿ, ಯಾವುದೋ ಅಧಿಕ ಪ್ರಸಂಗಿಗಳ ಆಧುನಿಕ ತರಬೇತಿ ಕೇಂದ್ರಕ್ಕೆ ಬಂದಿಹೆನೆಂದೆನಿಸಿದ ಅಂದಿನಿಂದ, ಇಂದು ಮಧ್ಯಾಹ್ನ ಬೀಜಗನಹಳ್ಳಿಯ ಸ್ವಚ್ಛತಾ ಶಿಬಿರದಿಂದ ತನ್ನೆಲ್ಲ ಗೆಳೆಯ- ಗೆಳತಿಯರಿಗೆ ಒಂದು ಬಾಯ್ ಮತ್ತು ಕೈ ಕುಲುಕುವುದರ ಮೂಲಕ, ಎರಡು ವರ್ಷದ ಬಾಂಧವ್ಯಕ್ಕೆ ಅಂತ್ಯವನ್ನಾಡಿ, ಆನಂದವಾಗಿಯೇ ಅಂತರ್ಮುಖಿಯಾಗಿ, ಏಕಾಂಗಿಯಾಗಿ ಗೂಡಿಗೆ ಬಂದಿಳಿದವನ ಮನವಿಂದು ಬರೀ ಭೂಮಿಹೊತ್ತ ಕೌತುಕ.
          ಕಾಲೇಜೆಂದರೆ ನಂಬಲರ್ಹವಲ್ಲದ ಗೋಡನ್ನು, ಅಂತೂ ಪ್ರವೇಶಿಸಿದ ಬಳಿಕ ಹಳೇ ಸರ್ಕಾರಿ ಕಛೇರಿಯ ತಧ್ರೂಪಿಯಂತೆ ಕಾಣುವ ಪ್ರಾಂಶುಪಾಲರ ಪರಮಕುಠೀರ, ದಾಟಿಸಾಗಲು ಪ್ರಾಚ್ಯವಸ್ತು ಸಂಗ್ರಹಾಲಯವೇ ಅನ್ನಬಹುದಾದ, ವಿದ್ಯಾರ್ಥಿಗಳೇ ತಯಾರಿಸಿಟ್ಟು ಬಹುಕಾಲವೆ ಆಗಿರಬೇಕೆಂದು ಬಾಸವಾಗುವಂತಹ ದೂಳಿಡಿದಿರುವ ಬೋಧನಾ ಮಾದರಿಗಳ ಸಾಕ್ಷಿಗಳು (ಮೊದಲಿಂದಲೂ ಅಲ್ಲಿದ್ದವರಿಗೆ ಹಾಗೆನ್ನಿಸುತ್ತಿತ್ತೇ ವಿನಃ ಹೊಸಬರಿಗೆ 2-3 ದಶಕಗಳಿಂದಿನ ಚಟುವಟಿಕೆ ಸತ್ತಿರುವ ಸಿ ಡಿ ಕಡತಗಳು ಮತ್ತು ತೂಕಡಿಸುವ ಅಧಿಕಾರಿ ತಡಕಾಡಿ ತಂದಿದ್ದ ತನಿಖೆಯ ಸಾಕ್ಷಾಧಾರಗಳೇ), ಹಳೇ ಸಿನಿಮಾದ ಸಾಲುಗಂಬ ಮನೆಯನ್ನು ಹೋಲುವ ದೊಡ್ಡಕಂಬ ಸಹಿತ ತರಗತಿಗಳು, ನಡೆದು ಸಾಗುತ್ತಿದ್ದರೆ ಗಾಂಧೀ ನಗರದ ಚಿತ್ರಸಂತೆಯ ಕೊನೆಯ ತಮ್ಮನಂತೆ ಚಿಕ್ಕದಾಗಿಯೂ, ಚೊಕ್ಕವಾಗಿರುವ ಕಾಲೇಜು ಕೊಠಡಿಗಳ ದೊಡ್ಡಣ್ಣನಂತೆ ವಿಶಾಲವಾಗಿಯೂ, ಸರಳವಾಗಿಯೂ, ಸ್ವಲ್ಪ ತಿಂಗಳ ನಂತರ ಇದು ಕಾಲೇಜು ಎಂದು ಪ್ರಜ್ಞೆಗೆ ಬರುವಂತೆಯೂ ಇದ್ದ ನನ್ನ ಕಾಲೇಜು  ಕೊಟ್ಟ ಸವಿನೆನಪುಗಳ ಪುರವಣಿಗಳಲ್ಲಿ ಮೊದಲ ಪುಟವಾಗಿ ಲೇಖನ.
         ಮಿಲಿಟರಿಯನ್ನೋಲುವ ಶಿಸ್ತು ಉಲ್ಲಂಘನೆಯಾಗದ ದಿನವಿಲ್ಲ. 1 ಗಂಡಿಗೆ 4 ಹೆಣ್ಣು ಸರಾಸರಿಯಿರುವ ಅಪರೂಪ ಲಿಂಗಾನುಪಾತದ ತರಗತಿ, ಹೊಸದನ್ನೇಳುವ ಗುರುವರ್ಯರ ಪದೇ ಪದೇ ಅದೇ ಬೋಧನೆಗಳು, ಭಾವುಕ ವ್ಯಕ್ತಿಗಳ ಬಾಂದವ್ಯ ಅಂತೂ ಅಂಕಪಟ್ಟಿಯಲ್ಲಿ ತನ್ನ ರೂಪ ಬದಲಿಸಿ ಅಂಕವಾಗಿತ್ತು. ಹಳ್ಳಿಯಿಂದಲೇ ಬರುತ್ತಿದ್ದ ಅಷ್ಟು (10) ಗೆಳೆಯವೃಂದರ ಸಂಸ್ಕøತಗಳು, ಹಳ್ಳಿಯಿಂದಲೇ ಬಂದಿದ್ದೂ ಭಾಷೆಯಲ್ಲಿಯೂ, ಬಳುಕಿನಲ್ಲಿಯೂ, ವೇಷದಲ್ಲಿಯೂ, ಚೆಲುವಾಂಬ ಆಸ್ಪತ್ರೆಯ ನರ್ಸ್ಗಳನ್ನೆ ಹೋಲುತ್ತಿದ್ದ ಗೆಳತಿಯರು, ಪ್ರತಿನಿತ್ಯ ದಾಡಿ ಅಳಿಸಲು ಮನಸ್ಸು ಬಾರದು. ‘ಜನಗಣಮನ ಅಧಿನಾಯಕ ಜಯ ಹೇಪ್ರತಿನಿತ್ಯ ಘಂಟಾಘೋಷೋದ್ಘಾರ, ಪ್ರಾರ್ಥನಾ ಸಭಾಂಗಣದಲ್ಲಿಯೇ ಉಚಿತ ಅಧಿಕ ಜೀವನ ಬೋಧನೆ, ಸಾಕಷ್ಟು ಕೊರೆತ, ನಿಂತೂ ನಿಂತೂ ನೀರು ಕುಡಿಯಬೇಕೆನಿಸುವಷ್ಟರಲ್ಲಿ ತರಗತಿಯ ಪ್ರವೇಷ, ಅದು ಇರುವೆಯ ಸಾಲಿನ ಪ್ರಬುದ್ಧ ಹೋಲಿಕೆ!.            (ಸಾಂದರ್ಭಿಕ ಚಿತ್ರ)
      ಸೆಪ್ಟೆಂಬರ್2015->ಕಲಿತು ಕಲಿಸಲೋಗಿ ಕೊರೆದು ಮರೆವ ಸಾಲಿನಲ್ಲಿ ನನ್ನ ಹೆಸರು ಪ್ರಕಟ. ಮೊದಲ ಸಲದ ಬೋಧನಾ ತರಭೇತಿ, ಹೆಚ್ಚು ಶ್ರಮವಹಿಸಿ ಸ್ವಲ್ಪ ಉಗಿಸಿಕೊಂಡದ್ದು, ಮುಂದೆ ನಿಂತರೆ ಸಾಕು 100 ಮೀಟರ್ ಓಟವನ್ನು 5 ಸೆಕೆಂಡಿನಲ್ಲಿ ಮುಗಿಸಿದವನ ಬೆವರ ಸರಾಸರಿಗೆ ಸಮವಾಗಿ, ಇಲ್ಲವೆ ಅಧಿಕವಾಗಿ, ಅಥವಾ ಧಾರಾಕಾರಾವಾಗಿ ಸುರಿಯುತ್ತಿತ್ತು. ಸ್ವಚ್ಛತೆಗೆ ನಮಗೆ ನಾವೆ ಸಾಟಿ!! ಸುಗಂಧವನ್ನು ತಡೆದಿಟ್ಟುಕೊಂಡಿದ್ದ ನಮ್ಮ ಶೂಗಳು ಕಾರ್ಯಾರ್ತವಾಗಿ ಅಪರೂಪಕ್ಕೆ ಹೊರೆಗೆಳೆದ ಕೂಡಲೆ ಸುತ್ತಲಿನವರಲ್ಲೂ ಮತ್ತು ತರಿಸುವಂತಹ ಧ್ರವ್ಯ ವರ್ಧಕಗಳೇ,,,
      ಪ್ರೀತಿ, ವಿಶ್ವಾಸ, ಸಮಾನತೆ, ಸಮಾಗಮ, ಸರಳತೆ, ಸೌಂದರ್ಯ, ನಂಬಿಕೆ, ನಗು, ನಿಸ್ವಾರ್ಥತೆ, ನಿಪುಣತೆ, ನೈಜತೆ, ನಾಟಕೀಯತೆ, ಸ್ನೇಹ, ದಾಹ, ಮೋಹ, ಸಮ್ಮೋಹ. ಅಂತೂ ಹೇಳದೆ ಮಿಕ್ಕ ಭಾವನೆಗಳಿಗೂ ಬಣ್ಣ ಬರಿಸುವಂತಹ ಎಲ್ಲವೂ ನಮ್ಮನಮ್ಮಲ್ಲಿರುತ್ತಿತ್ತು. ಒಮ್ಮೊಮ್ಮೆ ಬಳಕೆಯಾಗುತ್ತಿತ್ತು. ಹಾಗಾಗ ಬಂದು ಹೋಗುತ್ತಿತ್ತು. ಕೆಲವರಲ್ಲಿ ಬಂದರೂ ಬರದಂತಿತ್ತು. ಹಲವರಲ್ಲಿ ಬಂದು ಹೊಳೆಯುತಿತ್ತು. ಮಿಕ್ಕವರಲ್ಲಿ ಬಂದು ಹಳಸಿತ್ತು. ತಾರತಮ್ಯತೆಯ ತಕರಾರು ಎಷ್ಟೋಬಾರಿ ತಯಾರಾಗಿ ಗಾಳಿಗೆ ತೂರಿ ಹೋಗುತ್ತಿತ್ತು. ಮೌನಕ್ಕು ಬೆಲೆ, ಮಾತಿನಲ್ಲಿ ಅಪಾರ ಕಲೆ, ವಯಸ್ಸಿಗೊಂತರ ಹಸಿವಿರುತ್ತಿತ್ತು. ಹಸಿವು ಕೆಲವರಲ್ಲಿ ಕಲಿಕೆಯನ್ನು ಕಾಲಡಿಗಿರಿಸಿ ಮಿಕ್ಕೆಲ್ಲವನ್ನು ಉಪ್ಪರಿಗೆಯಲ್ಲಿರಿಸಿ ನಗುತಿತ್ತು. ಹಸಿವು ತನ್ನಲ್ಲಿ ತಾನಾಗಿ ತಯಾರಾಗದಿದ್ದರೂ, ಕೆಲವರಲ್ಲಿ ಅಂಟುರೋಗವಾಗಿ ಕಂಡು, ಅದನ್ನವರು ಕೊಂಡು, ಸ್ವಲ್ಪದಿನ ಉಂಡು, ಸೇಲಾಗದ ಸಿಲ್ಕ್ ಸ್ಯಾರಿ ಗಿರಾಕಿಗಳ ಹಲವು ಕೈಗಳ ಹಿಂಡುವಿಕೆಯಿಂದ ಬಳಕೆಯಾಗಿದೆ ಎನ್ನುವಂತೆ ಕಾಣುತ್ತಿದ್ದ ಸುಕ್ಕುಗಳು ಸುಳ್ಳು ಹೇಳುತ್ತಿದ್ದವು. ಕೆಲವರು ಸತ್ಯವೆಂದು ನಂಬುತ್ತಿದ್ದರು. ಅದು ಸೇಲಾದವರಿಗೆ ರಕ್ಷಣಾ ಕವಚವು, ಅನ್ಯರ ಆಡಳಿತವೆಂದು ಖುದ್ದು ಬಾಸವಾಗುತ್ತಿತ್ತು. ಬೇರಾವ ಹದ್ದು ಕದ್ದು ನೋಡಬಹುದಿತ್ತೇ ಹೊರತು ಬಳಿಬಂದು ಸದ್ದು ಮಾಡುವಂತಿರಲಿಲ್ಲ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೊಳಪಟ್ಟ ಖಾಲಿ ನಿವೇಷನದಂತೆ ಅದು. ನೋಡಿ ಸಾಗಬೇಕೆ ವಿನಃ ಅದರೊಳು ಕೂಡಿ ಬಾಳೋದು ಕಷ್ಟ. ಒಮ್ಮೊಮ್ಮೆ ಎಂಜಲೆಂದು ಕೂಡ. ಆಕರ್ಷಣೆಯ ಆಡಳಿತ ಮುಂದಿನ ಲೇಖನಗಳಲ್ಲಿ ಮಿನುಗಬಹುದು.
             ಬಿದ್ದು ಒದ್ದಾಡಿ ಕೈಕಾಲು ಮುರಿದುಕೊಂಡು ಸಿದ್ಧವಾದ ಕಲಿಕೋಪಕರಣಗಳು, ಪೂರ್ತಿಯಾಗಿ ಮಾಡದ್ದನ್ನು ಸ್ವಚ್ಛವಾಗಿ ಬರೆದಿಟ್ಟ ಪಾಠ ಯೋಜನೆಗಳು, ಬೇಸರದಲ್ಲು ಹಲ್ಲು ಬಿಡುವ ಪುರುಷ ಪ್ರಶಿಕ್ಷಣಾರ್ಥಿಗಳು, ಹಲ್ಲು ಬಿಟ್ಟರೆ ಅಪಾರ್ಥ ತಿಳಿವರೆಂದು ಸಂತಸದಲ್ಲೂ ಸಂತಾಪ ಸೂಚಕಗಳಾಗುವ ಕೆಲವು ಮಹಿಳಾ ಪ್ರಶಿಕ್ಷಣಾರ್ಥಿಗಳು, ಗೊತ್ತಿದ್ದರೂ ಗೊತ್ತಿಲ್ಲದಂತಿರುವ ಜ್ಞಾನಿಗಳು, ಗೊತ್ತಿಲ್ಲದಿದ್ದರೂ ಗೊತ್ತೆಂಬಂತೆ ಸಂದರ್ಭ ನಿಭಾಯಿಸುವ ಮಹಾನ್ ವಿಜ್ಞಾನಿಗಳು, ಹಾಸ್ಯಕ್ಕೂ ನಗದ ಬೋಧಿವೃಕ್ಷದಡಿಯ ಬುದ್ಧನ ಭಾವ ಸಂಬಂಧಿಗಳು, ಎಲ್ಲಕ್ಕೂ ನಗುವ ಹಲ್ಲುಬುರುಕ ಹಸನ್ಮುಖಿಗಳು. ಗುರುಶಿಷ್ಯ ವೃಂಧ ಬೆರಳೆಣಿಕೆಯಷ್ಟಿದ್ದರೂ ಬರೆಯ ಕೂತಾಗ ನಾನೂ ಅಧಿಕ ಪ್ರಸಂಗಿ…...
             ಇಷ್ಟೆಲ್ಲಾ ಕುತೂಹಲಗಳೆಂಬ ಸುಳ್ಳುಗಳ ನಡುವೆ ಪ್ರತಿನಿತ್ಯದ ನಾಟಕದಲ್ಲಿ ನಾನು ಪಾತ್ರಧಾರಿ ಎಂಬುದು ಸತ್ಯವಾಗಿಯೂ ಸಂತಸ. ಎಲ್ಲರೊಳಗೊಂದಾಗಿದ್ದ ಮೊಗ್ಗಿನ ದಿನಗಳು ಮತ್ತೆ ಮರುಕಳಿಸೋದಿಲ್ಲ. ಆದ್ದರಿಂದ ದಿನಗಳಿಗೆ ಹತ್ತಿರವಾಗುವ ಒಂದು ಚಂದ ಪ್ರಯತ್ನ ಇದು. ನವಿರಾದ ಬದುಕಿನ ದಿನಗಳು ಬರವಣಿಗೆಗೆ ನೆರವಾದರೂ ನೇರವಾಗಿ ಹೇಳುವಪ್ರಯತ್ನದಲ್ಲಿದ್ದೇನೆ. ಹದವಾದ ನೆನಪುಗಳು ಲಿಪಿರೂಪವಾಗುವಾಗ ಕೊಂಚ ಆಯತಪ್ಪಿದರು ಅವು ವರ್ಣನೆಯಾಗುತ್ತವೆÉ. ಕಲ್ಪನೆಯ ಬಣ್ಣಗಳಾಗುತ್ತವೆ. ಸಾಧಾರಣ ಸಂಗತಿ ಸಂಪತ್ಪರಿತವಾಗಿ ಕಾಣುವುದು ನೋಡುಗನ ದೃಷ್ಠಿಕೋನವನ್ನು ಅವಲಂಬಿಸಿರುತ್ತದೆ. ನನಗೆ ಚೈತನ್ಯವಾಗಿ ಕಂಡದ್ದು ಮತ್ತೊಬ್ಬನಿಗೆ ವೈಫಲ್ಯವಾಗಿ ಕಂಡಿರಬಹುದು. ಆತನಿಗೆ ವಿಭಿನ್ನವಾಗಿ ಕಂಡದ್ದು ನನಗೆ ಸಾಧಾರಣವೆನಿಸಿರಬಹುದು. ಆದ್ದರಿಂದ ಅನುಭವಕ್ಕೆ ಅಭಿನಯವನ್ನೂ ನಾ ಕೂಡಿಸಿದ್ದು.
      ತರಗತಿ ಮೊದಮೊದಲು ಮೌಲ್ಯಯುತವಾಗಿ, ಶಾಂತಿಯುತವಾಗಿ, ಗಾಂಭೀರ್ಯತೆಯಿಂದ ಮೌನವನ್ನೇ ತನ್ನ ಲಾಂಛನವನ್ನಾಗಿಸಿಕೊಂಡಿತ್ತು. ಒತ್ತಡದÀ ಜೊತೆಗೆ ಹಿಂಸೆ ಕೂಡ ಅದು. ಅತೀ ಶಿಸ್ತು ಪ್ರದರ್ಶನಗೊಳ್ಳತ್ತಿತ್ತೇ ವಿನಃ ಚಟುವಟಿಕೆ ಇರದೆ ಕೆಲವೊಮ್ಮೆ ಶಿಕ್ಷಣ ನೀರಸವೆನಿಸುತ್ತಿತ್ತು. ವಿದ್ಯಾರ್ಥಿಗಳ ಅನ್ವಯಿಕೆ ಅಪರಿಪೂರ್ಣವಾದಾಗ ಗುರುವಿನ ಪಾಂಡಿತ್ಯವು, ಅದರ ವಾಚನವು ಚುನಾವಣೆಯಲ್ಲಿ  ಸೋತ ಅಭ್ಯರ್ಥಿಯ ಶಾಂತಿಯುತ ನಿಲುವು, ಭಗ್ನಾರ್ಹ ಒಡಲು, ಆಶಾಭಂಗದ ನೋವು, ಅಪನಂಬಿಕೆ, ಅಪರಿಮಿತ ಬೆಂಬಲಗಳ ಗೊಂದಲ ರೂಪಗಳಂತಿರುತ್ತದೆ. ಕಾಲ ತೆರೆ ಬೀಳಿಸೋಕೆ ತಿಂಗಳುಗಳು ಸಾಕಾಗಿತ್ತು. ಹರಿಯುತ್ತಿರುವ ಮನವೆಂಬ ನವಿರಾದ ತೊರೆಯನ್ನು ಮರಳೆಂಬ ಶಿಸ್ತಿನಲ್ಲಿ ಅಡ್ಡಗಟ್ಟಿದರೆ ಸ್ನೇಹವೆಂಬ ಬಿರುಸುತನ ಅರಳು ಅರಳು ಮರಳನ್ನು ಅದುಮಿ, ಹನಿ ಹನಿ ದಾಟಿ, ಮೆಲು ಧ್ವನಿಯ ವಿಶ್ವಾಸ ಕಟ್ಟೆಯೊಡೆದು, ನಂಬಿಕೆಯೆಂಬ ಝರಿಯಾಗಿ ಹರಿದು, ಬಳಗವೆಂಬ ನದಿಯನ್ನು ಸೇರಿ, ಬದುಕೆನ್ನೊ ಸಾಗರವ ಅಪ್ಪುವ ಹಾಗೆ ತರಗತಿ ತನ್ನ ರೂಪ ಬದಲಿಸುವಲ್ಲಿ ತೆವಳುತ್ತಿತ್ತು.
      ಅಕ್ಟೋಬರ್2015-> ನಾಯಿ ಎಷ್ಟೇ ನಿಯ್ಯತ್ತಿನಲ್ಲಿದ್ದರೂ ಅದು ತನ್ನೊಡೆಯ ತನ್ನೊಡಲ ಪೂರ್ತಿಯಲ್ಲದಿದ್ದರೂ ಬದುಕಿರುವಷ್ಟಾದರೂ ತುಂಬಿಸುತ್ತಿದ್ದರೆ ಮಾತ್ರ ಜೀವಕ್ಕೆ ಜೀವ. ಕೂಳಾಕದೆ ಕೇವಲ ಹಾಳಾಗೆ ಇರು ಎಂದರೆ ಅದು ತಾನೆ ಎಲ್ಲಿಯ ತನಕ ನೋಡೀತು. ತನ್ನ ಹಸಿವೆಂಬ ಗುರಿಮುಟ್ಟುವ ಕಡೆ ದಾರಿ ಹಿಡಿಯೋಕೆ ಮುಂದಾಗಲೇಬೇಕು. ಇನ್ನು ಒಂದು ಹೆಜ್ಜೆ ಮುಂದಿರುವ ಮೇಲ್ನಾಯಿ  ಹಸಿವಿಗಾಗೆ ಅದನ್ನೆಲ್ಲ ತಿಂದು ದರಿದ್ರ ಒಡೆಯನಲ್ಲಿನ ಒಡನಾಟವನ್ನು ಹಾಗೆ ಮುಂದುವರಿಸಬಹುದು, ಅದು ಶ್ವಾನ. ಮನುಷ್ಯನ ಮನೋಧರ್ಮದ ತನ್ನಿಚ್ಛಿಯ ಅದೆಷ್ಟೋ ಪಟಲಗಳು ಪರಿಸ್ಥಿತಿ ಮತ್ತು ಪರಿಸರದ ಕಾರಣದಿಂದ ಗೌಪ್ಯವಾಗಿದ್ದರೂ, ಸುಪ್ತವಾಗಿದ್ದರೂ, ಕಾಣದಂತಿದ್ದರೂ ಅದೇ ವಾಸ್ತವ ಸ್ಥಿತಿಯಲ್ಲಿ ಮುಂಚೂಣಿಯಲ್ಲಿರುವ ಪಟಲಗಳು ಕಾಲದ ಕಾಂತ ಶಕ್ತಿಗೆ ಮುನ್ನುಗ್ಗದಿರಲಾರವು. ಸಣ್ಣ ಸಣ್ಣ ಅವಕಾಶಗಳಿಗಾಗಿ ಅಂತಹ ಪಟಲಗಳು ಕಾದು ಒತ್ತಡದಿಂದ ಸಮಾಧಾನವಾಗಲು ತುದಿಗಾಲಲ್ಲಿ ನಿಂತಿರುತ್ತವೆ. ಹಾಗೆಂದು ಇದ್ದವರೆಲ್ಲರೂ ಅದ್ಭುತವಾಗೆ ಅರಳಿದರೆಂದಲ್ಲ. “ಹಾಗಿದ್ದವರು ಹೇಗಾದರೂಎಂತಲ್ಲ. ತಮ್ಮಲ್ಲಿನ ರಾಗ ದ್ವೇಷಗಳನ್ನು ಒಮ್ಮೆಲೆ ಹೊರ ಹೊಮ್ಮಿಸಿದರೆಂದಲ್ಲ. ಕೆಲವರು ಹಾಗಾದರೂ ಹಲವರೂ ಇನ್ನೂ ಹಾಗಾಗಿರಲಿಲ್ಲ. ವ್ಯಕ್ತಿಯ ವ್ಯಕ್ತಿತ್ವ ಕ್ಷಣ ಕ್ಷಣಕ್ಕು ಪಕ್ವಗೊಳ್ಳಲೇ ಬೇಕೆಂದರೆ ಪೂರಕ ಹಸ್ತ ಅತ್ಯಾವಶ್ಯಕ. ಅದು ಸಾಧ್ಯವಿಲ್ಲ. ಯಾಕೆಂದರೆ ಯಾರು ಯಾರಿಗೆ ಯಾವಾಗಲೂ ಏನಾದರೊಂದನ್ನು ಕಲಿಸುತ್ತಲೇ ಇರುವುದಿಲ್ಲವಲ್ಲ. ಜೀವನ, ಕಾಲ, ಸಮಯ ಕಲಿಸುತ್ತದೆಂದರು ಕಲಿತು ಬಲಿವ ಮನಮುಖ್ಯ ತಾನೆ. ಅದು ತಾನು ಸುಪ್ತವಾಗಿರುತ್ತೇನೆಂದುಕೊಂಡರೆ ಯಾರು ತಾನೆ ಏನು ಮಾಡಿಯಾರು. ಶಿಲ್ಪಿಯ ಕೈಯಲ್ಲಿ ಹಾಳು ಕಲ್ಲೊಂದು ಮೈ ನವಿರೇಳಿಸೊ ಶಾಕುಂತಲೆಯೋ, ಗೊಮ್ಮಟೇಶ್ವರನೊ, ಅದ್ಭುತ ಕೋಟೆಯೋ ರೂಪತಾಳಿತೆಂದರೆ ಅಲ್ಲಿ ಆತನ ಚಾಣಾಕ್ಷ ತಲ್ಲೀನತಾ ಸೂಕ್ಷ್ಮತಾ ಕಲೆಯ ಜೊತೆಗೆ ಹಾಳುಕಲ್ಲಿನ ದೃಢತೆಯನ್ನೂ ಮರೆವಂತಿಲ್ಲ. ಆತನ ಪೆಟ್ಟನ್ನು ಪಟ್ಟು ಬಿಡದೆ ತಡೆದುಕೊಳ್ಳದಿದ್ದರೆ ಕಲ್ಲಲ್ಲಿ ಕಲ್ಪನೆಯು ಕಂಗೊಳಿಸುತ್ತಿರಲಿಲ್ಲ ಅಲ್ಲವೇ,, ಆದರೂ ಅಲ್ಲಲ್ಲಿ ತರಗತಿ ಚುರುಕಾಗುತ್ತಿತ್ತು. ಅದು ಚಳಿಗಾಲದಲ್ಲಿ ಗ್ರಾಮದ ಮುದಿ ಮಂದಿಗೆ ಮುಂಜಾನೆ ಕಾವು ಕೊಡೊ ಪುಟ್ಟ ಅಗ್ನಿದೇವನಂತೆ ಚಿಕ್ಕದಾಗಿಯೂ, ದೊಡ್ಡಮನೆಯೊಳಗಿನ  ಪುಟ್ಟದೇವಗುಡಿಯಂತೆ ಚೊಕ್ಕದಾಗಿಯೂ ಸಂಕ್ಷಿಪ್ತವಾಗಿಯೂ ಗುರುತಾರ್ಹ ಸಾಕ್ಷಿಯಾಗಿಯೂ ಸರಳವಾಗಿಯೂ ಇತ್ತೇ ವಿನಃ ಈಜುತ್ತಿರುವಾಗ ಬೇಸಿಗೆಯ ರಣಬಿಸಿಲ ರೌದ್ರವನ್ನಡಗಿಸೋ ನದಿಯಂತೆ ಅಲೆಯಲೆಯಾಗಿಯೂ, ಮೋದಿ ಭಾಷಣಕ್ಕೆ ಸೇರ್ಪಡೆಯಾಗುವ ಜನಸಾಗರದಂತೆ ವಿಶಾಲವಾಗಿಯೂ ವಿಸ್ತøತವಾಗಿಯೂ ಬೃಹÀತ್ತಾಗಿಯೂ ಇರಲಿಲ್ಲ. ಒಬ್ಬೊಬ್ಬರ ಒಂದೊಂದೆ ಹೊಂದಾಣಿಕೆ, ಸಹಾಯ, ಅನ್ವಯಿಕೆ ಆಗಮನವಾಗುತ್ತಿರಲು ತರಗತಿ ತಕ್ಕಮಟ್ಟಿಗೆ ತನ್ನ ಮನರಂಜನೆಯ ಬಿಸಿಲು ಕೋಲುಗಳನ್ನು ಹೊಡೆದಂಚುಗಳ ನಡುವೆ ಮನವೆಂಬ ಮನೆಯೊಳಗೆ ನುಸುಳಿಕೊಂಡೋಗಲು ಅಲ್ಲಿಯವರೆಗೆ ಅಡಚಣೆಯಿಲ್ಲದೆ ಅವಿತಿದ್ದ ನೀರಸತೆಯ ಕತ್ತಲು ಬೆಳಕಿನಾಗಮನದಿಂದನಾ ಹೋಗಲೆ ಇನ್ನೂಎಂದು ಮುನಿದು ನಿಂತು ಹೊರಗೋಗಲು ಇನ್ನೊಂದಷ್ಟು ಸಮಯಕ್ಕಾಗಿ ಗಂಟೆಯೊಡೆಯಲೆಂದು ಕಾಯುತ್ತಿತ್ತು. ತರಗತಿ, ಗುರುವರ್ಯರು, ಕಟ್ಟಡ, ಸಮವಸ್ರ್ತ ಸಿದ್ಧತೆ, ಹುಣಸೂರು, ಹಣಕಾಸು ಜೋಡಣೆಯಂತಹ ತರಹ ತರಹ ವಿಷಯಗಳು ಗೆಳೆಯವೃಂದದಲ್ಲಿ ಭಿನ್ನ ವಿಭಿನ್ನವಾದ ಪ್ರಾರಂಭಿಕ ಪರಿಣಾಮಗಳನ್ನು ಬೀರುತ್ತಿದ್ದವು.
    ಆರಂಭದಲ್ಲಿ ಎಲ್ಲದರಲ್ಲೂ ಚೈತನ್ಯ, ಉತ್ಸಾಹ. ಹತ್ತು ಮಂದಿಯನ್ನು ಓಟಕ್ಕೆಂದು ಬಿಟ್ಟಾಗ ಗೆಲ್ಲಬೇಕೆಂಬ ಹುಮ್ಮಸ್ಸು ಎಲ್ಲರಿಗೂ ವೇಗ ನೀಡಿದರು ಮುಕ್ತಾಯದೊತ್ತಿಗೆ ಮುಂಚೂಣಿಯಲ್ಲಿರುವುದು ಅಭ್ಯಾಸ, ದೃಢತೆ, ಮತ್ತು ಶ್ರಮದವಲಂಭನೆಯ ಒಬ್ಬ ಮಾತ್ರಮೊದಲನೆಯದಕ್ಕೆ ಹೆಚ್ಚು ಪುರಸ್ಕಾರ ಲಭಿಸುವುದರಿಂದ ನಂತರದಕ್ಕೆಅಂತರಅನಿವಾರ್ಯ. ಅದು ಯಾರಾದರೂ ಪ್ರೀತಿಯಿಂದ ಒಮ್ಮೆ ಕೈತುತ್ತು ನೀಡಿದ ಪ್ರಚೋದನೆಯಿಂದ ಪ್ರತಿಕ್ರಿಯೆಯಾಗಿ ಒಂದೆರೆಡು ಕಂಬನಿ ಕಣ್ಣ ಶಾಲೆಯಿಂದ ಭಾವ ವಿದ್ಯೆ ಕಲಿತು ಅತ್ತ್ಯುತ್ತಮ ತೇರ್ಗಡೆಹೊಂದಿ ಎದುರಿನವರ ವಿಹಂಗಮ ನೋಟಕ್ಕೆ ಕಾರಣವಾಯಿತೆಂದು ಪ್ರತಿಸಲದ ಕೈತುತ್ತಿಗೂ ಅದ್ಭುತ ದೃಶ್ಯವೇ, ಉಚ್ಚ ಸ್ಥಾನಮಾನವೆ ಮರುಕಳಿಸಲೆನ್ನುವ ಹಾಗೆ ಹುಚ್ಚುತನವಾಗುತ್ತದೆ. 
 
               ಸಮವಸ್ತ್ರದಲ್ಲಿ  ಶಿಕ್ಷಣ   ತರಭೇತಿಗಳು ವಿಶೇಷ ಬದ್ಧವಾಗಿರುತ್ತವೆ. ಮೊದಲೇ ಹೇಳಿದಂತೆ ಸೈನ್ಯದಲ್ಲಿದ್ದವನನ್ನು ಒಂದು ದಿನದ ಮಟ್ಟಿಗೆ ತರಭೇತಿ ಪ್ರಶಿಕ್ಷಣಾರ್ಥಿಗಳ ಗುಂಪಲ್ಲಿರಿಸಿದರೆ ಅವನಲ್ಲಿಯೂ ಅನೇಕ ಶಿಸ್ತಿನ ಉಲ್ಲಂಘನೆಯನ್ನು ಪಟ್ಟಿಮಾಡಿಬಿಡುತ್ತಾರೆ ಪ್ರಶಿಕ್ಷಕರು (ಮೊದಮೊದಲು ಅಷ್ಟೇ ಶಿಸ್ತಿನಿಂದಿತ್ತು ನನ್ನ ತರಭೇತಿ). ಉದ್ಯೋಗದ ಅತಿಯಾದ ಅಭಾವ, ಹೊಸದಾಗಿ ಸಿಕ್ಕ ಘನವಂತ ನೌಕರಿ, ತಮಗಿಂತಲೂ ವೇಷದಲ್ಲಿಯೂ, ಭಾಷೆಯಲ್ಲಿಯೂ, ಮೂರ್ತಿಯಲ್ಲಿಯೂ, ಜ್ಞಾನದಲ್ಲಿಯೂ, ಹಿರಿಯರಂತೆ ಕಂಗೊಳಿಸುವ ಅಧಿಕವಾಗಿ ಕಾಣುವ ವಿದ್ಯಾರ್ಥಿವೃಂದಕ್ಕೆ ತಮ್ಮನ್ನು ಮರೆಯದಂತೆ ತಮ್ಮ ಗುರುತ್ವವನ್ನು ಅವರು ಆಕರ್ಷಿಸುವಂತೆ ಆಗಾಗ ಮಾಮೂಲಿ ಕೊಡದ ಕಳ್ಳನಿಗೆ ಲೋಭ ಪೋಲೀಸಿನವ ನಡೆಸುವ ವಿಶೇಷ ಸಾಮಾಜಿಕ ದರ್ಪ ಸಂದರ್ಶನದಂತೆ ಗುರುಗಳು ನಿಷ್ಠೂರವಾದಿಗಳಂತೆ ವರ್ತಿಸುತ್ತಿದ್ದರು. ತಾಯ ಮಡಿಲಲ್ಲಿ ಹಾಗ ತಾನೆ ಚಟುವಟಿಕೆಗೆ ಮುಂದಾಗುತ್ತಿರುವ ಹಾಲು ಹಸುಳೆ ಎದುರು ನಿಜ ಭೂತರಾಯನೆ ಬಂದರು ಅದಕ್ಕಾಗುವುದು ಆನಂದವೆ, ಅಂತೆಯೇ ಗುರುಗಳ ನಿಂದಿಸುವಿಕೆ ಅತಿಯಾದರೂ ಕಾಯಿ ವಯಸ್ಸಿನ ಶಿಷ್ಯವೃಂಧಕ್ಕೆ ಅದು ಅಂತ್ಯದಲ್ಲಿ ಹಾಸ್ಯವಾಗಿಯೇ, ಲೇಶಮಾತ್ರವಾಗಿಯೇ ಮುಕ್ತಾಯ ಹೊಂದುತ್ತಿತ್ತು




                       ಅಪ್ಪ ಮಗನಿಗೊಂದು ಜೀವನಕ್ಕೆ ದಾರಿಯನ್ನೇ ಮಾಡಿಕೊಟ್ಟೆನೆಂಬ ಹುರುಪಿನಲ್ಲಿ ಮಾಡಿದ ಸಾಲಕ್ಕೊಂದು ಸಾರ್ಥಕತೆಯ ತೃಪ್ತಿಯಲ್ಲಿದ್ದಾರೆ. ಪ್ರಸ್ತುತ ವರ್ತಮಾನದ ಪ್ರತೀ ವಿಷಯದ ಪೈಪೋಟಿ ಅರಿಯದ ಅವರು ಸಂಬಂಧಿಕರಲ್ಲಿ  ಸರಾಗವಾಗಿ ಮಗನ ನೂತನ ವಿದ್ಯಾಭ್ಯಾಸ ಕುರಿತು ಎದೆಯೇರಿಸಿ, ದೀರ್ಘವಾಣಿಯಲ್ಲಿ ಸಾಧನೆ ಹಂಚಿಕೊಳ್ಳತ್ತಿದ್ದರು. ಮಗನನ್ನು ತಮ್ಮ ದೈನಂದಿನ ಕೃಷಿ ಚಟುವಟಿಕೆಯಲ್ಲಿ ಕರೆಯದಿರುವುದು, ರಾತ್ರಿವೇಳೆ ಹಾಯಾಗಿ ಸ್ನೇಹಿತರೊಂದಿಗೆ ಮನೆಮುಂದಿನ ಜಗಲಿಯಲ್ಲಿ ಹರಟುವಾಗ ಹರಟಿದ್ದು ಸಾಕು ಒಳಬಂದು ಓದಿಕೊಳ್ಳುವಂತೆ ಗದರುವುದು, ಹಣಕೇಳಿದಾಗ ಅಪಾಯ ಕಂಡವರಂತೆ ಆಶ್ಚರ್ಯ ಪಡುತ್ತಿದ್ದವರು ಈಗೀಗ ಕೇಳಿದಷ್ಟಿಲ್ಲವೆಂದು ಇದ್ದಷ್ಟರಲ್ಲಿ ಒಂದಷ್ಟನ್ನು ಕಡಿತಗೊಳಿಸಿ ನೀಡುವುದು ಹಾಸ್ಯವಾಗಿ ತೋರುತಿತ್ತು. ಸಾಲನೀಡುವ ಹಣವಂತನೊಬ್ಬ ಒಂದು ತಿಂಗಳ ಬಡ್ಡಿಯನ್ನು ಮುಂಗಡವಾಗಿಯೇ ಹಿಡಿದು ನೀಡುವ ಹಾಗೆ ಬಾಸವಾಗುತ್ತಿತ್ತು,, ಅವನಾದರೆ ಕೊಟ್ಟದ್ದು ವಾಪಸ್ಸು ಬರುತ್ತದೆಂದು ಕೊಟ್ಟು ಪಡೆದುದರ ಅಭ್ಯಾಸದಿಂದ ತಿಳಿದು ಕೊಡುವಾಗಲೂ ನರಳುತ್ತಲೇ ಕೊಟ್ಟರೆ ನನ್ನ ಜನ್ಮದಾತನಿಗೆ ಅವಕೊಟ್ಟದ್ದನ್ನು ನಾ ಹಿಂತಿರುಗಿಸಿ ಕೊಟ್ಟದ್ದು ಜ್ಞಾಪಕದಲ್ಲಿಲ್ಲ, ಕೊಟ್ಟಿದ್ದರೆ ತಾನೆ!!
      ಎಷ್ಟೋಬಾರಿ ಅವರ ಅನಾರೋಗ್ಯದ ನಿಮಿತ್ತವು ಕಾರ್ಯಾರ್ತವಾಗಿ ಹೊರನಡೆದು ಸಂಜೆಯತನಕ ಅಲೆದಾಡಿ, ವ್ಯವಹರಿಸಿ ಬಸವಳಿದು ಬರುತ್ತಿದ್ದರೆ ವಿನಃ ಅಲ್ಲೆ ಪಕ್ಕದಲ್ಲಿದ್ದ ಆಸ್ಪತ್ರೆಗಿರಲಿ ಪುಟ್ಟ ಹೋಟೇಲಿನಲ್ಲಾದರು 20 ರೂ ವ್ಯಯಿಸಿ ಏನಾದರು ತಿಂದು ತಮ್ಮ ಹಸಿವನ್ನು ದ್ವಂಸಗೊಳಿಸಿ, ಹಾಯಾಸ ನೀರಡಿಕೆಗಳ ಅಲ್ಲೆ ಬಿಟ್ಟು ಹುಮ್ಮಸ್ಸು ಚೈತನ್ಯಗಳನ್ನು ಹೆಗಲೇರಿಸಿಕೊಂಡು ಮನೆಗೆ ಬಂದದ್ದನ್ನು ನಾನಾದರೂ ನೋಡಿಲ್ಲ. “ಎಲ್ಲಾರು 
                (ಸಾಂದರ್ಭಿಕ ಚಿತ್ರ)
ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿವಾಕ್ಯಾರ್ಥದ ನಿಜ ಜೀವನ ಚಿತ್ರಣವನ್ನು  ತಲೆಕೆಳಗಾಗಿಸಿಹನಿ ಹನಿ ಗೂಡಿರೆ ಹಳ್ಳ, ತೆನೆ ತೆನೆ ಸೇರಿರೆ ಬಳ್ಳಎಂಬ ತತ್ವಾನುಕರಣೆಯನ್ನೇ ಜೀವನದಲ್ಲಿ ಪ್ರಾಧಾನ್ಯವಾಗಿಸಿಕೊಂಡ ಪ್ರಮುಖರಲ್ಲಿ ಪ್ರಮುಖ ನನ್ನ ಪಿತ. ಇನ್ನು ದುಂದು ವೆಚ್ಚವಂತು ಸಂಬಂದಪಡದ ವಿಷಯ. ಮನೆಯವರೊಂದಿಗೆ ಗಡಸುತನ, ಕೋಪ, ಅಲ್ಲಲ್ಲಿ ಪ್ರೀತಿ ಮತ್ತು ಇತ್ಯಾದಿ. ಹೊರಗಿನವರೊಂದಿಗೆ ಶಾಂತಿ, ವಿನಯ, ಮುಗ್ದತೆ, ಅಲ್ಲಲ್ಲಿ ಸ್ನೇಹ ಮತ್ತು ಇತ್ಯಾದಿ. ಎದೆಯೆತ್ತರ ಬೆಳೆದ ಮಕ್ಕಳನ್ನು ಹದವಾಗಿ ಕಾಣುವುದಿಲ್ಲವೆಂಬ ನಮ್ಮ ಬಣ್ಣದ ಅಭಿನಯ ಮಾತುಗಳಿಗಿನ್ನ ನಮ್ಮನ್ನು ಎಂದೆಂದೂ ಚಿಕ್ಕವರಾಗೆ ನೋಡ ಬಯಸುವ ಅವರ ಬಿಡದ ದೃಷ್ಠಿಕೋನ ಎಂದೆಂದೂ ನನ್ನಂತರಾಳದಲ್ಲಿಶ್ಲಾಘನಾರ್ಹ’. ಬಾಲ್ಯ ದೂರವಾಗುತ್ತಾ ಅದರಲ್ಲಿನ ಒಂದಷ್ಟು ಸಂಗತಿ, ಪ್ರಸಂಗ, ಸನ್ನಿವೇಶ, ತುಂಟಾಟಗಳು ಎಂದೆಂದೂ ಅಳಿಸಲಾಗದ ಮಚ್ಛೆಯಂತೆ ನೆನಪಾಗಿ ಆಗಾಗ ಕೆಣಕುತ್ತಿರುತ್ತವೆ. ಅದರಲ್ಲಿ ಪ್ರಮುಖವಾಗಿ ಒಂದು ನೆನಪನ್ನು, ಅನುಭವವನ್ನು ಬಂದಹಾಗೆ ಬರೆಯಲೇಬೇಕು.
                                                                               (ಸಾಂದರ್ಭಿಕ ಚಿತ್ರ)
     2015->ಊರಲ್ಲಿದ್ದ 2 ಹೆಚ್ಚೆಂದರೆ 3 ದೂರದರ್ಶನಗಳು ತನ್ನಿಚ್ಛೆಯಂತೆ ಬಂದೋಗುತ್ತಿದ್ದ ವಿದ್ಯುತ್ ರಾಯನೊಂದಿಗೆ ಹತ್ತಿರ ಸಂಬಂದಿಗಳಾಗಿದ್ದವು. ದೂರದರ್ಶನವೆಂಬವನ ಮನೆಗೆ ವಿದ್ಯುತ್ ಎಂಬ ಅತಿಥಿ ಯಾವಾಗ ಬಂದರೂ ಸತ್ಕಾರದಲ್ಲಿ ಕೊಂಚವೂ ಕಮ್ಮಿಯಾಗಲು ಬಿಡುತ್ತಿರಲಿಲ್ಲ ನಮ್ಮ ಹಿಂಡು. ಬಾಲ್ಯ ಕಂಡುಕೊಂಡಿದ್ದ ಮನರಂಜನೆಯ ಉತ್ತುಂಗರೂಪದೂರದರ್ಶನ’, ಕಾರಣ ನಮ್ಮ ಚಲನಚಿತ್ರ ವೀಕ್ಷಣೆಯು ಅದೇ ಚಿತ್ರದ ನಿರ್ದೇಶಕನ ಸೂಕ್ಷ್ಮ ವೀಕ್ಷಣೆಗೂ ಪೈಪೋಟಿ ಕೊಡುವಂತಿತ್ತು. ಜಾಹಿರಾತುಗಳ ದರ್ಬಾರಿನಲ್ಲೂ ಅಕ್ಷಿಯ ನೇರ ಅವಲೋಕನಕ್ಕೆ ಅವಹೇಳನ ಮಾಡದೆ, ಕದಲಿಸದೆ ನೋಡುತ್ತಿದ್ದ ನಮ್ಮ ಅತಿಯಾದ ಏಕಾಗ್ರತೆ ನಿದಿರೆಯನ್ನು ಸಮಯವನ್ನು ದೂರದರ್ಶನದ ಮಾಲೀಕರನ್ನು ಮರೆತು ಅನುರಕ್ತವಾಗಿ, ನೀಲಿ ಸಮುದ್ರದ ಖಾಲಿ ತೀರದಲ್ಲೊಬ್ಬ ಇಳಿಸಂಜೆಯ ಏಕಾಂತವನ್ನು ಅನುಭವಿಸಲು ಏಕಾಂಗಿಯಾಗಿ ಮೈಚಳಿ ಬಿಟ್ಟು ಸೂರ್ಯಾಸ್ತದ ವಿಹಂಗಮ ನೋಟವನ್ನು ಕ್ಷಣಮಾತ್ರವೂ ಬಿಡದೆ ವೀಕ್ಷಿಸಬೇಕೆಂದು ರೆಪ್ಪೆಕದಲಿಸಲೂ ಒಲ್ಲದೆ ತನ್ಮಯನಾಗಿರುವವನ ತಲ್ಲೀನತೆಗೆ ಸರಿಸಮವಾಗೆ ಇತ್ತು. ಮಕ್ಕಳು ಓದಬೇಕೆಂದುಕೊಳ್ಳುತ್ತಿದ್ದ ತಂದೆಯ ಸದಾಶಯಕ್ಕೆ ಅದು ಸ್ವಲ್ಪವೂ ಒಗ್ಗುತ್ತಿರಲಿಲ್ಲ. ಯಾವುದೋ ವ್ಯವಹಾರದ ಗೊಂದಲದಲ್ಲಿ ತಡವಾಗಿ ಮನೆಗೆ ಬಂದವರಿಗೆ ಮಕ್ಕಳು ಕಾಣದಿರಲು ನಮ್ಮ ತಲ್ಲೀನತೆಯ ಹಳೆಯ ಮಾಮೂಲಿ ವಿಚಾರ  ಹೊಳೆದು ಹಳ್ಳಿಯ ಪುಟ್ಟ ಪುಟ್ಟ ಮನೆಚಿತ್ರಮಂದಿರಗಳ ವಿಳಾಸ ಬಲ್ಲ ಅವರ ಕಾಲುಗಳು ಸಾವದಾನವಾಗೆ ಬಿರುಸುತನÀ ತಡೆದು ಬಂದು ನಮ್ಮನ್ನು ಅದಾಗಲೇ ನಿದ್ರೆಹೋಗಿರುತ್ತಿದ್ದ ಅನ್ಯರೆದುರು ತರಭೇತಿಗೊಳಪಡಿಸದೆ ಪೂಸಿಮಾಡಿ ಕರೆದೊಯ್ಯುತ್ತಿದ್ದರು. ಮಧ್ಯರಾತ್ರಿ ಸಮೀಪವಾಗುತ್ತಿದ್ದುದು ಚಲನಚಿತ್ರ ವೀಕ್ಷಣೆಯ ನಡುವೆ ಅದು ನಮ್ಮ ಗಮನಕ್ಕೆ ಬಾರದಿರಲಿಲ್ಲ. ಅನುಭವಿಸುತ್ತಿದ್ದ ಮನರಂಜನೆಯ ಮುಂದೆ, ಮುಂದೆ ಬಂದೊದಗುವ ಬಿಸಿ ಬಿಸಿ ಕಜ್ಜಾಯದ ಹಬ್ಬದೂಟ ಮನದ ಮೂಲೆಯಲ್ಲಿ ಘಮ್ ಎಂದು ಅದಾಗಲೆ ಸುವಾಸನೆ ಬೀರುತ್ತಿದ್ದು ಆಮೇಲೆ ನೋಡಿಕೊಂಡರಾಯ್ತು ಎನ್ನುವ ಉದಾಸೀನತೆಯ ಮಹಾನ್ ಸಾಧನೆ ಗೈದಿದ್ದ ನಮಗೆ ತಂದೆಯು ಅಂತರಾಳದಲ್ಲಿ  ಹಲ್ಲು ಕಡಿಯುತ್ತಿದ್ದುದು ಅನುಭವದಿಂದ ತಿಳಿದು ಅವರ ನಡಿಗೆಗಿನ್ನ ನಮ್ಮ ಓಟ ಮುಂದಾಗಿ ಮುಂದಿನ ಬೆತ್ತಸನ್ಮಾನದಿಂದ ಪಾರಾಗಲೂ ಹಪಹಪಿಸಿದರೂ ತಪ್ಪಿಸಿಕೊಳ್ಳಲಾಗದೆ ಹೂ, ಹಣ್ಣು, ಶಾಲು, ಚಪ್ಪಾಳೆಗಳ ಬದಲು ಹುಡುಕುವುದು, ಹಿಡಿಯುವುದು, ಬೀಸಿ ಒಡೆಯುವುದು ಆಕ್ರಂದನ ಗೈಯ್ಯುವುದು ನಾವು ಮಾಡುತ್ತಿದ್ದ ಅವತ್ತಿನ ಸಾಧನೆಗೆ ಅಂದೇ ಅಭಿನಂದನೆ ದಕ್ಕುತ್ತಿದ್ದ ರೀತಿಯಾಗಿತ್ತು. ಹಸಿ ಬಿದಿರು ಕಡ್ಡಿಯ ಆಶಿರ್ವಾದ ಮಾಡಿ, ಹುಸಿರು ಬಿಡದಂತೆ ಆಜ್ಞೆಮಾಡಿ ಅಡ್ಡಿಯಾಗಿ ಬಂದ ಅಮ್ಮನನ್ನು ತಳ್ಳಿ ಎಲ್ಲೋ ಬಿಸಾಡಿದ್ದ ಪುಸ್ತಕ ಚೀಲವನ್ನು ಚೀರುತ್ತಿದ್ದ ನಮ್ಮಿಂದಲೇ ತರಿಸಿ, ಒಂದೆಡೆ ಕೂರಿಸಿ ಶಾಂತಿಯಾಗುತ್ತಿದ್ದವರು ಮುಂಜಾನೆಯೇ ರಾತ್ರಿ ಕ್ರೌರ್ಯ ಮರೆತು ಪೆಟ್ಟಿನ ಭಾಗಕ್ಕೆ ಹರಳೆಣ್ಣೆ ಹಚ್ಚುವಂತೆ ಅಜ್ಜಿಗೆ ಸಲಹೆ ನೀಡುತ್ತಿದುದು ಮೊನ್ನೆತಾನೆ ತೊಡೆಗಾಯ ಮಾದಂತಿದೆ. “ಅಂದು ದುಃಖಿಸಿದ ನೆನಪುಗಳ ಕಾರಣಗಳು ಇಂದು ನಗು ತರಿಸುತ್ತವೆ, ಅಂದು ನಕ್ಕ ಗಳಿಗೆಗಳ ಸಂಭ್ರಮಗಳು ಇಂದು ಕಣ್ಣು ತುಂಬುತ್ತವೆ”.
ನವೆಂಬರ್
     ಜೀವನ ಬೆಳೆದು ಊರು ದೂರವಾಗಿ ಆಗಾಗ ಹತ್ತಿರವಾಗುವಾಗ ಖಾಯಂ ನಿವಾಸಿತನದ ದಿನಗಳು ಕಾಲೇಜಿನೊಂದಿಗೆ ನನ್ನ ಗ್ರಾಮದ ಬೆಸುಗೆಯನ್ನು ಮನೋಹರತೆಯ ಮುಖ್ಯ ಭೂಮಿಕೆಯಲ್ಲಿ ಮುದ್ದು ಮಾಡುತ್ತವೆ. ನನ್ನ ಊರು ತಿಪ್ಪಲಾಪುರದಿಂದ ಹುಣಸೂರು 6 ಕಿ ಮೀ ಅಂತರವೊಂದಿದ್ದು ಬಂದಿಳಿದ ಪಟ್ಟಣದಿಂದ ನನ್ನ ಛಾಯಾದೇವಿ ಕಾಲೇಜು ಹೆಚ್ಚು ಕಡಿಮೆ 1 ಕಿ ಮೀ ಇತ್ತು. ಸರ್ಕಾರಿ ಗ್ರಾಮೀಣ ಬಸ್ಸಿನ ಅಧೋಗತಿ ಸ್ಥಿತಿ ಅದರ ದುಡಿಮೆಯನ್ನು ಸೂಚಿಸುತ್ತಿತ್ತು. ಕಾಣಸಿಗದ ಸಂಚಾರ ಅನ್ಯ ಮಾರ್ಗಗಳ ಅಭಾವದಿಂದ ಇದ್ದ ಒಂದು ಸಾರಿಗೆ ವ್ಯವಸ್ಥೆಯನ್ನು ಅವಸ್ಥೆ ಅದಗೆಡುವ ಹಾಗೆ ಬಳಸುತ್ತಿದ್ದರು ನನ್ನ ಸಾರ್ವಜನಿಕರು. ವಿದ್ಯಾರ್ಥಿಗಳು, ಹಳ್ಳಿಗರು, ನೆಂಟರಿಷ್ಟರಾದಿಯಾಗಿ ತುಂಬಿಕೊಳ್ಳತ್ತಿದ್ದ ಬಸ್ಸು ತುಂಬು ಗರ್ಭಿಣಿಯಂತೆ ಒಂದು ರೀತಿಯ ಗಾಂಭೀರ್ಯದಿಂದಲೂ ಒಂದು ರೀತಿಯ ಕಷ್ಟದಿಂದಲೂ ಅಂತೂ ನಿಂತವನಲ್ಲಿ ಬೇಸರವನ್ನು ಕೂತವನಲ್ಲಿ ನಿದಿರೆಯನ್ನು ನೀಡಿ ತಲುಪುತಿತ್ತು.         (ಸಾಂದರ್ಭಿಕ ಚಿತ್ರ)
  ಹಳ್ಳ ದಿಣ್ಣೆ ಓರೆ ಕೋರÉಗಳನ್ನು ತನ್ನಿನಿಯನಂತೆ ಕಾಪಾಡಿಕೊಂಡು ಬಂದಿದ್ದ ರಸ್ತೆ ಬಸ್ಸಿಗೆ ಹೇಳಿಮಾಡಿಸಿದಂತಿತ್ತು. ಒಮ್ಮೆ ಉತ್ತಮ ನಂತರವೇ ಅದಮನಾಗುತ್ತಿದ್ದ ರಸ್ತೆ ಹಾಗಾಗ ಸಬಲೀಕರಣಗೊಳ್ಳುತ್ತಿದ್ದರು ಹಳ್ಳಗಳಾಗಿದ್ದ ಹೊಂಡಗಳನ್ನು ಸಮತೆ ಮಾಡುತ್ತಿದ್ದರೇ ವಿನಃ ದೃಢತೆಯ ಕಡೆ ಕಿಂಚಿತ್ತು ಗಮನ ಹರಿಸುತ್ತಿರಲಿಲ್ಲ. ಹಸಿದ ವ್ಯಾಘ್ರ ಸಿಕ್ಕ ಬಡಪಾಯಿಯನ್ನು ಎಳೆದು ಹೀಗೇ ತಿನ್ನಬೇಕೆಂಬ ಕಾನೂನಿಲ್ಲದೆ ಆತುರದಿಂದ ಕರುಣೆ ಮತ್ತು ದಯೆಯ ಮುಲಾಜಿಲ್ಲದೆ ಕೊಸರಾಡುವ, ಕಿರುಚಾಡುವ, ಹೇಗಾದರೂ ಪಾರಾಗಬೇಕೆಂಬ ಅಸಾಧ್ಯ ಸಂಗತಿಯನ್ನು ಸಾಧ್ಯಗೊಳಿಸಲೋಗುವ ಬಡಪಾಯಿಯ ಯತ್ನಕ್ಕೆ ಇನ್ನೂ ಕೋಪಗೊಂಡು ರುಂಡ ಮುಂಡಗಳ ದಾಕ್ಷೀಣ್ಯ ನೋಡದೆ ನಿಮಿಷಗಳಲ್ಲಿ ನೋಡುನೋಡುತ್ತಿದ್ದಂತೆಯೇ ತಿಂದು ಮುಗಿಸಿ ಧನ್ಯನಾಗುವ ಹಾಗೆ ರಸ್ತೆ ಕಾಮಗಾರಿ ಉದಾಹರಣೆಯಾಗುತ್ತದೆ. ದಾಂಬಾರು ರೋಡಿನಲ್ಲಿ ವಾಹನಗಳು ಚಲಿಸುತ್ತಿದ್ದರೆ ತಾಳವಿಲ್ಲದ ಡಮರುಗದ ಮೇಳವಾದಂತೆ ಶಬ್ದವಾಗುತ್ತಿತ್ತು. ಅನೇಕ ವರ್ಷಗಳು ಅನೇಕ ಮಾರ್ಗಗಳಲ್ಲಿ ಜೀವತೇದಿದ್ದ ಬಸ್ಸುರಾಯನ ಗುರ್ರೋ,,,,, ಎಂಬ ರೋದನದೊಂದಿಗೆ ಸುಸ್ತಾದ ಚಲನೆಯುನಾನಿನ್ನು ಹೋಗಲಾರೆನೋ, ನೀವಿನ್ನು ಇಳಿದುಬಿಡಿಎಂದು ಗೋಗರೆವಂತಿತ್ತು. ವಾಹನಕ್ಕೆ ಹೇಳಿಮಾಡಿಸಿದ್ದ ಚಾಲಕನ ಅತಿಯಾದ ಅನುಭವದಿಂದ ಚುರುಕುತನ ಹೋಗಿ ಜಾಗವನ್ನು ಅತಿಯಾದ ಜಾಗರೂಕತೆ ಆವರಿಸಿದ್ದರಿಂದ ಸಮಯದ ವ್ಯತ್ಯಾಸವಾಗುತಿತ್ತೇ ಹೊರತು ಪಟ್ಟಣದ ವೇಗಧೂತ ವಾಹನಕ್ಕೆ ಯೌವ್ವನಿಗನ ಅಪಾಯಭರಿತ ಆತುರದ ಚಾಲನೆ ದೊರೆತದ್ದೇ ಆಗಿದ್ದರೆ  ಹಳ್ಳಿಯಿಂದ ಪಟ್ಟಣಕ್ಕೆ ಬಸ್ಸಿನಲ್ಲಿ ಬಂದ ಸಮಯಕ್ಕೂ ಪಟ್ಟಣದ ಬಸ್ ತಂಗುದಾಣದಿಂದ ಕಾಲೇಜಿನ ಹೊರದ್ವಾರಕ್ಕೆ ಕಾಲ್ನಡಿಗೆಯಲ್ಲಿ ತಲುಪಲು ಅಷ್ಟೇ ಸಮಯವಾಗುತ್ತಿತ್ತು.
   ಸಂಪೂರ್ಣ ಕೃಷಿಯ ಆಡಳಿತದಲ್ಲೇ ಸರ್ವಾಲಂಬಿತವಾಗಿದ್ದ  ನೇಗಿಲ ಕರ್ಮಯೋಗಿಯ ಕುಡಿಯು ನಾನಾಗಿದ್ದರಿಂದ, ಹುಟ್ಟಂದಿನಿಂದಲೇ  ಒಕ್ಕಲುತನದ ಒಂದೊಂದೆ ಕಾರ್ಯಗಳು ಮೈಗೂಡಿಕೊಂಡಿದ್ದವು. ಪೆನ್ನು, ಪುಸ್ತಕ, ಸಮವಸ್ತ್ರ, ಸಮಯ, ಶಿಸ್ತು, ಗೆಳೆಯ-ಗೆಳತಿಯರು, ಗುರುಗಳು, ಕೊಠಡಿಗಳು ಮೊದಲ್ಗೊಂಡ ಶಾಲಾ ಕಾಲೇಜುಗಳ ಔಪಚಾರಿಕ ಶಿಕ್ಷಣದ ಜೊತೆಗೆ ಹೊಲ, ಗದ್ದೆ, ತೋಟ, ಹಸು, ಕರು, ನೇಗಿಲು, ಪೈರು, ಬಾಳೆ, ತಂಬಾಕು ಕೃಷಿಗಳನ್ನೊಳಗೊಂಡ ಅನೌಪಚಾರಿಕ ವ್ಯವಸಾಯ ಶಿಕ್ಷಣವೂ ಪ್ರಾರಂಭದಲ್ಲಿ ಕಷ್ಟವೆನಿಸುತ್ತಿದ್ದು ದೃಢಕಾಯನಾದ ಹೊತ್ತಿಗೆ ಒಲವಾಗಿ ಹೋಗಿದ್ದವು. ಪೂರ್ಣ ಬೆಳಕನ್ನು ಮುಂಜಾನೆ ನೋಡುತ್ತಿದ್ದುದು ಜ್ವರ ಬಂದಾಗಲೇ,, ಇನ್ನೆಲ್ಲಾ ಆರೋಗ್ಯದ ದಿನಗಳು ಮುಂಜಾನೆಯ ಮುಸುಕಿನೊಂದಿಗೆ ಅವಿನಾಭಾವ ಸ್ನೇಹವನ್ನು ಉಳಿಸಿಕೊಂಡು ಎಲ್ಲಾ ಮುದುರಿಕೊಂಡಿರುವಾಗ ಇವನೊಬ್ಬನೇಕೆ ಕೆದರಿಕೊಳ್ಳುವ ಎಂದು ಅವರಿವರ ಬೆನ್ನುಡಿಗೂ ಕಾರಣವಾಗುತ್ತಿತ್ತು.     (ಸಾಂದರ್ಭಿಕ ಚಿತ್ರ)
ಮುಂಜಾನೆಯ ಮಬ್ಬು ಹಾಲು ಬೆಳದಿಂಗಳು ರಾತ್ರಿಯನ್ನಟ್ಟುವ ಹೋರಾಟದಲ್ಲಿ ಜಯಶೀಲವಾಗುವಷ್ಟರಲ್ಲಿ ಬೆಳಕಿನೊಂದಿಗೆ ವಿಲೀನವಾಗುತ್ತಿದ್ದು ಧರೆ ಆಕಾಶದ ನಡುವೆ ಅನಂತಕಾಲದಿಂದ ನಡೆದು ಬರುತ್ತಿದ್ದ ನಾಟಕೋತ್ಸವಕ್ಕೆ ಹೊಸಬೆಳಕುತೆರೆ ಬಿದ್ದು ವಿಶ್ರಮಿಸಿದ್ದವರು ಪರಿಶ್ರಮಿಸಲು ನೂತನ ಪಾತ್ರಧಾರಿಗಳಾಗಿ ಕಂಗೊಳಿಸುವ ಮುನ್ನವೇ ಹಿಮ್ಮೇಳವಾಗಿ ಹಕ್ಕಿಗಳಿಂಚರ ಹಾಗೆ ಗುನುಗಿ ಹೀಗೆ ಮಾಯವಾಗುತ್ತಿರಲು ದನಮನುಕುಲದ ಸಂಭಾಷಣೆಯೇ ಹಳ್ಳಿಗಳಲ್ಲಿ ಪ್ರಾಧಾನ್ಯವಾಗಿಜೀವನಅಥವಾಬದುಕುನಾಟಕ ಕಾಣದ ಭಗವಂತನೆದುರು ಪ್ರದರ್ಶನವಾಗತೊಡಗುತ್ತಿತ್ತು. ಕಾಲಕ್ಕನುಗುಣವಾಗಿ ವ್ಯತ್ಯಾಸಮಯ ಮಂಜುಬೆಳದಿಂಗಳಿನಲ್ಲಿ ಬದುಕು ಪ್ರಾರಂಭವಾಗುವ ಪ್ರತಿನಿತ್ಯದ ಹಾಡು ನೂತನವಾಗಿ ಮತ್ತು ಚೇತನವಾಗಿರುವುದರಲ್ಲಿ ಸಂಶಯವಿಲ್ಲ. ಹಾಗೆಂದು ಬೇಗ ಹೇಳುತ್ತಿದ್ದವರೆಲ್ಲರೂ ಸವಿಯನ್ನೂ ಸವಿಯುತ್ತಿದ್ದರೆಂದಲ್ಲ. ಪಾಪ ಕೈ ಬಿಡದ ಕೆಲಸ, ಸಾಲ ಸೋಲಗಳ ಹರುಷ, ಕಿತ್ತು ತಿನ್ನೊ ಮಡದಿ ಮಕ್ಕಳು, ಮಳೆರಾಯನ ಕಣ್ಣ ಮುಚ್ಚಾಲೆ, ರುಪಾಯಿ ಸಾಲ ಕೊಡಲು ಬಾಯಿ ಬಡಕೊಳ್ಳೋ ಬ್ಯಾಂಕು ಮ್ಯಾನೇಜರನೊಂದಿಗಿನ ಹೊಡೆದಾಟ, ತಂಪನ್ನೆ ತನ್ನತ್ತಿರ ಬರಲುಬಿಡದ ತಂಬಾಕು, ತಾಪತ್ರೆಗಳು ಒಂದೇ ಎರಡೇ,, ಇಂತಹುಗಳ ನಡುವೆ ಮುಂಜಾನೆಯಲ್ಲಿರಲಿ ಹಬ್ಬ ಹರಿದಿನಗಳಲ್ಲಿಯೂ ಕೆಲವು ಅನ್ನದಾತರ ಮುಖ ಹರಳೆಣ್ಣೆಯಿಂದಲೇ ಅಲಂಕೃತವಾಗಿರುವಂತೆ ಬಿಕೋ ಎಂದು ಕಂಗೊಳಿಸುತ್ತದೆ. ಅರೆಮಲೆನಾಡಿನ ಮೈಸೂರು ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣ, ಹೆಗ್ಗಡದೇವನ ಕೋಟೆಯ ರೈತರು ಬೇರೆ ವಲಯದ ರೈತರಿಗೆ ಸಂಪದ್ಬರಿತರಾಗೆ ಕಾಣಿಸುತ್ತಾರೆ. ಅರಸು ನಾಡಿನ ತಂಬಾಕಿನವರು ಹಣವಂತರು, ಮಳೆಯ ಅತಿಯಾದ ಅಭಾವವಿಲ್ಲ, ಒಕ್ಕಲು ತನದಲ್ಲಿ ಬಿಕ್ಕಳಿಸುವವರಲ್ಲ, ಮಣ್ಣ ಗೇಯ್ಮೆಯಲಿ ನಿಸ್ಸೀಮರು, ಮಳೆಬಿಸಿಲೆನ್ನದೆ ಭೂತಾಯೊಡ ದುಡಿಯೋರು ಎಂದೂ ಏನೆಲ್ಲಾ ಅಂದುಕೊಳ್ಳುತ್ತಾರೆಯೋ ಅದೆಲ್ಲ ಗರಿಷ್ಠ ಮಟ್ಟದ ಕಲ್ಪನೆಯೇ,, ವಾಸ್ತವ ಸ್ಥಿತಿಯ ಕನಿಷ್ಠ ಮಟ್ಟದ ಸತ್ಯವೆಂದರೆ ನಮ್ಮವರ ಹಿಡಿಯಷ್ಟು ಲಾಭಕ್ಕೆ ಬಂಡಿಯಷ್ಟು ದುಡಿಮೆ,, ಬಡವನಾಗಲಿ, ಬಹಳದವನಾಗಲಿ ಶ್ರಮಕ್ಕೆ ಬೆವರಿನ ಲೆಕ್ಕವಿಡದೆ, ಸಮಯಕ್ಕೆ ಸರಿಯಾಗಿ ಅನ್ನದೇವಿಯ ಆರಾಧನೆಯಿರದೆ, ಕೆಲಸಕ್ಕೆ ಸಮಯದ ನಿಗಧಿಯಿಲ್ಲದೆ, ದಿಕ್ಕು ಕಾಣದ ಅಲೆಮಾರಿಯಂತೆ, ಚುರುಕು ತನದಿಂದ ನಡೆದು ಸಾಗುತ್ತಿದ್ದ ವೈಖರಿ ಇತ್ತ ಸಾಮಾನ್ಯವಾಗಿ ನಡಿಗೆ ಎನ್ನಲೂ ಆಗುತ್ತಿರಲಿಲ್ಲ, ಇಲ್ಲ ಓಟವೆಂದು ನೇರವಾಗಿ ಹೇಳಲು ಆಗುತ್ತಿರಲಿಲ್ಲ. ಹೇಗೆಂದರೆ ತನ್ನ ರುಜು ಮಾಡುವುದನ್ನು ಕಲಿತವನನ್ನು ಆತ ಅಕ್ಷರಸ್ತನೋ ಅನಕ್ಷರಸ್ತನೋ ಎಂದು ಹೇಗೆ ತರ್ಕಾಲೋಚನೆಯಾಗುತ್ತದೆಯೋ ಹಾಗೆ ಅದು.                                                                                                                                                            
     ಡಿಸೆಂಬರ್->ಈಗ ತಂಬಾಕು ಕಾರ್ಯಚಟುವಟಿಕೆಗೆ ಹಾಗೂ ಬಳಸುವ ವಸ್ತ್ರಗಳ ವಿನ್ಯಾಸ, ವರ್ಣನೆ, ಚಹರೆಗೆ ಗಮನ ಹರಿಸಿದರೆ, ಬರೆಯಲೋದರೆ ಮುಂದಾಗುವ ಮೊದಲ ವಾಕ್ಯಅದರ ಸ್ಥಿತಿ ಹೇಳತೀರದು’!!. ತಂಬಾಕಿನ ಅತಿಯಾದ ಸೇವನೆಯಿಂದ ವ್ಯಕ್ತಿಗೆ ಮಾತ್ರ ಕ್ಯಾನ್ಸರ್ ನಂತಹ ಮಾರಕ ರೋಗಗಳು ಬರುವುದಿಲ್ಲ, ಅದರ ಕೃಷಿ ಚಟುವಟಿಕೆಗೆ ವ್ಯಕ್ತಿಗಳು ಧರಿಸುವ ಬಟ್ಟೆಗಳಿಗೂ ಬರುತ್ತದೆ. ಹೀಗೆ ಇರಬೇಕೆಂಬ ಯಾವುದೇ ರೀತಿ-ನೀತಿ ನಿಯಮಗಳಿರುವುದಿಲ್ಲ ಅವಕ್ಕೆ. ದನದ ಕೊಟ್ಟಿಗೆಯ ಸೂರಿನಲ್ಲಿಯೋ, ಮನೆಯ ಉಗ್ರಾಣದ ಸಂಧಿಯಲ್ಲಿಯೋ ಸಿಲುಕಿ ನಾಗರೀಕತೆಯನ್ನು ಮರೆತು ಬಿಟ್ಟಿರುತ್ತವೆ. ಗರಿಗರಿಯಾಗಿದ್ದ, ಘಮಘಮವೆನ್ನತ್ತಿದ್ದ, ಧರಿಸಿ ಮೆರೆಯಬೇಕೆಂದು ಅವನ್ನು ಕೊಂಡುಕೊಂಡು ಬಂದಾಗ ಮಾಮೂಲಿ ನೂತನ ಶರ್ಟು ಪ್ಯಾಂಟಿಗಿರುವ ಘನತೆ ಗೌರವಗಳು ಅವಕ್ಕೂ ಇದ್ದವು. ಅವು ಎಲ್ಲಾ ರೀತಿಯ ಷೋಕಿಗಳನ್ನು ಕಂಡಿದ್ದವು. ಒಗೆಸಿಕೊಳ್ಳವುದು, ಇಸ್ತ್ರಿ ಮಾಡಿಸಿಕೊಳ್ಳುವುದು, ಹಬ್ಬ ಹರಿದಿನಗಳಲ್ಲಿ, ಮಧುವೆ ಮುಂಜಿಗಳಲ್ಲಿ ವ್ಯಕ್ತಿಯ ಕೀರ್ತಿಯನ್ನು ಇಮ್ಮಡಿಗೊಳಿಸುವುದು ಮೊದಲಾಗಿ ಮೆರೆದಿದ್ದವು ಬರಬರುತ್ತಾ ಸವೆದು, ಹರಿದು ಸ್ಮಶಾಣ ಸೇರುವ ಮುನ್ನ ತಂಬಾಕಿನ ಕಾರ್ಯ ಚಟುವಟಿಕೆಗಳಲ್ಲಿ ತಮ್ಮ ವೃದ್ಧಾಪ್ಯ ಕಳೆಯುತ್ತಿದ್ದವು. ಷರ್ಟು ಇನಿಯಳಾದರೆ ಪ್ಯಾಂಟು ಇನಿಯನಾಗಿದ್ದನು. ಯೌವ್ವನದ ದಿನಗಳಲ್ಲಿ ಒಬ್ಬೊರನ್ನೊಬ್ಬರು ಬಿಡದಂತಿದ್ದವರು ಈಗ ತಮ್ಮನ್ನು ತಾವೆ ಗುರುತಿಸಲಾಗದ ಸ್ಥಿತಿಗೆ ತಲುಪಿದ್ದರು. ಕಾಲ ಕ್ರಮೇಣ ಯಾರದೋ ಇನಿಯ ಇನ್ನಾರಿಗೋ ಪ್ರಿಯಕರನಾಗಿ ಹೊಸ ಅನುರಾಗದಿಂದ ಹಿಗ್ಗುತ್ತಿದ್ದರೆ ಇನ್ನಾರದೋ ತೆಕ್ಕೆಯಲ್ಲಿ ಅವನ ಪ್ರಿಯತಮೆ ಮಳೆಯೆನ್ನದೆ ಬಿಸಿಲೆನ್ನದೆ ಹಗಲೆನ್ನದೆ ಇರುಳೆನ್ನದೆ ಹೊಸ ಇನಿಯನೊಂದಿಗೆ ಹೊಂದಿಕೊಳ್ಳಲಾಗದೆ ವಿಚ್ಛೇದನಕ್ಕೆ (ಸಾವು) ಸಿದ್ದಳಾಗುತ್ತಿದ್ದಳು. ಬದುಕಿದ್ದವೇ ವಿನಃ ಬಾವನೆ ಬಣ್ಣಗಳೆಲ್ಲ ಮುಗಿದ ಅಧ್ಯಾಯವಾಗಿ ಸಮಾಜದಲ್ಲಿ ಯಾವುದೇ ಸ್ಥಾನ ಮಾನವಿಲ್ಲದೆ, ಶ್ರಮಕ್ಕೆ ಪ್ರತಿಫಲವಿಲ್ಲದೆ, ಶುದ್ಧವಾದ ಮೇಲ್ವರ್ಗದ ವಿಶ್ರಾಂತಿ ಗೃಹವಿಲ್ಲದೆ ಕಸವಾಗಿ ಹೋಗಿದ್ದವು. ಹೊಸದಾಗಿ ಬಂದಾಗ ತೆಳ್ಳಗೆ ಬೆಳ್ಳಗೆ ಇದ್ದಂತಹ ಉಡುಪುಗಳು ಈಗ ತಮ್ಮ ತೂಕವನ್ನು ಮೂರು ಪಟ್ಟು ಹೆಚ್ಚಿಸಿಕೊಂಡಿದ್ದವು. ಹೆಚ್ಚುವರಿ ತೂಕ ಮಣ್ಣಿನ ಮಗನ ಪರದಾಟವನ್ನು ಪ್ರದರ್ಶಿಸುತ್ತಿತ್ತು. ‘ತಂಬಾಕು ರೈತನನ್ನು ಅಧ್ಯಯನ ಮಾಡಲೋಗುವವನಿಗೆ ದುಡಿಮೆಯ ನೇರ ಸಾಕ್ಷಿಯಾಗಿ ಹೆಚ್ಚುವರಿ ತೂಕ ಕಂಡು ಕಂಬನಿ ಮಿಡಿಯಲು ಪ್ರಚೋದಿಸಿದರು ಸಾಮಾನ್ಯನಿಗೆ ಕೇವಲ ಕೊಳೆಯಾಗಿ ಕಾಣುತಿತ್ತು. ‘ದುಡಿಮೆಎಂದು ನೋಡುವಾಗ ಬೆವರು, ಶ್ರಮದಾನ, ದಣಿವು, ಕಣ್ಣೀರು, ಸಮಯದೊತ್ತಡ, ಬಟ್ಟೆಗಳಲ್ಲಿ ಅಡಕವಾಗಿದ್ದ ರೈತನಸುಖವಾಗಿ ಕಾಣುತ್ತಿತ್ತು. ‘ಕೊಳೆಎಂದು ನೋಡುವಾಗ ಮಣ್ಣು, ಧೂಳು, ಹೊಗೆಸೊಪ್ಪಿನ (ತಂಬಾಕು) ಅಂಟು, ಗಲೀಜುತಾಂಡವವಾಡುತಿತ್ತು. ತಂಬಾಕಿಗೆ ಬಳಸುವ ವಸ್ತ್ರಗಳ ಸ್ಥಿತಿಯೇ ಇಷ್ಟು ಸೋಚನೀಯವಾಗಿರಬೇಕಾದರೆ ಹೊಳೆಯುತ್ತಿದ್ದ ವಸ್ತ್ರಗಳನ್ನು ಕೊಳೆಯ ಬೀಡಾಗಿ ಪರಿವರ್ತಿಸಿ, ಎಸೆಯಲು ಮನಸಾಗದೆ ಮರಳಿ ಮರಳಿ ಮರಳಿ ತೊಟ್ಟು, ಇನ್ನೂ ನಗುತ್ತಿರುವ ರೈತನ ಪಾಡು ಇನ್ನೆಷ್ಟು ರೋಚಕವಾಗಿರುತ್ತದೆ. ಇನ್ನೆಷ್ಟು ಯಾತನೀಯವಾರುತ್ತದೆ. ಇನ್ನೆಷ್ಟು ನಿರ್ದಾಕ್ಷೀಣ್ಯವಾಗಿರುತ್ತದೆ. ಇನ್ನೆಷ್ಟು ಚಿಂತನಾರ್ಹವಾಗಿರುತ್ತದೆ. ಇನ್ನೆಷ್ಟು ಕಷ್ಟ ಕೋಟಲೆಗಳಿಂದ ನಿಗೂಢವಾಗಿರುತ್ತದೆ. ಇನ್ನೆಷ್ಟು ಹೀನಾಯ ಸ್ಥಿತಿಯಲ್ಲಿ ರೈತ ಸುಖದ ನೆರಳನ್ನು ನರಳಿ ನೋಡುತ್ತಿದ್ದಾನೆ. ಭಗವಂತ ಯಾರಿಗಾದರೂ ಒಳಿತನ್ನು ಬೇಗ ಮಾಡುತ್ತಾನೆಂದರೆ ಅದು ರೈತನಿಗೆ ಮಾಡಲಿ. ಯಾಕೆಂದರೆ ಒಟ್ಟಾರೆ ಸಮಾಜದ ವ್ಯವಹಾರಗಳಲ್ಲಿ ಎಲ್ಲರೂ ಮೂಲವಾಗಿ ಕಿತ್ತು ತಿನ್ನುವುದು ರೈತನನ್ನೆ,,,
          ಶಿಸ್ತುಬದ್ಧವೆನಿಸುವ ಅಶಿಸ್ತಿನ ಬೆಳೆ ತಂಬಾಕು. ಕರ್ನಾಟಕದ ಎಲ್ಲ ವ್ಯವಹಾರಿಕ ಬೆಳೆಗಳ ಪೈಕಿ ಇದರಷ್ಟು ಪರದಾಟ, ಕಠಿಣ, ಶ್ರಮ, ಬೇರೊಂದು ಬೆಳೆ ಬೇಡುವುದಿಲ್ಲವೆನಿಸುತ್ತದೆ. ಮನೆಯಲ್ಲಿನ ಮಕ್ಕಳನ್ನು ಕೂಡ ಅನೇಕ ಕಾರ್ಯಗಳಿಗೆ ಬಳಸುವುದು ಅನಿವಾರ್ಯವಾಗುತ್ತದೆ. ಬಾಲ ಕಾರ್ಮಿಕ ನೀತಿ ಮಾತ್ರ ಅನ್ವಯಿಸುವುದಿಲ್ಲ. ಏಕೆಂದರೆ ತಮ್ಮ ತಮ್ಮ ಮನೆಯ ಕೆಲಸಗಳನ್ನು ಬಾಲ್ಯದಿಂದಲೇ ಮಾಡುತ್ತಾ ಬಂದರೆ ತಾನೆ ಅದು ಕರಗತವಾಗೋದು. ಜೊತೆಗೆ ಇಲ್ಲಿ ದೌರ್ಜನ್ಯವಿಲ್ಲ. ಅಪ್ಪ ಅಮ್ಮನೊಂದಿಗೆ ಅವರಿಗೆ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡಬೇಕೆಂದು ಮಕ್ಕಳ ಮನಸಿನಲ್ಲೇ ಮೂಡುತ್ತದೆ. ಶಾಲಾ ಕಾಲೇಜುಗಳಿಗೆ ಹೋಗುವುದರ ಜೊತೆಗೆ ಉಚಿತದ ಸಮಯದಲ್ಲಿ ಕೃಷಿ ಚಟುವಟಿಕೆಗೆ ಕೈಜೋಡಿಸುವುದು ಯಾವ ರೀತಿಯಲ್ಲಿ ಬಾಲ ಕಾರ್ಮಿಕ ನೀತಿಗೆ ವಿರುದ್ಧವಾಗುತ್ತದೆ. ಅಲ್ಲಿ ಪ್ರಶ್ನೆಯೇ ಬರುವುದಿಲ್ಲ (ಸಾಂದರ್ಭಿಕ ಚಿತ್ರ)

       ನಾನು ಗಮನಿಸಿದಂತೆ ತಂಬಾಕಿನಲ್ಲಿ ನಿಯಮ ಬದ್ಧವಾಗಿಯೇ ಕೆಲಸಗಳು ನಡೆಯಬೇಕೆಂದಿದ್ದರೂ ಅದು ಹಾಗೆ ನಡೆಯುವುದಿಲ್ಲ. ಬೇಕಾದಾಗ ಮಳೆಬೀಳದೆ, ಬೇಡವೆಂದಾಗ ಅತಿಯಾಗಿ ವರುಣ ಸುರಿದು ಇಡೀ ವರ್ಷವೇ ರೈತ ಪೂರ್ತಿ ಬೇಸಾಯದಲ್ಲಿ ನಷ್ಟಹೊಂದಿ ಮಾಡಿದ ಅಧಿಕ ಖರ್ಚಿನ ಸಾಲಬಾದೆ ತಾಳದೆ ಆತ್ಮಹತ್ಯೆಗೂ ವಾಲುವುದು ಅಲ್ಲಲ್ಲಿ ನಡೆಯುತ್ತಿದ್ದು ಅದು ಅವಮಾನಕರ ವಿಷಯವಾಗಿದೆ. ತಂಬಾಕಿಗೆ ಕೇವಲ ಜಮೀನಿದ್ದರೆ ಸಾಲದು. ಕೈಗಾರಿಕೆಗಳ ಗೋಡನ್ನಿನಂತೆ ಸಣ್ಣ ಗೋಡನ್ನುಗಳ ಅವಶ್ಯಕತೆ ಇದ್ದು ಅದನ್ನು ಪ್ರಗತಿಪರ ರೈತರು ಹೊಂದಿದ್ದು ಸ್ವಲ್ಪ ನೆಮ್ಮದಿಯಾಗಿ ಕಷ್ಟಪಟ್ಟರೆ, ಸವಲತ್ತುಗಳನ್ನು ಹೊಂದಿಲ್ಲದವರು ಇಳುವರಿ ಇದ್ದರು ಅದನ್ನು ಕಾಪಾಡಿಕೊಳ್ಳಲಾಗದೇ ಕೈತಪ್ಪಿ ಹೋಗಿ ಪರಿತಪಿಸುತ್ತಾರೆ. ಕಬ್ಬಿಗೆ ನೀಡುವ ಹಾಗೆ ಯಾವುದೇ ಬೆಂಬಲ ಬೆಲೆ ತಂಬಾಕಿಗಿಲಲ್ಲ. ಹೊಗೆಸೊಪ್ಪು ಬೆಳೆಗಾರರನ್ನು ಸರಕಾರ ಗಮನಿಸಿದಂತೆ, ಅವರ ಏಕೀಕರಣಕ್ಕಾಗಿ ನಿಯಮಗಳನ್ನು ರೂಪಿಸಿದ್ದುದು ವರ್ತಮಾನದಲ್ಲಿ ನಾನಾದರೂ ಕೇಳಿಲ್ಲ.
       ಜನವರಿ 2016- ಒಬ್ಬ ಮತಬೇಡುವವನು ಚುನಾವಣೆಯ ಸಮಯದಲ್ಲಿ ಓಟುಗಳನ್ನು ಕಲೆಹಾಕುವುದಕ್ಕಾಗಿ ಏನೇನು ಆಮೀಷಗಳನ್ನು ನೀಡಿ, ಹಾಗೋ ಹೀಗೋ ಗೆದ್ದು ಮರಳಿ ಬಾರದೇ ಅಪರೂಪವಾಗುವ ಹಾಗೆ ಇಡೀ ಮಾರುಕಟ್ಟೆಯ ಸಂದರ್ಭದಲ್ಲಿ ನಿಗಧಿತ ಉತ್ತಮ ಬೆಲೆ ನೀಡದೇ ಕೊನೇಗಳಿಗೆಯಲ್ಲಿ ಎಲ್ಲವನ್ನು ಅಷ್ಟಿಷ್ಟು ಬೆಲೆಗೆ ಬಿಕರಿ ಮಾಡಿ ಉಳಿದಿದ್ದ ಸ್ವಲ್ಪ ಬೆಳೆಗೆ !! ಎನ್ನುವ ಹಾಗೆ ತಕ್ಕಮಟ್ಟಿನ ಬೆಲೆ ನೀಡಿ, ಮುಂದಿನ ವರ್ಷ ಬೇಗ ಬೇಗ ತಂಬಾಕಿನ ಬೆಳೆಗೆ ಇನ್ನೂ ಸಾಲಮಾಡಿ ಬೆಳೆದು ತಂದವನಿಗೆ ಮತ್ತೇ ಅದೇ ರಾಗ.
ರೈತನ ಹಣೆಬರಹ ಸರಿಯಿದ್ದು ಬೆಳೆದ ಗರಿಷ್ಠ ಪ್ರಮಾಣಕ್ಕೆ ಉತ್ತಮ ಬೆಲೆಯಿದ್ದ ಸಂದರ್ಭದಲ್ಲಿ ಸರ್ವ ಸೌಲಭ್ಯಗಳು ನಿಯಮಿತವಾಗಿ ದೊರೆತು ಪ್ರತಿಫಲ ಸಿಕ್ಕರೆ ಅವನೇ ಪುಣ್ಯವಂತ. ವರ್ಷದಿಂದ ವರ್ಷಕ್ಕೆ ಸಾಲಗಾರರ ಸಂಖ್ಯೆ ಹೆಚ್ಚಾಗುತ್ತಿದ್ದು ಮಾಡಿದ ಸಾಲದ ಬಡ್ಡಿಯು ದ್ವಿಗುಣಗೊಂಡು ಕೆರೆಯಲ್ಲಿಯೇ ದಡದಿಂದ ದಡಕ್ಕೆ ಈಜಲಾಗದಿದ್ದವನು ಈಗ ಹೊಳೆಯಲ್ಲಿ ದಡದಿಂದ ದಡ ಸೇರುವ ಪ್ರಯತ್ನ 
 (ಸಾಂದರ್ಭಿಕ ಚಿತ್ರ)
ಮಾಡುತ್ತಿದ್ದಾನೆ. ದಿನಗೂಲಿಯಿಂದ ಹಿಡಿದು ರಾಸಾಯನಿಕ ಗೊಬ್ಬರದವರೆಗೂ ಬೆಲೆ ಕೇಳಿದರೇ ಬಾಯ್ ಮೇಲೆ ಬೆರಳಿಡಬೇಕು. ಅದೂ ಕೂಡ ನಿಗಧಿತÀ ಸಮಯಕ್ಕೆ ದೊರಕುವುದೇ ಅಪರೂಪ. ಹಿಂದೆ ಬೆಳೆಯುತ್ತಿದ್ದ ಹುರುಳಿ, ಶೇಂಗ, ರಾಗಿ, ಹತ್ತಿ, ತರಕಾರಿ ಬೆಳೆಗಳು, ತೋಟಗಾರಿಕೆ ಬೆಳೆಗಳು, ನೀಡುತ್ತಿದ್ದ ನೆಮ್ಮದಿ ಇಂದು ತಂಬಾಕಿನಿಂದಿಲ್ಲ. ಬೇಳೆ ಉತ್ತಮವಾದುದೆ, ಅದರಲ್ಲಿ ಎರಡು ಮಾತಿಲ್ಲ. ಆದರೆ ಅದಕ್ಕೆ ಮಾರುಕಟ್ಟೆಯ ಲೋಪದೋಷಗಳು ಅನೇಕ, ಅನೇಕ. ಸಾಂಪ್ರದಾಯಿಕ ಬೆಳೆಗಳಲ್ಲಿ ಖರ್ಚು ಕಡಿಮೆ,. ಆದಾಯವೂ ಕಡಿಮೆ. ರೈತನಿಗೆ ಹಿಂಸೆಯಾಗದೆ, ಒಡಲನ್ನು ಹಿಸುಕದೆ, ಜೀವನ ಹಯಾಗಿದೆ ಎನ್ನುವ ಅನಿಸಿಕೆ ಇರುತ್ತದೆ. ಆದರೆ ತಂಬಾಕಿಗೆ ಒಮ್ಮೊಮ್ಮೆ ಉತ್ತಮ ಬೆಲೆ ದೊರಕಿ ಅದರಿಂದ ರೈತನ ಕನಸುಗಳು ನನಸಾಗುತ್ತವೆಂದೂ ಹಗಲುಗನಸು ಕಂಡರೂ ಮಳೆ ಮತ್ತು ಮಾರುಕಟ್ಟೆಯ ಜೊತೆಗೆ ಸರ್ಕಾರದ ನಿರ್ಲಕ್ಷ್ಯದಿಂದ ಸುಳ್ಳಾಗುತ್ತದೆ. ಮನೆ, ಮಕ್ಕಳು, ಮಡದಿಯಿಂದಿಡಿದು ಸರ್ವಸ್ವವನ್ನು ಪಣಕ್ಕಿಟ್ಟ ಹಗಲಿರುಳ ದುಡಿಮೆಗೆ ತಕ್ಕ ಪ್ರತಿಫಲ ಸಿಗಲಿ, ನಾನು ಒಬ್ಬ ರೈತನ ಮಗನಾದ್ದರಿಂದ ಅದರ ಒಳ ಆಂತರ್ಯದ ಏರುಪೇರುಗಳು ನನಗೆ ಚನ್ನಾಗಿ ಕಾಣಿಸುತ್ತವೆ. ಇದು ಅಭಿನಯವಲ್ಲ, ಅನುಭವ,, 
    ಮಗ ಕೈಗೆ ಬಂದನೆಂದರೆ ಅಪ್ಪ ತನ್ನ ಮೈಗೆ ತುಸು ವಿಶ್ರಾಂತಿಕೊಡಲು ಶುರುಮಾಡುವುದು ಆತನಿಗೊಂತರ ಹಿತ ಮತ್ತು ವಯಸ್ಸಾಗಿರುವುದರ ಸಂಕೇತ. ಮಗನನ್ನು ಜವಬ್ದಾರಿಯುತನನ್ನಾಗಿ ಮಾಡುವ ತರಭೇತಿ. ಹಾಗೆ ಮಾಡದಿದ್ದರೆ ಕೆಲವೊಮ್ಮೆ ಅರಿತು ನಡೆವ ಮಕ್ಕಳಾಗದಿದ್ದಲ್ಲಿ ಗೆಯ್ಮೆಯನ್ನು ಹಿಂಸೆಯೆಂದು ಪರಿಗಣಿಸಿ ದುಡಿವ ಸಾಮಥ್ರ್ಯವಿರುವವರೆಗೂ ತಂದೆಯಲ್ಲೆ ದುಡಿಸಿ ನಂತರ ಆಸ್ತಿಯನ್ನು ಮಾರಿತಿನ್ನುವ ಹಾಗಾಗಲೂ ಬಹುದು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬಂತೆ ಬಾಲ್ಯದಿಂದಲೇ ಮೇಣಿ [ನೇಗಿಲ ಹಿಡಿಯುವ ಜಾಗ] ಹಿಡಿಯುವ ಕೌಶಲ್ಯ ಕರಗತವಾಗಬೇಕು. ತಂದೆಯೇ ಗುರು. ಉಳುವ ಗೋವುಗಳು, ಬಾರುಕೋಲು, ನೇಗಿಲು, ಭೂತಾಯಿ, ಮಳೆ, ಫಸಲು, ಬಿಸಿಲು, ಬೆವರು, ಇವೇ ಮೊದಲಾಗಿ ಕಲಿಕೋಪಕರಣಗಳ ಜೊತೆಗೆ ಪಾಠಶಾಲೆಯೂ ಹೌದು. ದುಡಿಮೆಯೆಂಬುದು, ಉಳುಮೆಯೆಂಬುದು, ಒಕ್ಕಲುತನವೆಂಬುದು ಪದವಿ ಪಡೆದು ಆಯ್ಕೆಯಾಗುವುದೇ? ಅದು ಸಜ್ಜನ ರೈತ ಕುಟುಂಬದಲ್ಲಿ ಬೆಳೆದ ಸಂತತಿಗೆ ತಲೆಮಾರಿನ ಅನುಕರಣೆಯೂ, ಅವಶ್ಯಕತೆಯೂ, ಜವಬ್ದಾರಿಯೂ, ಸತ್ಕಾರ್ಯವೂ, ಅನಿವಾರ್ಯವೂ ಮತ್ತು ಉತ್ತಮ ಕಲಿಕೆಯೂ ಹೌದಾಗಿ ಅನ್ನದಾತನಾಗಿಸುತ್ತದೆ. ಪ್ರತಿನಿತ್ಯವೂ ನೇಗಿಲಯೋಗಿಗೆ ಮುಂಜಾನೆದ್ದು ಭಗವಂತನ ನೆನೆದು ಗೋವುಗಳ ಗೆಜ್ಜೆನಾದದೊಂದಿಗೆ ಅವುಗಳ ಒಡನಾಟದಿಂದ ಒಡಮೂಡುವ ನೆಮ್ಮದಿಯೇ ಬೇರೆ. ವ್ಯವಸಾಯವನ್ನು ಒಲವಾಗಿಸಿಕೊಂಡ ರೈತ ಸಂಬಂಧಿಕರಿಗಿನ್ನ ಹೆಚ್ಚು ಪ್ರೀತಿಯಿಂದ ಕಾಮಧೇನುವನ್ನು ಕಾಣುತ್ತಾನೆ (ಸಾಂದರ್ಭಿಕ ಚಿತ್ರ)
     ಉಳುಮೆಯಿಂದಿಡಿದು
     ಹಾಲೆರೆವ ದೈವ, ನಿಜಕು
     ರೈತನಿರುಳ ಬದುಕ ಹಗಲು,,
     ತೊದಲಾಡೋ ಕರುಳಕುಡಿ
     ಪದವಾಡೋ ಬಾವ, ಬದುಕು   
     ಧನ್ಯವೆನಿತಂತೆ ತಾಯ ಮಡಿಲು,,
    ಪಶುಗಳ ಕೊಟ್ಟಿಗೆಗೂ ಮನುಜರ ಹಟ್ಟಿಗೂ ಹಳ್ಳಿಗಳಲ್ಲಿ ಷರ್ಟು ಪ್ಯಾಂಟಿನ ಸಂಬಂಧ. ನನ್ನ ಮನೆಯ ಮುಂಬದಿಯಿಂದ ಗೃಹ ಮಾತ್ರ ಶೋಭಿತವಾಗುತ್ತಿತ್ತೇ ವಿನಃ ಅಂತಹ ಯಾವುದೇ ಗೋವು ವಿಶ್ರಾಂತ ನಿಲಯ ಕಾಣಿಸುತ್ತಿರಲಿಲ್ಲ. ಒಬ್ಬನ ಪಾಸ್ಪೋರ್ಟ್ ಭಾವಚಿತ್ರದಲ್ಲಿ ಮುಖಬಾವದೊಂದಿಗಿನ ಜೊತೆಗೆ ಆತನ ಷರ್ಟು ಕಾಣಬಹುದು, ಹಾಗೆಂದ ಮಾತ್ರಕ್ಕೆ ಆತ ಪ್ಯಾಂಟನ್ನೇ ಧರಿಸಿಲ್ಲವೆಂದಲ್ಲವಲ್ಲ ಹಾಗೆ!!

ಫೆಬ್ರವರಿ:- (.e) iಠಿಟomo iಟಿ euಛಿಚಿಣioಟಿ.. ಶಿಕ್ಷಕ ತರಭೇತಿ ಶಿಕ್ಷಣ ಸಂಸ್ಥೆಗಳು ಜೀವನದುದ್ದಕ್ಕೂ ಅಲ್ಲಿ ಶಿಕ್ಷಣಪರ ಕಾಲ ಕಳೆದ ವ್ಯಕ್ತಿಗಳಲ್ಲಿ ಮಿಂಚಿಹೋದ ಹೊಳಪಿನಂತೆಇನ್ನಿಲ್ಲ ಸಮಯವೆಂದು ಆಗಾಗ ಜ್ಞಾಪಕವಾಗುವುದು ಸರ್ವೇ ಸಾಮಾನ್ಯ. ಅಲ್ಲಿ ಹಕ್ಕಿಗಳಿಂಚರವಿಲ್ಲದಿದ್ದರೂ ಮುದವೆನಿಸುತ್ತದೆ, ಕಾನನವಲ್ಲವಾದರೂ ತಂಪೆನಿಸುತ್ತದೆ, ಸಂತೆಯಲ್ಲವಾದರೂ ನಿಶ್ಯಬ್ಧ ಅಸುನೀಗಿರುತ್ತದೆ, ರಕ್ತ ಸಂಬಂಧವಿಲ್ಲದಿದ್ದರೂ ಬಾಂಧವ್ಯ ಮನೆಮಾಡಿರುತ್ತದೆ, ಶಿಸ್ತು ಒಮ್ಮೊಮ್ಮೆ ಅತೀ ಎನಿಸಿದರು ಈಗ ಮತ್ತೆ ಬೇಕೆನಿಸುತ್ತದೆ, ಪ್ರಸ್ತುತ ಸ್ನೇಹಿತರೆಲ್ಲರೂ ಮರೆಯಾಗಿದ್ದರೂ ಮಗ್ಗಲಿನಲ್ಲಿದ್ದ ಅಂದಿನ ನೆನಪು ಇಂದು ಮಗ್ಗಲು ಬರಲು ಅಪ್ಪಣೆ ಕೇಳಿ ಮಾಯಾಜಿಂಕೆಯಾಗುತ್ತದೆ, ಒಟ್ಟಿನಲ್ಲಿ ಎಂದಿಗೂ ಮರೆಯಾಗದ ನೆನಪು ಜೀವಂತವಾಗಿರುತ್ತದೆ.
    ಈಗ ಮಾತನಾಡಬೇಕೆನಿಸುವ ವಿಷಯ ನನ್ನ ಅಂದಿನ ಪ್ರಾರ್ಥನಾ ಸಭಾಂಗಣ. ಪ್ರತಿಯೊಂದು ಶಾಲೆಯ, ಕಾಲೇಜಿನ ಪ್ರಾರ್ಥನಾ ರೀತಿ ನೀತಿಗಳು ಬೇರೆ ಬೇರೆಯೇ ಆಗಿರುತ್ತವೆ. ಅದು ಅಲ್ಲಿನ ಗುರುವಿನ ಮೇಲೆ ಅವಲಂಭಿತವಾಗಿರುತ್ತದೆ. ಹಾಗೆಯೇ ಪ್ರಾರ್ಥನೆ ಮಾಡಲು ಇರುವ ಜಾಗ, ಪ್ರಾರ್ಥಿಸುವವರ ಸಂಖ್ಯೆ, ತರಗತಿ, ಗುರುಗಳು, ಪ್ರಾರ್ಥನಾ ಗೀತೆ, ಎಲ್ಲವೂ ಕಲಿಕೆಯ ವಿಭಿನ್ನತೆಗೆ, ಸಭೆಯ ಶಾಂತಿಗೆ, ಕಲಿಕಾರ್ಥಿಯ ಶಿಸ್ತಿಗೆ, ಎಷ್ಟು ಪ್ರಯೋಜನವಾಗಿದೆ ಎಂಬುದನ್ನು ಅಳೆಯುತ್ತದೆ. ನಾನು ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಉತ್ತಮ ಗುರುಗಳ ಕೃಪಾ ಕಟಾಕ್ಷದಿಂದ ಒಂದಷ್ಟು ಮೌಲ್ಯಗಳನ್ನು ಮೆತ್ತಿಕೊಂಡದ್ದರಿಂದ ಇಂದು ತರಭೇತಿ ಸಂಸ್ಥೆಯ ರೀತಿ ನೀತಿಗಳು ಹೆಚ್ಚೆನಿಸಿರಲಿಲ್ಲಆದರೂ ಕಾಲೇಜಿನ ವಾತಾವರಣವಂತು ಮೊದಮೊದಲು ಹಳೇ ಗುಜರಿಮಾಲಿನ ರಾಜಧಾನಿಯಂತಿದ್ದದ್ದು ಅಲ್ಲೆ ಅಲೆಯುವುದು ಹೆಚ್ಚಾಗುತ್ತಿದ್ದಂತೆ ನಮ್ಮದೇ ಟೀ ಅಂಗಡಿಯೆನ್ನುವಂತೆ ಭಾಸವಾಗತೊಡಗಿತು. ಹೀಗೂ ಇರಬಹುದಾ ಎನ್ನುವಂತಿದ್ದ ಪರಿಸರ ಈಗೀಗ ನಂಟು ಕಳೆದುಕೊಳ್ಳಲು ಸಿದ್ದವಿಲ್ಲ ಎಂದು ಮುಂಜಾಗೃತೆ ಇಲ್ಲದ ಇರುಳುಗನಸಿನಲ್ಲಿ ಆಗಾಗ ಇಣುಕಿ ನೋಡುವ ಖಯಾಲಿಯನ್ನು ಮೈಗೂಸಿಕೊಂಡಿದೆ. ಹುಣಸೂರಿನ ಗಲ್ಲಿ ಗಲ್ಲಿಯನ್ನು ಕಾಲ್ನಡಿಗೆಯಲ್ಲಿ ಸುತ್ತಾಡುತ್ತಿದ್ದಾಗಿನ ಸಂತೋಷ ಇಂದು ಬೈಕಿಗೆ ಬಡ್ತಿಹೊಂದಿದ್ದು ಕಾಲೇಜಿನೆದುರು ಸಾಗುವಾಗ ಅದೇಕೋ ಭಾವುಕತೆಯನ್ನು ಉನ್ಮಾದವಾಗಿ ಪರಿವರ್ತಿಸಿಕೊಂಡು ಕಂಬನಿ ಗರೆಯಲು ಯತ್ನಿಸುತ್ತದೆ ಹೃದಯ. ಹಾಳು ಕಣ್ಣನಿ ಅದೆಷ್ಟು ಆಳದಲ್ಲಿಹುದೋ ಕಷ್ಟಕ್ಕೂ ಕೆಲವೊಮ್ಮೆ ಗೈರುಹಾಜರಾಗಿಬಿಡುತ್ತದೆ. ಅದೇ ಭಾವನೆ, ಬಾಂಧವ್ಯ,್ಟ ಅನುಭಂಧ, ನೆನಪು, ಮತ್ತು ಅಮ್ಮನ ವಿಷಯವೆಂದಾಕ್ಷಣ ತಾಮುಂದಾಗಿ ಹಾಜರಾಗುತ್ತದೆ. ಇನ್ನು ಹೆಸರನ್ನೇ ಕೂಗದ ವಿದ್ಯಾರ್ಥಿಪ್ರಜೆಂಟ್ ಸರ್ಎಂದ ಹಾಗೆ.
    ಕಾರ್ಯ ನಿಮಿತ್ತ ಕಡೆ ಹೋದಾಗ ಒಂದಷ್ಟು ಹೊತ್ತು ಅಲ್ಲೆ ನಿಲ್ಲಬೇಕೆನಿಸುತ್ತದೆ. ಅದಾಗಲೇ ಮನದ ದೂರದರ್ಶನದಲ್ಲಿ ನೆನಪುಗಳ ಸರಮಾಲೆಯ ಒಂದೊಂದೆ ಕಂತುಗಳು ಒಟ್ಟೊಟ್ಟಿಗೆ ಬಂದ ಧಾರಾವಾಹಿಗಳಾಗಿ ಪ್ರದರ್ಶನವಾಗುತ್ತಿರುತ್ತವೆ. ಓಂ ಜೈ ಜಗದೀಶ ಹರೇ, ಲೇಟ್ ಕಮರ್ಸ್, ಬುಲೆಟಿನ್ ಬೋರ್ಡ್, ಕ್ಲಸ್ ಅಟೇಂಕ್ಷನ್, ವಿತೌಟ್ ಯೂನಿಫಾರ್ಮ್, ಎಕ್ಸೆಸೈಜ್ ನಂಬರ್ ನೈನ್ ರಿಪೀಟ್ ಎಗೈನ್, ಲೀಡರ್ಸ್ ಚಕಪ್ ಇವರ್ ಲೈನ್, ಫಸ್ಟ್ ಲೈನ್ ಮಾರ್ಚ್, ರೈಟ್ ಎಬೌಟ್ ಟರ್ನ್. ಇನ್ನು ಶಿಸ್ತಿನ ಔಪಚಾರಿಕ ಶಿಕ್ಷಣಕ್ಕೆ ಇಂತಹ ಸಂಭಾಷಣೆಗಳು ಬಹುವಾಗಿ ಬರುತ್ತಿದ್ದರಿಂದ ಹೇಗೋ ಸ್ವಲ್ಪ ನೆನಪಿನಲ್ಲಿವೆ. ಪ್ರಾರ್ಥನಾಲಯವೆಂದರೆ ನೀವು ಊಹಿಸಿಕೊಳ್ಳುತ್ತಿರುವ ಯಾವ ಊಹೆಗೂ ಮಿಗಿಲಾದ ಲಕ್ಷಣಗಳಿಂದ ನನಗೆ ಜಾಗ ಆಪ್ತವಾಗುತ್ತದೆ.
ಡಿ ಎಡ್ ಕಾಲೇಜಿನ ಕಟ್ಟಡ ಬೋಧನೆಗೆಂದೇ ಸಿದ್ದವಾದುದಲ್ಲ. ಹಿಂದೆ ಅದೊಂದು ಕಾಫಿ ಗೋಡನ್ನು. 2009-2010 ಮೂರ್ನಾಲ್ಕು ವರ್ಷ ಕಾಲೇಜಾಗಿ ಬದಲಾಗಿತ್ತು. ಆದ್ದರಿಂದಲೇ ಈಗ ಬರೆಯಲು ಒಂದಷ್ಟು ಅವಶೇಷಗಳು ನೆನಪಿನಲ್ಲಿ ಗೋಚರಿಸೋದು. ಶಿಸ್ತು ಬದ್ಧವಾಗಿ ಸಮಯ ಸರಿಯಾಗಿ 10 ಗಂಟೆಗೆ ಪ್ರತಮ ಡಿ ಎಡ್ ಮತ್ತು ದ್ವಿತೀಯ ಡಿ ಎಡ್ 
(ಸಾಂದರ್ಭಿಕ ಚಿತ್ರ)
ಪ್ರಶಿಕ್ಷಣಾರ್ಥಿಗಳು ಪರಿಸರದ ಸ್ವಚ್ಛತೆಗೆ ಓಗೊಟ್ಟು ಅದನ್ನು ಮುಗಿಸಿ ಸಭಾಂಗಣದಲ್ಲಿ ಸಾಲಾಗಿ ನಿಲ್ಲುವರು. ಮೊದಲೇ ಹೇಳಿದಂತೆ ಅದು ಕಾಫಿ ಗೋಡನ್ನಾಗಿದ್ದರಿಂದ ಕೈಗಾರಿಕೆಗೆ ನೆರವಾಗುವ ಹಾಗೆ ವಿಶಾಲ ಮಂಟಪದ ರೀತಿಯಲ್ಲಿ ಬಹಳ ವರ್ಷಗಳ ಹಿಂದೆಯೇ ಅದನ್ನು ನಿರ್ಮಿಸಿದ್ದರೆಂದು ಯಾರು ಬೇಕಾದರೂ ಹೇಳಬಹುದಿತ್ತು. ಏಕೆಂದರೆ ಶಿಥಿಲೀಕರಣಗೊಂಡಿರುವುದು, ಹಳೇ ಕಟ್ಟಡವೆಂಬುದು ಅದರ ಮೈಗೆ ಮೆತ್ತಿದ ಹಚ್ಚಾಕ್ಷರವಾಗಿ ಕಂಗೊಳಿಸುತ್ತಿತ್ತು. ಗೋಡೆಯಲ್ಲಿಯೇ ಕಟ್ಟಿರುವ ಪಾಚಿ, ಕಟ್ಟಡದ ಮೇಲೆಯೇ ಬೆಳೆದಿರುವ ಹುಲ್ಲು, ಅನೇಕ ಬಾರಿ ತಳಬಾಗ ಕಿತ್ತುಹೋಗಿದ್ದು ಅದನ್ನು ಮತ್ತೆ ಮತ್ತೆ ಮುಚ್ಚಿರುವ ಪತ್ತುಗಳು, ಕಟ್ಟಡದ ವಿನ್ಯಾಸ, ಇದೇ ಹಚ್ಚಾಕ್ಷರ. ಸಭಾಂಗಣದ ಹಾವ ಭಾವ, ರೀತಿ ನೀತಿಗಳ ಬೆನ್ನತ್ತಿದಾಗ ಸುತ್ತಲೂ ಕಾಂಪೌಂಡ್, ಮೇಲೆ ಸಿಮೆಂಟ್ ಶೀಟ್ಗಳು, ಅಲ್ಲಲ್ಲಿ ಮಧ್ಯದಲ್ಲಿ ಬೃಹದಾಕಾರದ ಪಿಲ್ಲರ್ಗಳು, ನೆಲ ನುಣುಪಿಲ್ಲದ ಸಿಮೆಂಟ್-ಮರಳು ಅನುಬಂಧ, ಸಭಾಂಗಣಕ್ಕೆ ಬರಲು ವಿಶಾಲವಾದ ಯಾವಾಗಲೂ ತೆರೆದೇ ಇರುವ ಮುಚ್ಚಲು ಅವಕಾಶವಿಲ್ಲದ ಜೊತೆಗೆ ಬಾಗಿಲೇ ಇಲ್ಲದ ಮುಂಬದಿ, ಸಭಾಂಗಣದ ಹಿಂಬಾಗಕ್ಕೆ ಸೂತಕದ ಬಟ್ಟೆಯಂತೆ ಮೂಲೆಯಲ್ಲಿಯೇ ಮೌನವಾಗಿರುವ ಕೇವಲ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತವಾಗಿದ್ದ ಶೌಚಾಲಯ ಮುಖ್ಯವಾಗಿ ಪಾತ್ರಧಾರಿಗಳಾಗುತ್ತವೆ. ಹೀಗೆ ಇಷ್ಟು ಇನ್ನಷ್ಟೂ ಕುತೂಹಲಗಳ ನಡುವೆ ನಮ್ಮ ಪ್ರಾರ್ಥನೆ ಪ್ರಾರಂಭವಾಗುತ್ತಿತ್ತು.
ನನ್ನ
    ಹೊರಾಂಗಣ ವಿಭಾಗಕ್ಕೆ ಸಂಬಂಧಿಸಿದಂತೆ ಹೆಚ್ಚು ಕಾಲ ಕಳೆದದ್ದು ಪ್ರಾರ್ಥನಾಲಯದಲ್ಲಿಯೆ. ಏಕೆಂದರೆ ತರಗತಿ ನಡೆಯುವ ಸ್ಥಳಕ್ಕೂ ಬೆಳಗಿನ ಪ್ರಾರ್ಥನೆ ನಡೆಯುವ ಸ್ಥಳಕ್ಕೂ ವಿರುದ್ಧಾರ್ಥಕ ಸಂಬಂಧವಿತ್ತು. ತರಗತಿಗಳಿಂದ ಹೊರಬಂದ ವಿದ್ಯಾರ್ಥಿಗಳು ಕನಿಷ್ಠ ಹತ್ತು ಹೆಜ್ಜೆ ಇಟ್ಟರೆ ಪ್ರಾರ್ಥನಾಲಯ ತಲುಪಬಹುದಿತ್ತು. ಸಾಲಾಗಿ ಹೋಗುವ ಮಜವೇ ಬೇರೆ. ಶಿಸ್ತಿನಿಂದ ಶಿಸ್ತನ್ನು ಪಾಲಿಸುವುದು ಸೂಕ್ತ, ಆದರೆ ಅಶಿಸ್ತಿನಿಂದ ನಾವು ಕೊಡುತ್ತಿದ್ದ ಮರ್ಯಾದೆಯನ್ನು ಶಿಸ್ತು ತಡೆದುಕೊಳ್ಳಲಾಗದೆ ತಾನು ಶಿಸ್ತೆ ಅಲ್ಲ ಎಂದು ಕೂಗಿ ಹೇಳುವ ಮುನ್ನ ನಾವೇ ಅದನ್ನು ಸಮಾಧಾನಗೊಳಿಸಿ ಇನ್ನೆರಡೇ ನಿಮಿಷ ಎಂದು ಮೂರು ನಿಮಿಷದಲ್ಲಿ ಶಿಸ್ತಿಗೆ ನಾವೇ ಹೊಕ್ಕುಬಿಡುತ್ತಿದ್ದೊ. ಎಲ್ಲ ಮೌನಕ್ಕೂ ದೈಹಿಕ ಶಿಕ್ಷಕಿ ತಾರಾದೇವಿ ಮೇಡಂರವರ ನಿಲುವೇ ಕಾರಣ. ಸಾಲಾಗಿ ಬಂದು ನಿಂತ ಎಲ್ಲಾ ಸ್ನೇಹಿತರ ನಡುವೆ ನಾನೊಬ್ಬ ಎಲ್ಲವನ್ನು ಗಮನಿಸುವ ಆದರೆ ಏನನ್ನೂ ಗಮನಿಸಿದಂತಿರುವ ಮಳ್ಳ. ನನಗಿಂತ ಹೆಚ್ಚು ಸಣ್ಣ ಸಣ್ಣ ಅಂಶಗಳನ್ನು ಗಮನಿಸಿದವರಾರಾದರೂ ಇದ್ದರೆ ಇದಕ್ಕಿಂತ ಉತ್ತಮವಾಗಿ ವರ್ಣಿಸುತ್ತಾರೆಂಬುದರಲ್ಲಿ ಸಂಶಯವಿಲ್ಲ, ಏಕೆಂದರೆ ಇನ್ನೂ ಏನೋ ಕಡಿಮೆ ಇದೆ ಬರವಣಿಗೆಯಲ್ಲಿ ಎಂದು ಅನಿಸುವಾಗ ಅನಿಸಿಕೆ ಸರಿಯೆನಿಸುತ್ತದೆ. ನಮ್ಮ ಮತ್ತು ನಮ್ಮ ಹಿರಿಯ ತರಗತಿಯ ವಿದ್ಯಾರ್ಥಿಗಳ ಒಟ್ಟು ಸಮೂಹ ಹೆಚ್ಚು ಕಡಿಮೆ ನೂರರ ಸಂಖ್ಯೆಗೆ ಸಮೀಪವಾಗುತ್ತಿತ್ತು. ಎಂಬತ್ತು ಹೆಣ್ಣು ಮಕ್ಕಳಾದರೆ ಇಪ್ಪತ್ತು ಗಂಡುಮಕ್ಕಳು. ಮಧ್ಯ ಹೆಣ್ಣು ಮಕ್ಕಳನ್ನು ನಿಲ್ಲಿಸಿ ಸುತ್ತಲೂ ಗಂಡು ಮಕ್ಕಳನ್ನು ನಿಲ್ಲಿಸುತ್ತಿದ್ದ ಪರಿ ಕೆರೆಯ ಮತ್ತು ಸುತ್ತಲೂ ಬೆಳೆದ ಮರಬಳ್ಳಿಯ ಚಿತ್ರಣವನ್ನು ಹೋಲುತ್ತದೆ. ಕೆರೆಯಾಗಿ ಬಳುಕುವ ತೊರೆಯಾಗಿ ವಿದ್ಯಾರ್ಥಿನಿಯರು ನಿಂತರೆ ಜಡಗಟ್ಟಿದ ಮರವಾಗಿ ನೀರನ್ನು ಅರಸುತ್ತಾ ಬಂದಪ್ಪಳಿಸುವ ಅಲೆಗೆ ಹೊಳಗೊಳಗೆ ಹುಸಿನಗುವ ಹಸಿರಾಗಿ ಪುರುಷ ಮಹಾನೀಯರು ಸ್ಥಾನ ಪಡೆಯುತ್ತಾರೆ. ಅಂತೂ ಒಂದು ತಾಸಾದರೂ ಬೇಕಿತ್ತು ಪ್ರಾರ್ಥನೆ ಮುಗಿಯಲು. ಮುಂದೆ ನಿಂತ ಗುರುವರ್ಯರು ಆಗಾಗ ಜೀವ ಪಡೆಯುತ್ತಿದ್ದರು. ಕೆಲವರಂತು ಸುಮ್ಮನೇ ನಿಂತರೂ ದಿಗ್ಭ್ರಾಂತಗೊಂಡವರಂತೆ ದಿಟ್ಟಿಸಿಯೇ ನೋಡುತ್ತಿರುತ್ತಿದ್ದರು. ನಾಡಗೀತೆ, ಭಕ್ತಿಗೀತೆ, ಭಜನೆ, ವಾರ್ತಾ ತಲೆಬರಹ ವಾಚನ, ವಿಚಾರಣೆ, ಶಿಕ್ಷೆ, ಪ್ರೋತ್ಸಾಹ, ನಿಂಧನೆ, ಚಪ್ಪಾಳೆ, ಮೌನ, ಆಲಿಕೆ, ತೂಕಡಿಕೆ, ಬುಡಬುಡಕೆ ಎಲ್ಲಕ್ಕೂ ಸಮಯ ಹಂಚಿಕೆಯಾಗಬೇಕಲ್ಲವೆ?                                                                     
         ಪ್ರಥಮ ಡಿ ಎಡ್ ಕಲಿಕಾರ್ಥಿಗಳಾದ ನಾವು ಒಟ್ಟು 50 ಮಂದಿಯಿದ್ದು 10 ಪುರುಷ ಸಿಂಹಗಳು 40 ಮಹಿಳಾ ಸಿಂಹಿಣಿಗಳು ಸೇರಿ ಸಭೆ ಕಲಿಸುವವನಿಗೆ ರಾಗ ದೃಢವಾಗಿ ಒತ್ತಿ ಹೇಳುವುದು(ಕಿರುಚಿ) ಉಪಧ್ಯಾಯನ ಮಾಡುವುದು ಅವಶ್ಯವಾಗಿತ್ತು. ನೇರ ನಿಂತ ಗುರುವಿಗೆ ಎಡಭಾಗದಲ್ಲಿ ನಾವುಗಳಿದ್ದು ನಮಗೆ ಎಡಭಾಗದಲ್ಲಿ ಸ್ತ್ರೀ ಶಕ್ತಿಯಿತ್ತು. ಮರೆಯಬಾರದು ನಮ್ಮ ಹಿಂದೆಯು ಇತ್ತು. ತರಗತಿಯ ಒಂದು ಭಾಗದ ಕೇವಲ 2 ಅಥವಾ 3 ಬೇಂಚುಗಳು ಹುಡುಗರಿಂದ ಅಲಂಕರಿಸಲ್ಪಡುತಿತ್ತು. ಇನ್ನುಳಿದೆಲ್ಲ ಆಸನಗಳು ಹುಡುಗಿಯರಿಂದ ತುಂಬಿರುತಿತ್ತು. ಭರ್ತಿಯಾಗುತಿತ್ತು. ಪೂರ್ತಿಯಾಗುತಿತ್ತು. ಗಿಜಿಗಿಜಿ ಎನ್ನುತಿತ್ತು. ಪುರುಷ ಪ್ರಧಾನ ಸಮಾಜ ನಮ್ಮದಾಗಿದ್ದರು ತರಗತಿಯಲ್ಲಿ ಮಹಿಳೆ ಪ್ರಧಾನ್ಯಳಾಗಿ ನೋಡುಗರಿಗೆ ಹುಡುಗರು ಅಭಲರಾಗಿ ಕಾಣತಿದ್ದರು. ಕ್ರಿಕೇಟ್ ಕ್ರೀಡಾಂಗಣದಲ್ಲಿ ಆಡುವವರು, ಅವರನ್ನು ನೋಡುವವರು ಇಬ್ಬರೂ ಇದ್ದರು ಆಡುವವರನ್ನು ಹುಡುಗರಿಗೂ ನೋಡುತಿದ್ದವರನ್ನೂ ಹುಡುಗಿಯರಿಗೂ ಹೋಲಿಸಬಹುದಿತ್ತು. ಯಾಕೆಂದರೆ ಸಂಖ್ಯೆ ಚಿಕ್ಕದಾಗಿದ್ದರು ಅಂಕೆಯಿಲ್ಲದ ಕೋತಿಯಾಟಗಳು ನಮ್ಮಿಂದಲೇ ಜರುಗುತ್ತಿದ್ದರಿಂದ ಹುಡುಗಿಯರು ನಾಚಿಕೆ, ಲಾವಣ್ಯ, ಮೌನ, ಸೌಂದರ್ಯ, ಸೌಮ್ಯತೆ, ಅವರನ್ನು ಶಿಸ್ತಿನ ಮನುಷ್ಯರನ್ನಾಗಿಸಿತ್ತು. ಶಾಂತಿಯಿಂದಿರಿಸಿತ್ತು. ಹಾಗೆಂದ ಮಾತ್ರಕ್ಕೆ ಇದ್ದ ಹುಡುಗಿಯರೆಲ್ಲರೂ ಹಾಗಲ್ಲ!!
     ದಿನಕ್ಕೆ 45 ನಿಮಿಷದ 7 ಅವಧಿಗಳು ಪಾಠ ಪ್ರವಚನಕ್ಕೆ ನಿಯಮಿತವಾಗಿದ್ದು ಒಂದೇ ದಿನ ಅದೇ ಉಪಧ್ಯಾಯ ಎರಡು ಬಾರಿ ಬರುವುದು ಸಾಮಾನ್ಯವಾಗಿತ್ತು. ಕಾಲ ಕಳೆದು ತರುವಾಯ ಮುಂದೆ ನಮಗೂ ನಮ್ಮ ಗುರುಗಳಿಗೂ ಯಾವ ಮಟ್ಟಿಗೆ ಬಾಂಧವ್ಯ ಬೆಳಿಯಿತೆಂದು ನಂತರದ ಲೇಖನಗಳಲ್ಲಿ ತಿಳಿಸುತ್ತೇನೆ.
      ಬೆಳಿಗ್ಗೆ 9.20 ಕ್ಕೆ ಕಾಲೇಜು ವಿದ್ಯಾರ್ಥಿಗಳಿಂದ ಅಲಂಕೃತವಾದರು ಕೆಲವರು ಮುಂಚೆಯೂ ಬರುತಿದ್ದರು, ಕೆಲವರು ನಂತರವೂ ಬರುತಿದ್ದರು. 10 ರೊಳಗೆ ಬಂದರೆ ಸಂತೋಷ, ಆನಂತರ ಬಂದರೆ ನಮ್ಮ ದೈಹಿಕ ಮತ್ತು ಆರೋಗ್ಯ ಶಿಕ್ಷಣದ ಶಿಸ್ತಿನ ಶಿಕ್ಷಕಿ ತಾರಾದೇವಿಯವರ ಉಪದೇಶ!. ನಾ ಈವರೆಗೆ ನನ್ನನ್ನು ಕುರಿತಲ್ಲದೆ ನನ್ನವರನ್ನೂ ಕುರಿತು ಹೇಳಿರಬಹುದು. ಆದರೆ ಮೊದಲಬಾರಿಗೆ ನನ್ನ ಗುರುಗಳ ಬಗ್ಗೆ ಮಾತನಾಡುತ್ತಿರುವುದು ನನಗೆ ಖುಷಿಯೆನಿಸುತ್ತದೆ. ಏಕೆಂದರೆ ನಾನು ಅವರನ್ನು ಅಂದು ಹೇಗೆ ಅರ್ಥಮಾಡಿಕೊಂಡಿದ್ದೇನೆಂದು ಈಗ ಬರೆವಲ್ಲಿ ನೆನೆವಾಗ ಹುಣಸೂರಿನ ಬಸ್ ನಿಲ್ದಾಣ, ಮುಂಬರಿದು  ಹಿತವೆನಿಸುತ್ತದೆ. ಹೆಚ್ಚಲ್ಲವಾದರೂ 5-6 ಗುರುಗಳಿಂದ ನಮಗೆ ಬೋಧನೆ ನೆರವೇರುತ್ತಿರಲು ಇದ್ದವರಲ್ಲಿ ಒಬ್ಬರೇ ಒಬ್ಬರು ಮಹಿಳಾ ಗುರು ನಮ್ಮ ತಾರಾದೇವಿಯವರು. ಅವರ ವ್ಯಕ್ತಿತ್ವ ಕುರಿತು ನಾ ಇಲ್ಲಿ ಹೇಳಲೊರಟಿಲ್ಲ. ಅಂದು ಅದನ್ನು ಅವಲೋಕಿಸುವಂತಾ ಪ್ರಜ್ಞೆಯು ಆಗತಾನೆ ಕಾಲೇಜಿಗೇ ಹೋಗದೆ ಪಿ ಯು ಸಿ ಪಾಸಾದವನ ಮೂಡತನಕ್ಕೆ ಹೇಗೆ ದಕ್ಕೀತು. ಆದರೆ ಅವರು ನಡೆದುಕೊಳ್ಳುತ್ತಿದ್ದ ಗುರುಭಾವದಿಂದ ಅದುನನಗೇನೆಂದು ಅನ್ನಿಸುತ್ತದೆಎಂದಷ್ಟೇ ಹೇಳುತ್ತೇನೆ. ಎಷ್ಟೇ ತುಂಟತನವಿದ್ದರೂ ಅದನ್ನು ಕ್ಷಣಮಾತ್ರದಲ್ಲಿಯಾದರೂ ನಿಲ್ಲಿಸಿ, ಶಿಸ್ತಿನ ಕಡೆ ಹೋಗೊಟ್ಟು ಅವರ ವಾಚನಕ್ಕೆ ತಲೆಬಾಗುವಷ್ಟು ನಿಷ್ಠೂರತೆಯ ನುಡಿಗಳು ಗುರುಗಳ ಪ್ರಾಭಲ್ಯಕ್ಕೆ ಸಾಕ್ಷಿಯಾಗಿ ಇಂದೂ ನನ್ನ ಮನದಲ್ಲಿ   ಅದೂ ಸಂದರ್ಭದಲ್ಲಿ ಔಚಿತ್ಯವೆನಿಸಿದಕ್ಕಾಗಿ ಮಾತ್ರ. ಧಾರಾ ಮುಹೂರ್ತದಲ್ಲಿ ಮಧುವೆ ಮಂಟಪ ತುಂಬಿಹೋಗುವುದು ಸಾಮಾನ್ಯಮೊದಲು ಮಧುವೆಗೆ ಸಂಬಂಧಿಸಿದವರು ಮುಂಜಾನೆಯೇ ಬಂದು ತಮ್ಮ ಚಟುವಟಿಕೆಗಳಲ್ಲಿ ತೊಡಗಿಕೊಂಡಂತೆ ಕೆಲವರು ಬೇಗನೆ ಬಂದು ಕಾಲೇಜಿನ ಸರಿಯಾದ ಸಮಯಕ್ಕೆ ಹಳೇ ನೆಂಟರಂತಾಗುತ್ತಿದ್ದರು. 9.30 ನಿಜವಾದ ಧಾರಾ ಮುಹೂರ್ತದ ಸಮಯ ವಾಗಿತ್ತು. ಆಗ ಗರಿಷ್ಠ ವಿದ್ಯಾರ್ಥಿಗಳಿಂದ ಕಾಲೇಜಿನ ಹೊರಾಂಗಣ ಸ್ಮಶಾಣದಬಿಕೋತನವನ್ನು ಎಸೆದು ಪಕ್ಷಿಧಾಮದಕಲರವತೆಯನ್ನು ತೊಟ್ಟು ಶಿಸ್ತಿನ ವಿದ್ಯಾರ್ಥಿಗಳು ತಮ್ಮ ತಮ್ಮ ಪ್ರಾಣ ಸ್ನೇಹಿತರೊಂದಿಗೆ ಅಶಿಸ್ತಿನ ಮಾತುಗಳನ್ನಾಡುತ್ತಾ ತಮ್ಮ ತಮ್ಮ ತವರಿಗೆ ಬಂದ ಮಗಳಂತೆ ನಗುತ್ತಾ, ಪ್ರತಿಯೊಬ್ಬರಲ್ಲೂ ವಯಸ್ಸಿನ ತೇಜಸ್ಸು ಪ್ರಕಾಶಿತವಾಗಿ ಕಂಗೊಳಿಸುತಿತ್ತು. ಅನೇಕ ಮೊಗ್ಗುಗಳು ಅರಳಲು ತರಭೇತಿಗೆ ಬಂದ ಉಧ್ಯಾನವನವಾಯಿತು ನನ್ನಛಾಯಾದೇವಿ ಶಿಕ್ಷಕರ ತರಭೇತಿ ಸಂಸ್ಥೆ”. ಪ್ರತಿಯೊಂದು ಮೊಗ್ಗು ಅರಳಿದವುಸ್ನೇಹಸುಗಂಧ ನೆನಪಾಗಿ ಬರೆಯ ನೆವವಾಗಿ ಇಂದಿಗೂ ಹೃದಯ ಶ್ವಾಸದಲ್ಲಿ ಸುಖವಾಗಿ ಉಳಿದಿವೆ. ಕೆಲವು ಗಂಡು ಹೂ ಇಂದಿಗೂ ಮೊಬೈಲ್ ಸಂಬಂಧಿಕರಾಗಿದ್ದು ಯಾರ ಮುಡಿಗೂ ಏರದೆ ಏಕಾಂಗಿಯಾಗೆ ಇವೆ. ಆದರೆ ಹೆಣ್ಣು ಹೂಗಳು ಆದಷ್ಟು ಕೆಲವನ್ನು ಬಿಟ್ಟು ಮಿಕ್ಕೆಲ್ಲವು ಮುಡಿಗೇರಿ ನಗುತ್ತಿವೆ, ನಗುತ್ತಿರಲಿ. ‘ಯಾವ ಹೂವು ಯಾರ ಮುಡಿಗೊಎಂಬಂತೆ ಕೆಲವು ಹೂ ತಮ್ಮ ತಮ್ಮ ಮುಡಿಗಳನ್ನು ತಾವೇ ಹುಡಕಲು ಅಂದೇ ಪ್ರಯತ್ನ ಪಟ್ಟರೂ ಅಲ್ಲೆ ಇದ್ದ ಖಾಲಿ ಮುಡಿಗಳು ಅದಕ್ಕೆ ಪ್ರಚೋದಕವಾಗಿದ್ದರು ಏರಿದ ಹೂಗಳಿಗೆ ಅದು ಬಾಡಿಗೆಯ ಮುಡಿಯಾದವೇ ವಿನಃ ಒಂದೂ ಖಾಯಂ ಮುಡಿಗಳಾಗಲಿಲ್ಲ!!
     ದಿನಕ್ಕೆ ಒಬ್ಬಿಬ್ಬರು ಗೈರು ಹಾಜರಾದರೂ ಅದು ಹಾಜರಾತಿಯ ಸಮಯದಲ್ಲಿ ಮಾತ್ರ ಎಲ್ಲರ ಗಮನಕ್ಕೆ ಬರುತಿತ್ತೇ ಹೊರತು ನಂತರದಲ್ಲಿ ತರಗತಿ ಪೂರ್ಣ. ತರಗತಿ ಕಲಿಕೆಗೆ ಅನುವಾಗುತ್ತಿದುದು 10 ಗಂಟೆಗೆ. ಅಲ್ಲಿಂದಾಚೆಗಿನ ವಸ್ತು ವಿಷಯ ಪರೀಕ್ಷೆಗೆ, ಮೌಲ್ಯಗಳಿಗೆ, ವಿದ್ಯಾಭ್ಯಾಸಕ್ಕೆ, ಒಟ್ಟಾರೆ ಔಪಚಾರಿಕಪಕ್ಷಕ್ಕೆ ಸೇರಿತ್ತು. ಮುಂಚಿನ ಸಮಯ ಔಪಚಾರಿಕವೋ ಅನೌಪಚಾರಿಕವೋ ನೇರವಾಗಿ ಹೇಳುವುದು ಕಷ್ಟ. ಕೆಲವರಿಗೆ ಹರಟೆಗೆ, ಕೆಲವರಿಗೆ ಸಿಂಗಾರಕ್ಕೆ, ಕೆಲವರಿಗೆ ಹಿಂದಿನ ದಿನ ಕೊಟ್ಟಿದ್ದ ಚಟುವಟಿಕೆಗೆ, ಅವಶ್ಯವಾದವರ ಭೇಟಿಗೆ, ಕಾಲೇಜಿನ ಸ್ವಚ್ಛತೆಗೆ, ಪ್ರಾರ್ಥನೆಗೆ, ಶಿಸ್ತಿಗೆ, ಬಿಟ್ಟು ಬಿಟ್ಟು ಹಿಡಿದ ಪಂಜರದ ಪಕ್ಷಿಯೆಂದರೆ ಸರಿಯಾಗುತ್ತದೆಯೇನೋ,, ಪ್ರತಿನಿತ್ಯ ಪ್ರಾರ್ಥನೆಗೆ ಮುನ್ನ ಕಾಲೇಜಿನ ಮುಂಬದಿಯನ್ನು ಸ್ವಚ್ಚ ಮಾಡುತ್ತಿದುದು ಒಮ್ಮೊಮ್ಮೆ ಅವಶ್ಯಕವಾಗಿ ತೋರಿದರೆ ಒಮ್ಮೊಮ್ಮೆ ಮೊದಲಿಂದ ಮಾಡುತ್ತಿದುದಕ್ಕಾಗಿಪಿತೃಪಕ್ಷವಾಗಿಯೂ  ಸಾಗುತ್ತಿತ್ತು. ಅದು ಹೇಗೆಂದರೆ ಒಮ್ಮೆ ಕಿತ್ತ ಗರಿಕೆ ಹುಲ್ಲನ್ನು ಕೊನೆವರಿಗೂ ಹಿಡಿದು ಗುರುಗಳು ಗಮನಿಸುವಾಗ ಕಾಣದಂತೆ ಬಿಸಾಡಿ ಮತ್ತೆ ಅದೇ ಹುಲ್ಲನ್ನು ಕಿತ್ತವರಂತೆ ನಟಿಸಿ ಹಿಡಿದು ಅತ್ತ ಹಿತ್ತ ಅವರವರ ಗೆಳೆಯರೊಡನೆಸ್ವಚ್ಚತೆಗಾಗಿ ನಡೆದು ಸಮಯ ಮೀರುತ್ತಿದ್ದಂತಯೇ ಗುರುಗಳು ಸಾಕು ಬನ್ನಿ ಎಂದಾಕ್ಷಣ ಮಧುವೆ ಮನೆಯಲ್ಲಿ ಸಂಭ್ರಮ ವೀಕ್ಷಿಸುತ್ತಾ ಊಟಕ್ಕಾಗಿ ಕಾದಿದ್ದವರಿಗೆ ಊಟಕ್ಕೊರಡುವ ಸೂಚನೆ ಬಂದಾಕ್ಷಣ ಹೇಗೆ ಗುಂಪಾಗಿ ಜನ ಸಮೂಹ ಸಾಗುತ್ತದೆಯೋ ಹಾಗೆ, ಪ್ರಾರ್ಥನೆಗೆ ತೆರಳುತ್ತಿದ್ದುದು ಹೋಲಿಕೆ ಎನಿಸುತ್ತದೆ. ಅಲ್ಲೂ ಊಟಕ್ಕೆ ಮೊದಲು ತಮ್ಮ ತಮ್ಮ ಕೈ ತೊಳೆದುಕೋಂಡು ಸಾಗುತ್ತಾರೆ, ಇಲ್ಲಿಯೂ ಅದೇ ಕಾರ್ಯ, ಆತುರಗಾರರೂ ಊಟಕ್ಕೆ ಕೈ ತೊಳೆಯದೆಯೂ ಹೋಗುವರು, ಇಲ್ಲಿಯೂ ಹಾಗೆ ಸಾಗಿದ್ದುಂಟು. ಅಲ್ಲಿ ವಿಧವಿಧ ಪಾಕಹಾರಗಳಿಂದ ಬೋಜನಾಸಕ್ತರು ತಮ್ಮ ಒಡಲು ತುಂಬಿದ ಸಂತಸದಿಂದ ಸಂಭ್ರಮದ ನಡಿಗೆಯನ್ನರಸಿ ಹೊರಬಂದರೆ ಇಲ್ಲಿ ಪ್ರಾರ್ಥನೆ ಮಾಡಿ ಏನೋ ಒಂದು ಮುಖ್ಯ ಸಭೆಯ ಅಂತಿಮ ತೀರ್ಮಾನವಾದಂತೆ, ಮೌನವಾಗಿ ಸಭಾಂಗಣದಿಂದ ಹೊರಬರುತ್ತಿದ್ದುದು ವ್ಯತ್ಯಾಸವಾಗುವುದಷ್ಟೆ. ಪ್ರಾರ್ಥನೆಯ ಪ್ರಾಮುಖ್ಯತೆಗಿನ್ನ ಅಲ್ಲಿ ನಡೆಯುತ್ತಿದ್ದ ವಿಚಾರ, ತನಿಖೆ 


                                                                                                                                                                                                                                                                                                                                                                                                                                   

No comments:

Post a Comment