Sunday 21 May 2017

ಬೆಳದಿಂಗಳ ಕೋಲು - ಚಂದ್ರು ಎಂ ಹುಣಸೂರು


ಮೊನ್ನೆೆ ಕಲ್ಲೂರಿಗೆ ಹೋಗಬೇಕಾಯ್ತು. ಕೆ ಆರ್ ನಗರದ ಮುಂಜಾನೆ 8 ಗಂಟೆಯ ಟ್ರೈನು ಮೈಸೂರಿನೆಡೆಗೆ ಹೋಗುವಾಗ ನಡುವೆ 20 ನಿಮಿಷ ಪ್ರಯಾಣದಲ್ಲಿ ಸಿಕ್ಕಿಿಬಿಡುವ ಮಣ್ಣಿಿನ ಗೋಡೆ, ಕೈಯಂಚು, ಗಲ್ಲಿಗಳಿರುವ ಒಂದು ಸಾಮಾನ್ಯ ಹಳ್ಳಿಿ. ಮೈಸೂರಿನ ಸಿಟಿ ಬಸ್ಟ್ಯಾಾಂಡಿನಿಂದ ಬಸ್ಸಿಿನಲ್ಲಿ ಬಂದರೆ ಮುಕ್ಕಾಾಲು ಗಂಟೆ ಪ್ರಯಾಣ. ಈ ಪ್ರಯಾಣದ ಸಮಯ ನಿಗಧಿಯಾಗಿದ್ದು ಇದೀಗ ನಾನು ಎಂ ಎ ಓದಿದ ತಿಳುವಳಿಕೆಯಿಂದಲ್ಲ. ಬಾಲ್ಯದ ಓಡಾಟದಿಂದ. ಏಕೆಂದರೆ ಈಗೀಗ ಟ್ರೈನಿನಲ್ಲಿ ಹೋಗೋದು, ಬಸ್ಸಿಿನಲ್ಲಿ ಹೋಗೋದು ಕಡಿಮೆಯಾಗಿ ’ಅವಶ್ಯ’ವಿದ್ದಾಾಗ ಒಂದು ಕರೆ ಮಾಡಿಬಿಡೋದು, ಇನ್ನೂ ’ಅನಿವಾರ್ಯ’ವಿದ್ದಾಾಗ ಬೈಕಿನಲ್ಲಿ ಹೋಗೋದು ಜಾಸ್ತಿಿಯಾಗಿದೆ. ಅಲ್ಲದೆ ಅವ್ವನ ಮನೆಗೆ ಹೋಗಬೇಕು ಅಂದರೆ ಈಗ ’ಕಾರಣ’ಬೇಕಿದೆ. ಹಬ್ಬ, ಮದುವೆ, ಆಪ್ತರ ಸಾವು ಇವಕ್ಕೆೆ ಮಾತ್ರ ಅವ್ವನ ಮನೆ ಬದುಕುತ್ತಿಿದೆಯಾ ಅನಿಸೋಕೆ ಶುರುವಾಗಿದೆ. ಸುಮ್ಮನೆ ಹೋಗಿ ಮಗಳ ಮನೆ ಬೆಳೆದ ಅವರೆಕಾಯಿ ಕೊಡಲೋ, ಅವ್ವನಿಗೆ ಉಷಾರಿಲ್ಲದ ಕಾರಣಕ್ಕೋೋ, ನೋಡಬೇಕು ಎನಿಸಿದ್ದಕ್ಕೋೋ, ತಪ್ಪದೆ ಮಾರ್ಲಮಿಗೋ(ಪಿತೃಪಕ್ಷ ಹಬ್ಬ), ಯಾವ್ಯಾಾವುದಕ್ಕೋೋ ಹೋಗುವುದು ತೀರಾ ಸಾಮಾನ್ಯವಾದ, ನಮ್ಮ ಆಗಮನ ಅವ್ವನಿಗೆ ವಿಶೇಷವೆನಿಸದ ಅವ್ವನ ನೋಟದಲ್ಲಿ ಬದಲಾವಣೆ ಬಯಸದ ಮಮತೆ ಈಗ ಹೀಗಾಗಿದೆ!. ಈ ಬಾಂಧವ್ಯದ ನಿಷ್ಠೂರ ಕರ್ಮಕ್ಕೆೆ ನೇರ ಕಾರಣ ನಾನು ಬೆಂಗಳೂರಿಗೆ ಬಂದದ್ದೆೆ! ಅದಿರಲಿ. ಅವ್ವ ಅಂದರೆ ತಾಯಿಯ ತಾಯಿ. ರುಕ್ಮಿಿಣಿ ಅವಳ ಹೆಸರು. ಜೀವನದುದ್ದಕ್ಕೂ ಹೋರಾಡಿ ಹೋರಾಡಿ ಅವರಿವರಿಂದ ಅನ್ನಿಿಸಿಕೊಂಡು ಇದೀಗ ಎಂಟತ್ತು ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡು ತನ್ನ ಮೂರು ಮಕ್ಕಳಲ್ಲಿ ಕೊನೆಯ ಮಗಳು ಗಂಡನನ್ನು ಬಿಟ್ಟು ಬರುವಾಗ ಕಾಣಿಕೆಯೆಂಬಂತೆ ಬಂದ ಆ  ಮಗುವನ್ನು ಸಾಕಿ ಇಂದು ರುಕ್ಮಣ್ಣಿಿಯ ಮೊಮ್ಮಗ ಅನ್ನುವಂತೆ ಮಾಡಿ ಅವನೂ ಎದೆಯೇರಿಸಿ ಕಂಠ ಜೋರುಮಾಡುವಾಗ ಗುದಿಯುವ ಮನಸಾದರೂ ಎದೆಗಾರಿಕೆಗೆ ಮುಪ್ಪಾಾಗಿದೆ ಅನಿಸತೊಡಗಿ ಸೋಲುವ ಮಟ್ಟಕ್ಕೆೆ ಬಂದ ಮುದಿ ಜೀವ. ಆ ನನ್ನ ಅವ್ವನ ಮತ್ತು ನನ್ನ ಬದುಕಿನ ಹೊನಲಾಗಿ ಈ ನೆನಪು.

ಈಗ ಹೋದರೂ ಹಾಗೆಯೇ ಅಂದಿನಂತೆಯೇ ಹಂಬಲಿಸುತ್ತಾಾಳೆ. ನಾನು ಮೊಲೆ ಹಾಲಿನಿಂದ ಸರಿದಿದ್ದ ಕರುವಿನಂತೆ ಹೋಗದಿದ್ದರೂ ಅವಳು ಕಳೆದ ಕರುಳಿನ ಬಳ್ಳಿಿ ಬಳಿಯಾದಷ್ಟೇ ಹಿಗ್ಗುತ್ತಾಾಳೆ. ಅದನ್ನೆೆಲ್ಲ ನೆನೆದು ನನಗೆ ಉಕ್ಕಿಿಬಂದ ಸಂಕಟಕ್ಕೆೆ ಬರೆದ ಸಾಲುಗಳಿವು. ತೀರಾ ಖಾಸಗೀ ಎನಿಸಿದರು ಇನ್ನೊೊಬ್ಬರೊಂದಿಗೆ ಹಂಚಬೇಕೆನಿಸುತ್ತದೆ. ಪುನಃ ಪುನಃ ಹತ್ತಿಿರವಿದ್ದ ನೆನಪುಗಳನ್ನು ಹತ್ತಿಿರಕ್ಕೆೆ ಕರೆಯಬೇಕೆನಿಸುತ್ತದೆ. ಅವಳು ಮುದಿಯಾಗಿದ್ದಾಾಳೆ, ನಾನು ಬೆಳೆದಿದ್ದೇನೆ.
ನನಗೆ ಸರಿಯಾಗಿ ಗೊತ್ತಿಿಲ್ಲದಿದ್ದರೂ ಅಂದಾಜು ಎರಡು ವರ್ಷದವನಾಗಿದ್ದಾಾಗ ಕಲ್ಲೂರಿಗೆ ಹೋದೆನೇನೋ. ಅವ್ವ ಮತ್ತು ಅಯ್ಯ ಇಬ್ಬರೂ ಬಂದು ಕರೆದೊಯ್ದಿಿದ್ದರಂತೆ. ಅಲ್ಲಿಂದ ನಾನು ಒಂದನೇ ತರಗತಿಗೆ ಸೇರುವವರೆಗೂ ಆ ಹಸಿ ಹಸಿ ಬಾಲ್ಯ ಕಲ್ಲೂರಿನಲ್ಲೇ ಕಳೆಯಿತು. ಸ್ವರ್ಗದಂತೆ ಬಾಸವಾಗುವ ಆ ನನ್ನ ಅವ್ವನ ಮನೆ ಕೈಯ್ಯಂಚಿನದ್ದು. ಇಂದಿಗೂ ಹಾಗೇ ಇದೆ. ಅದು ಬದಲಾಗಿದ್ದರೆ ಮುಖವನ್ನು ಪ್ಲಾಾಸ್ಟಿಿಕ್ ಸರ್ಜರಿ ಮಾಡಿಸಿಕೊಂಡ ತಾಯಿಯನ್ನು ಮಗು ವಿಚಲಿತನಾಗಿ ನೋಡುವಂತೆ ನಾನು ನೋಡುತ್ತಿಿದ್ದೆೆ. ಅದು ಬದಲಾಗಲಿಲ್ಲ. ಬದಲಿಗೆ ಬಾಲ್ಯದ ಗೆಳತಿ ಪಕ್ಕದ ಮನೆಯ ಜಯಂತಿಯ ಮನೆಯೂ ನನ್ನವ್ವನದೆ ಆಗಿದೆ. ಕೂಡಿಟ್ಟ ಚಿಲ್ಲರೆ ಚಿಲ್ಲರೆಯಿಂದ ಸ್ವಲ್ಪ ಸಾಲವನ್ನೂ ಮಾಡಿ ಕೊಂಡುಕೊಂಡು ವಾಸವಿದ್ದಾಾಳೆ. ಅದೆಷ್ಟೇ ಬದುಕಿನ ಹೊಡೆತಗಳಿಗೆ ಸಿಕ್ಕರೂ ಅವಳು ಮಾಗಿದಳೇ ಹೊರತು ಹೊಡೆತಗಳಿಗೆ ಕುಗ್ಗಲಿಲ್ಲ. ಹೊಲ, ಮನೆ ಅಂತ ಓಡಾಡಿದವಳು ಇಂದಿಗೂ ಓಡಾಡುತ್ತಲೇ ಇದ್ದಾಾಳೆ.

ನಾನು ನೋಡುವಂತೆ ಅವ್ವನ ಮನೆಯಲ್ಲಿ ಸ್ವಲ್ಪ ಸ್ವಲ್ಪ ಬದಲಾವಣೆಯಾಗಿದೆ. ಸೀಮೆ ಎಣ್ಣೆೆ ದೀಪದ ಜೊತೆಗೆ ಕರೆಂಟು ಬಂದಿದೆ, ಎಲ್ ಜಿ ಟಿವಿಯಲ್ಲಿ ಧಾರಾವಾಹಿಗಳು ರಾರಾಜಿಸುತ್ತವೆ, ಸೀರೆಗಳು  ಬೀರಿಗೆ ಶಿಫ್ಟಾಾಗಿವೆ, ಕಾಫಿ ಗ್ಯಾಾಸ್ ಸ್ಟೌೌನಲ್ಲಿ ಉಕ್ಕುತ್ತದೆ, ಮನೆಯ ಹೊರಗೆ ಟಾಯ್ಲೆೆಟ್ ನಿಂತಿದೆ, ಮೊಮ್ಮಗ ಬೆಳೆದಿದ್ದಾಾನೆ, ಅವ್ವನ ಹೊಸ ಕನ್ನಡಕ ಹೊಳೆಯುತ್ತದೆ, ತಾತನ ನಗುಮುಖದ ಗೋಡೆಯ ಫೋಟೋ ಉತ್ಸಾಾಹಿಯಾಗಿದೆ, ಊಟದ ಕೋಣೆ ಕೊಂಡ ಹೊಸ ಮನೆಯಲ್ಲಿದೆ, ಹೊಸ ಹಸು ಕರುವಿನೊಂದಿಗೆ ಹೆಜ್ಜೆೆ ಸಪ್ಪಳ ಮಾಡುತ್ತದೆ, ಕಬ್ಬಿಿಣದ ಕುರ್ಚಿಯ ಸಹೋದ್ಯೋೋಗಿಯಾಗಿ ಒಂದು ಸೋಫಾ ಬಂದಿದೆ, ಇವೆಲ್ಲವನ್ನು ನೋಡುತ್ತಾಾ ನನ್ನ ಕಣ್ಣುಗಳು ಹೊಸದಾಗಿವೆ!
ಒಂದು ಸೊನಾಟ ಕಂಪನಿಯ ಗೋಡೆ ಗಡಿಯಾರದ ಮೇಲೆ ಎರಡು ಸಣ್ಣ ಪ್ಲಾಾಸ್ಟಿಿಕ್ ಗೊಂಬೆಗಳು ಅದೆಷ್ಟೋೋ ಬಾರಿ ನಮ್ಮಿಿಂದ ಕದಿಯಲ್ಪಟ್ಟು ಮರಳಿ ಉಳಿದಿವೆ. ಆ ಗಡಿಯಾರ ಗಂಟೆಗೊಮ್ಮೆೆ ರಾಗ ಹಾಡಿ ಕೊನೆಯಲ್ಲಿ ಎಷ್ಟು ಗಂಟೆಯೋ ಅಷ್ಟು ಬೆಲ್ ಮಾಡಿ ಶಾಂತಿಯಾಗುತ್ತದೆ. ಕೆಳಗಿಳಿಯಲು ಆಸಕ್ತಿಿಯಿಲ್ಲದ ಕಬ್ಬಿಿಣದ ಚೇರೊಂದು ಗೋಡೆಯಲ್ಲಿ ಮೊಳೆಯನ್ನು ಹಿಡಿದು ನಿಂತಿದೆ. ಆ ಅಟ್ಟದಲ್ಲಿ ’ಮಾವಿನ ಹಣ್ಣು’ಗಳು ಹಣ್ಣಾಾಗುತ್ತಿಿದ್ದವು, ತೆಂಗಿನ ಕಾಯಿಗಳು ಕೊಬ್ಬರಿಯಾಗುತ್ತಿಿದ್ದವು, ಮಾರ್ಲಾಮಿ ಹಬ್ಬದಲ್ಲಿ ಮಾಡಿದ ಬಗೆ ಬಗೆ ತಿಂಡಿಗಳು ಅಟ್ಟಲೇರಿ ಎಡಗೆಯಲ್ಲಿ ಕಾಯುತ್ತಿಿದ್ದವು, ಅಳುಗುಣಿಮಣೆ ಕಣ್ಣಿಿಗೆ ಕಂಡರು ಬಳಸದೆ ಬಂಜೆಯಾಯಿತು. ಇವೆಲ್ಲದರ ಜೊತೆಗೆ ಹೆಚ್ಚಾಾಗಿ ಕಾಡುವ ನನ್ನ ಅಮ್ಮನ ಶಾಲೆಯ ದಿನದ ಓದಿನ ಪುಸ್ತಕಗಳು ತುಂಡುಗೋಡೆಯ ಮೇಲೆ ಇಂದಿಗೂ ಜೀವಂತವಿರೋದು. ಅಂದಿನ ಕನ್ನಡ ಪಾಠಗಳನ್ನು ಇಂದು ನಾನು ಹೋದಾಗಲೆಲ್ಲ ತಿರುವಿ ನೋಡುತ್ತೇನೆ. ಗಣಿತದ ಸರಣ ಲೆಕ್ಕಗಳನ್ನು ಬಿಡಿಸುತ್ತೇನೆ. ಪುಸ್ತಕದ ಸಣ್ಣ ಗಾತ್ರ ನೋಡಿ ಈಗ ನನ್ನ ಪುಸ್ತಕಗಳಿರುವ ದಪ್ಪವನ್ನು ನೆನೆದು ಕರುಬುತ್ತೇನೆ. ಅಮ್ಮನ ಪುಸ್ತಕಗಳ ಕಟ್ಟಿಿನಲ್ಲಿ ತಾತನ ತಂದೆಯ ಒಂದು ಪುಸ್ತಕ ಇದೆ. ಅದೂ ಎಂದಿಗೂ ತೀರದ ಕುತೂಹಲವಾಗಿ ನನ್ನಲ್ಲಿ ಉಳಿದಿದೆ. ಸ್ವಾಾತಂತ್ರ್ಯ ಪೂರ್ವದಲ್ಲಿಯೇ ನನ್ನ ವಂಶವೃಕ್ಷ ಕಲಿಕೆಗೆ ಅನುವಾಗಿತ್ತಾಾ ಅಂತ! ಆ ನನ್ನ ತಾತನ ಅಪ್ಪನ ಹೆಸರು ಸಣ್ಣತಿಮ್ಮಶೆಟ್ಟಿಿ. ಅವರ ಒಂದು ನೋಟ್‌ಬುಕ್‌ನಲ್ಲಿ   ’ಇದು ಸಣ್ಣತಿಮ್ಮನ ಪುಸ್ತಕ, ಯಾರೂ ಮುಟ್ಟಕೂಡದು’ ಅಂತ ಅವರೇ ಬರೆದುಕೊಂಡಿರೊ ಕೈ ಬರಹ ನೋಡೋಕೆ ಎರಡು ಕಣ್ಣು ಸಾಲದು.

ರಾತ್ರಿಿ ಊಟ ಮುಗಿದ ಮೇಲೆ ಆಗತಾನೆ ಚಾಪೆಯಲ್ಲಿ ಮಲಗಿ ಅವ್ವನಿಂದ ಹೊಸ ಕಥೆ ಪ್ರಾಾರಂಭವಾಗುತ್ತಿಿದ್ದಂತೆ ಗಾರೆ ಮೇಸ್ತ್ರಿಿಯಾಗಿದ್ದ ಶ್ರೀನಿವಾಸಯ್ಯ ಅಂದರೆ ನನ್ನ ತಾತ ಬರುತ್ತಿಿದ್ದರು. ಅವರ ಹೆಜ್ಜೆೆ ಸಪ್ಪಳ ಕೇಳುತ್ತಿಿದ್ದಂತೆ ಕನಸಿಂದ ಎಚ್ಚೆೆತ್ತವನಂತೆ  ಕೂತುಬಿಡುತ್ತಿಿದ್ದೆೆ. ಬೇಕರಿಯ ಸ್ವೀಟ್ ಬ್ರೆೆಡ್ಡು(ಈಗಿನ ದಿಲ್ಪಸನ್), ಕಾರ(ಮಿಕ್ಸ್ಚರ್), ಕಬ್ಬಿಿನ ಜಲ್ಲೆೆ, ಕಡ್ಲೆೆಪುರಿ-ಹೀಗೆ  ಏನಾದರೊಂದು ಅವರ ಕೈಯ್ಯಲ್ಲಿರುತ್ತಿಿತ್ತು. ಬಂದು ಕದ ತಟ್ಟುತ್ತಿಿದ್ದಂತೆ ನಾನೇ ರಾಡನ್ನು ಸರಿಸಿ ಕದ ತೆರೆದು ಅಯ್ಯನ ಅಂಗೈ ನೋಡುತ್ತಿಿದ್ದೆೆ. ಅದೊಂದು ಅಭ್ಯಾಾಸವೇ ಆಗಿಹೋಗಿತ್ತು. ಬಂದವರಿಗೆ ಅವ್ವ ಉಣ್ಣಲು ಅಣಿಮಾಡುವಳು. ನಾನು ಪೊಟ್ಟಣ ತೆರೆದು ಮುಕ್ಕಲು ಶುರುಮಾಡುತ್ತಿಿದ್ದೆೆ. ತಿಂದು ಮುಗಿಸುವುದರೊಳಗೆ ಅಯ್ಯನದೂ ಊಟ ಆಗುತ್ತಿಿತ್ತು. ನನ್ನ ಎಡಕ್ಕೆೆ ಅವ್ವ, ಬಲಕ್ಕೆೆ ಅಯ್ಯ ಮಲಗುತ್ತಿಿದ್ದರು. ದೀಪ ಆರಿ ಕತ್ತಲು ಗಪ್ ಎಂದು ಹಾಜರಾಗುತ್ತಿಿತ್ತು. ಸೀಮೇಎಣ್ಣೆೆಯ ದೀಪದ ಕಂಟಿನ ವಾಸನೆ ತೆಳ್ಳಗೆ ಬರುತ್ತಿಿತ್ತು. ಅವ್ವ ಮತ್ತು ಅಯ್ಯನ ಒಂದೇ ಕಂಬಳಿಯ ಸೇತುವೆಯಡಿಯಲ್ಲಿ ನಾನು ಬೆಚ್ಚಗಿರುತ್ತಿಿದ್ದೆೆ. ಸುಮ್ಮನೆ ಮಲಗುತ್ತಿಿದ್ದ ನನ್ನ ಮೇಲೆ ಒಂದು ಕೈ ಬರುತ್ತಿಿತ್ತು. ನನ್ನ ಕಾಲು ಇಬ್ಬರಲ್ಲಿ ಒಬ್ಬರ ಮೇಲೆ ಪಾಚುತ್ತಿಿತ್ತು. ಉಸಿರುಗಳು ಮಾತ್ರ ಕತ್ತಲ ಪ್ರಪಂಚದಲ್ಲಿ ತಿರುಗುತ್ತಿಿರುವಂತೆ ಅನಿಸುತ್ತಿಿತ್ತು. ಈಗ ಅವ್ವ ಮತ್ತು ಅಯ್ಯ ಮಾತಾಡಲು ಶುರುಮಾಡುತ್ತಿಿದ್ದರು. ಮುಖ್ಯವಾಗಿ ನನ್ನ ಅಮ್ಮನ ವಿಚಾರವಿರುತ್ತಿಿತ್ತು. ಹಣಕಾಸು, ಸಾಲ, ಬಡ್ಡಿಿ, ಹೊಲ, ಹಸು, ಹಾಲು, ಕೂಲಿ, ಸಂತೆಗಳು ಅವರ ಮಾತಿನಲ್ಲಿ ನಳನಳಿಸುತಿದ್ದವು. ನಾನು ಮಲಗಿದ್ದೇನೆ ಅಂದುಕೊಂಡ ಅವರು ನನ್ನ ಬಗ್ಗೆೆ ಮಾತಾಡಲು ಶುರುಮಾಡುತ್ತಿಿದ್ರು. ’ಮೊಗ ಯಾಕೊ ಖಾಯಿಲೆ ಬಿದ್ದೋೋಯ್ತು, ಅವ್ರಪ್ಪ ಏನಂದಾರೋ, ಸಿಸ್ವಾಾರಕ್ಕೆೆ ಹೋಗಿದ್ನ, ಊಟ ಮಾಡಿದ್ನ, ಈ ಸಲ ಸ್ಕೂಲಿಗೆ ಆಕಬೋದು, ಇಲ್ಲೆೆ ಸೇರ‌್ಸಕ್ಕೆೆ ಬ್ಯಾಾಡ ಅಂದರೇನೊ- ಅಂತೆಲ್ಲ ಮಾತನಾಡಿ ಮೆಲ್ಲಗೆ ಚಂದ್ರ, ಮೊಗ ಎನ್ನುತ್ತಾಾ ನಾನು ಎಚ್ಚರವಾಗಿರುವೆನಾ ಟೆಸ್‌ಟ್‌ ಮಾಡುತ್ತಿಿದ್ದರು. ನಾನು ಎಚ್ಚರವಿದ್ದು ಎಷ್ಟೋೋ ಬಾರಿ ಮಾತನಾಡುತ್ತಿಿರಲಿಲ್ಲ. ಆಗ ಮಾತು ಶುರುಮಾಡೋದು ನನ್ನ ಕತ್ತಲ ಗವಿಯ ಲೋಕಕ್ಕೆೆ ಉಚಿತವಾಗಿರಲಿಲ್ಲ. ಕತ್ತಲಲ್ಲಿ ಆರಾಮಾಗಿ ಮಾತಾಡುವ ದೈರ್ಯವೂ ಇರಲಿಲ್ಲ. ಒಂದೆರೆಡು ಬಾರಿ ಮೆಲ್ಲಗೆ ಉಸುರಿ ಸುಮ್ಮನಾಗುತ್ತಿಿದ್ದರು. ಎಲ್ಲರಿಗೂ ನಿದಿರೆ ಅತ್ತುವ ಸಮಯ. ಇವರ ಮಾತುಗಳ ನಡುವೆ ಅಗೋಚರ ವೀಕ್ಷಕನಾಗಿದ್ದ ನಾನು ಕೈಯ್ಯಂಚಿನ ನಡುವೆ ಬರುವ ಚಂದಿರನ ಬೆಳದಿಂಗಳ ಕೋಲುಗಳನ್ನು ಹೆಚ್ಚಾಾಗಿ ನೋಡುತ್ತಿಿದ್ದೆೆ. ಅವು ದಿನವೂ ಒಂದೇ ಜಾಗಕ್ಕೆೆ ಬೀಳುತ್ತಿಿದ್ದವು. ಆ ಕೋಲುಗಳಲ್ಲಿ ಯಾವುದೋ ಸಣ್ಣ ಬಿಂದುಗಳ ಸೈನ್ಯ ದಂಡೆತ್ತಿಿ ಸಾಗುತ್ತಿಿರುವಂತೆ ಧೂಳಿನ ಕಣಗಳು ಜಾರುತ್ತಿಿದ್ದವು. ಬೆಳದಿಂಗಳ ಕೋಲು ಬಿದ್ದ ಕೆಲವು ಜಾಗ ಬೆಳಗಿನ ದಿನಕ್ಕಿಿಂತ  ರಾತ್ರಿಿಯಲ್ಲಿ ವಿಶೇಷವಾಗಿ ಕಾಣುತ್ತಿಿದ್ದವು. ಅಟ್ಟದ ಮೇಲಿನ ಏಣಿಯನ್ನು ಹಾದು ಬರುವ ಕೋಲುಗಳನ್ನುಲೆಕ್ಕ ಹಾಕುತ್ತಿಿದ್ದೆೆ. ಲೆಕ್ಕ ಸಿಗುತ್ತಿಿರಲಿಲ್ಲ. ದೊಡ್ಡ ಕೋಲುಗಳು ಗಣನೆಗೆ ಬಂದರೂ ತೀರಾ ಚಿಕ್ಕ ಕೋಲುಗಳು ಸಾಕಷ್ಟಿಿರುತ್ತಿಿದ್ದವು. ನೋಡಿದಷ್ಟು ಹೆಚ್ಚಾಾಗುತ್ತಿಿದ್ದವು. ಉಸಿರುಗಳು ಜೋರಾಗಿ ಗೊರಕೆಯಾಗಿ ಮಾರ್ಪಾಡುವ ಹೊತ್ತಿಿಗೆ ನನಗೆ ಹೇಗೆ ನಿದಿರೆ ಬರುತ್ತಿಿತ್ತೋೋ ಕಾಣೆ, ಕಣ್ತೆೆರೆದಾಗ ಒಬ್ಬನೇ ಮಲಗಿರುತ್ತಿಿದ್ದೆೆ. ಬೆಳದಿಂಗಳ ಕೋಲುಗಳು ಮಾಯವಾಗಿ ಬೆಳಕ ಕೋಲುಗಳು ಅಷ್ಟು ಜನಪ್ರಿಿಯವಾಗುತ್ತಿಿರಲಿಲ್ಲ.

ಅವ್ವ ನನಗೆ ವಿಶೇಷ ಶಕ್ತಿಿಯಾಗಿ ಅಪ್ರತಿಮ ಸ್ವಾಾಭಿಮಾನಿಯಾಗಿ ಹೋರಾಟಪರ ಸ್ವಭಾವದವಳಾಗಿ ನಿಲ್ಲುತ್ತಾಾಳೆ. ಬದುಕಿನುದ್ದಕ್ಕೂ ದುಡಿದವಳು ಸಾಲದಲ್ಲಿ ಸಾಕಷ್ಟು ಬೆಂದಿದ್ದಾಾಳೆ. ಅಯ್ಯ ಮಾಡುತ್ತಿಿದ್ದ ಸಾಲಗಳಿಗೆ ಅದೆಷ್ಟೋೋ ಬಾರಿ ತಾ ನಿಂತು ಜವಬ್ದಾಾರಳಾಗಿ ಅವರಿಂದ ಅನ್ನಿಿಸಿಕೊಂಡು ತೀರಾ ಹೊಲಸಾಗಿ ಮಾತನಾಡಿದ ಸಿರಿವಂತರಿಗೆ ತಾನೂ ತಕ್ಕನಾದ ಅಶ್ಲೀಲ ಪದಗಳಿಂದ ಜಗಳವಾಡುತ್ತಾಾ ತನ್ನವರನ್ನು ಉಳಿಸಿಕೊಂಡಿದ್ದಾಾಳೆ. ಹೊಲದಲ್ಲಿನ ತಡಣಿ ಸೆತ್ತೆೆಯನ್ನು ಒಬ್ಬಳೇ ಕಿತ್ತಿಿದ್ದಾಾಳೆ. ಹಲಸಿನ ಹಣ್ಣನ್ನು ತೊಳೆ ತೊಳೆ ಬಿಡಿಸಿ ಮಾರಿದ್ದಾಾಳೆ. ಕೆ ಆರ್ ಎಸ್ ಸಂತೆಯಲ್ಲಿ ತೆಂಗಿನಕಾಯಿ, ಪರಂಗಿ ಹಣ್ಣು, ತಡಣೀಕಾಳು, ರಾಗಿಯನ್ನು ಮಾರಿದ್ದಾಾಳೆ. ಅರ್ಧ ಕೆ.ಜಿ ಮಾಂಸವನ್ನು ತಂದು ಕೇವಲ ಸಾಂಬರಿನಲ್ಲಿ ತೃಪ್ತಿಿಯಾಗಿದ್ದಾಾಳೆ. ಮಸೀದಿಯ ಸಾಬರಿಂದ ಹಸಿರು ತಾಯತ ಬಿಗಿಸಿ ನನ್ನ ಜ್ವರ ಓಡಿಸಿದ್ದಾಾಳೆ. ಬಿಸಿಲು ಹೆಚ್ಚಾಾದಾಗ ಸೆರಗಿನಿಂದ ತಲೆ ಸುತ್ತಿಿಕೊಂಡು ಸಂತೆ ಮುಗಿಸಿದ್ದಾಾಳೆ. ಹವಾಯಿ ಚಪ್ಪಲಿಯಲ್ಲೇ ಎಲ್ಲಾಾ ಮದುವೆ ಮಾಡಿದ್ದಾಾಳೆ, ನೋಡಿದ್ದಾಾಳೆ. ಬೇರೆಯವರ ಬೆಳೆ ನೋಡಿ ತನ್ನೊೊಳಗೇ ಉರಿದಿದ್ದಾಾಳೆ. ಮನೆ ಮತ್ತು ಹೊಲದ ಹಾದಿಗೆ ಸಾಕಷ್ಟು ಬಾರಿ ಗಂಟಲು ಕಟ್ಟುವ ಹಾಗೆ ಕಿರುಚಿದ್ದಾಾಳೆ. ಏಕಾಏಕಿ ಮನೆಯಿಂದ ನಾಪತ್ತೆೆಯಾದ ಅಯ್ಯನನ್ನು ಹುಡುಕುತ್ತಾಾ ಪಕ್ಕದಳ್ಳಿಿಗರಿಂದ ಅಯ್ಯೋ ಎನಿಸಿಕೊಂಡಿದ್ದಾಾಳೆ. ತನ್ನ ಮಕ್ಕಳಿಗೆ ಸೊಪ್ಪುು ಕಿತ್ತು ಉಪ್ಪುು ಸುರಿದು ಅದನ್ನೇ ಊಟವಾಗಿ ಬಡಿಸಿದ್ದಾಾಳೆ. ಜಮೀನಿನ ಕ್ರಾಾಯ ಪತ್ರಗಳನ್ನು ಜೋಪಾನ ಮಾಡಿದ್ದಾಾಳೆ.  ಯಾರೂ ಬೇಡ, ನಮಗಾರು ಆಗರು ಅನ್ನುತ್ತಲೇ ಅವರಿವರ ಕಷ್ಟಕ್ಕೆೆ ಮುಂದಾಗಿದ್ದಾಾಳೆ. ಸ್ವಲ್ಪ ವರ್ಷಗಳ ಹಿಂದಷ್ಟೆೆ ಗರ್ಭಕೋಶಕ್ಕೆೆ ಸಂಬಂಧಪಟ್ಟ ಅದಾವುದೋ ಆಪರೇಷನ್ ಕೂಡ ಮಾಡಿಸಿಕೊಂಡಿದ್ದಾಾಳೆ. ಹೊಸ ಸಾಲಗಳನ್ನು ಸ್ವೀಕರಿಸಿದ್ದಾಾಳೆ. ಹಳೇ ಸಾಲಗಳನ್ನು ತೀರಿಸಿದ್ದಾಾಳೆ. ತನ್ನ ಮಡಿಲಿಗೆ ಮರಳಿ ಬಿದ್ದ ಕಿರಿಯ ಮಗಳ ಸ್ಥಿಿತಿಗಾಗಿ ಚಡಪಡಿಸಿದ್ದಾಾಳೆ. ತನ್ನ ಮೊಮ್ಮಕ್ಕಳ ಮದುವೆಯ ಊಟವನ್ನು ಹೊಗಳಿದ್ದಾಾಳೆ. ತನ್ನ ಕುಟುಂಬವನ್ನು ಕಂಡರೆ ದ್ವೇಶಿಸುತ್ತಿಿದ್ದವನು ಸತ್ತಾಾಗ ತೆಗಳುತ್ತಾಾ ಅವನ ಒಂದೆರೆಡು ಒಳ್ಳೆೆಯ ಗುಣಗಳನ್ನು ಕೊಂಡಾಡಿದ್ದಾಾಳೆ. ಮಾರ್ಲಾಮಿ ಹಬ್ಬಕ್ಕೆೆ ಮುಂದಾಗಿ ಅಡುಗೆಯ ಸಾಮಾನು ಸರಂಜಾಮುಗಳಿಗೆ ಚೀಟಿ ಹಾಕುತ್ತಾಾಳೆ. ಮುಂದಿನ ವರ್ಷ ನನ್ನನ್ನು ಯಾವ್ಯಾಾವುದೋ ಪುಣ್ಯಕ್ಷೇತ್ರಕ್ಕೆೆ ಕರೆದೊಯ್ಯಲು ಈಗಾಗಲೇ ಗುಂಪೊಂದರಲ್ಲಿ ಚೀಟಿ ಕಟ್ಟುತ್ತಿಿದ್ದಾಾಳೆ.
ಮೂರು ಗ್ರಾಾಮಿನ ಸಮಸ್ಯೆೆಗೆ ಮುನ್ನೂರು ಕೆ.ಜಿ ಸಂಕಟಪಡುವ ಅದೆಷ್ಟೋೋ ಮನಸ್ಸುಗಳಿಗೆ ಇವಳು ಖಂಡಿತಾ ಸ್ಪೂರ್ತಿ. ಅಕ್ಷರ ಗೊತ್ತಿಿಲ್ಲ, ಶ್ರೀಮಂತಳಲ್ಲ, ಇನ್ನೊೊಬ್ಬರ ಆರೈಕೆಯಲ್ಲಿ ಆರಾಮು ಜೀವನ ನಡೆಸಿದವಳೂ ಅಲ್ಲ. ಈ ಎಲ್ಲಾಾ ’ಸೆಟಲ್’ ಲೈಫ್‌ಗಳನ್ನು ಬಳಿಯೂ ಬರದ ಹಾಗೆ ನೋಡಿಕೊಂಡಳೋ ಏನೋ, ಇಷ್ಟು ಒದ್ದಾಾಡುತ್ತಾಾ ಖಂಡಿತವಾಗಿಯೂ ನಗುನಗುತ್ತಾಾ, ಕೆಮ್ಮುತ್ತಾಾ ಜೀವಿಸಿದ್ದಾಾಳೆ. ಅದಕ್ಕೆೆ ಜೀವಂತ ಸಾಕ್ಷಿಿ ನಾನೆ!

ನನ್ನನ್ನು ಸೇರಿದಂತೆ ಎಷ್ಟೋೋ ಮಂದಿ ತಮ್ಮ ತಮ್ಮ ಸ್ವಂತ ಮನೆ, ಸ್ವಂತ ಸಂಬಂಧಗಳಿಗೆ ಸೆಲೆಬ್ರೆೆಟಿಯಾಗಲು ನಿಂತಿದ್ದೇವೆ. ನಾವು ಅವರೊಳಗೊಬ್ಬರಾಗುವ ಮೊದಲು ನಾನೇ ಬೇರೆ, ನಾನು ಇವರಿಗಿನ್ನ ವಿಭಿನ್ನ ಅಂತ ಗ್ಯಾಾಪ್ ಮೆಂಟೈನ ಮಾಡುವ ಕೆಟ್ಟ ಮನಸ್ಥಿಿತಿಗೆ ವಾಲಿದ್ದೇವೆ. ಹಾಗಾಗುವುದು ಬೇಡ. ತಿದ್ದುಕೊಳ್ಳೋೋಣ. ಎಲ್ಲೇ ಇರಲಿ, ಹೇಗೇ ಇರಲಿ ಸಾಧ್ಯವಾದಷ್ಟು ನಮ್ಮವರಿಗೆ ಹತ್ತಿಿರವಾಗೇ ಇರೋಣ. ದೂರವಿದ್ದು ಕಾಮನಬಿಲ್ಲಿನ ಹಾಗೆ ಸಿಕ್ಕೂ ಸಿಗದಂತ, ಕಂಡೂ ಕಾಣದಂತ ಬದುಕು ತೃಪ್ತಿಿಯಾಗದು. ಬಣ್ಣಕ್ಕೆೆ ಬೆರಗಾಗುವುದು ಅನ್ನೊೊ ವಾಸ್ತವ ಸತ್ಯಕ್ಕೆೆ ನೇರವಾಗಿ ಎಷ್ಟೋೋ ಜನ ನಾವುಗಳೇ ಉದಾಹರಣೆಯಾಗಿ ನಿಂತಿದ್ದೇವೆ. ನಾನಂತೂ ಆ ಹತ್ತಿಿರವಿರುವ, ನಮ್ಮವರನ್ನು ಪ್ರಾಾಣವಾಗಿ ಪ್ರೀತಿಸುವ, ಹಂಬಲಿಸುವ ಸಂಬಂಧಗಳನ್ನು ಉಳಿಸಿಕೊಳ್ಳುವ ಹಾದಿಯಲ್ಲಿದ್ದೇನೆ. ಕಳಕೊಂಡ ಮೇಲೆ ಕೆಲವು ಸಂಬಂಧ ಕ್ಷಣಕೂಡ ಮರಳವು. ಮಮತೆ ಎಲ್ಲರಿಗೂ ಅವಶ್ಯಕ. ಹಂಬಲಿಸುವಿಕೆಯಿಂದ ದೂರ ಸರಿಯದಿರಿ..

1 comment: