ಮುಖ್ಯವಾಗಿ ಮತ್ತು ಅರ್ಜೆಂಟಾಗಿ ಭಾತೃಶ್ರೀ ರವಿಯವರಿಗೆ,,
ಜೀವನ ತೂತು ಬಿದ್ದ ದೋಣಿಯಾಗಬಾರದು
ನಾವೆಲ್ಲ ಬದುಕೆಂಬ ನದಿಯಲ್ಲಿರುವಾಗ,,,
ಮನುಷ್ಯನಿಗೆ ಪ್ರತಿಯೊಂದರಲ್ಲಿಯೂ ಸಂಭ್ರಮಿಸುವ ಸಾಮಥ್ರ್ಯ ಬರದಿದ್ದಾಗ ಅವನ ಪಾಲಿಗೆ ಸಂಭ್ರಮದ ಬಾಗಿಲುಗಳು ಮುಚ್ಚುತ್ತಾ ಹೋಗುತ್ತವೆ. ಹೀಗಿರುವಾಗ ಕಾಯಕಯೋಗಿಯಾಗಿ ನಮ್ಮ ನಮ್ಮ ಕೆಲಸಗಳನ್ನು ಶಿರಷಾವಹಿಸಿ, ಗಮನವಿಟ್ಟು ಮಾಡಿದಾಗ ಅಲ್ಲಿ ತಂತಾನೆ ಸಂಭ್ರಮದ ಬಾಗಿಲುಗಳು ತೆರೆಯುತ್ತಾ ಹೋಗುತ್ತವೆ.
ನಿಜಕ್ಕೂ ನಾವು ಭಾಗ್ಯಶಾಲಿಗಳು. ಏಕೆಂದರೆ ಕಠಿಣ ಹೃದಯದವರಲ್ಲದ, ಯಾರೊಬ್ಬರಿಗೂ ಮೋಸಮಾಡದ, ಬೇಜವಬ್ದಾರಿಯಿಲ್ಲದ, ಸಹೃದಯಿ ತಂದೆ ತಾಯಿಯನ್ನು ಹೊಂದಿದಕ್ಕಾಗಿ. ಅವರು ನಮಗೆ ಬೇಕಾದ ಅವಶ್ಯಕತೆಗಳನ್ನು ಪೂರೈಸಲು ತಮ್ಮ ತನು, ಮನ, ಧನ ಸಮರ್ಪಿಸಿ ಬಳಲಿ ಬೆಂಡಾದವರು. ಹಾಗಾಗಿ ನಾವು ಏನಾದರೂ ಅವರಿಗಾಗಿ ಸಮರ್ಪಿಸಬೇಕಲ್ಲ! ಏನನ್ನು ಸಮರ್ಪಿಸುತ್ತಿದ್ದೇವೆ?
ಭಕ್ತನೊಬ್ಬನಿಗೆ ಪ್ರತ್ಯಕ್ಷವಾದ ಭಗವಂತ ಪ್ರಶ್ನೆ ಕೇಳಿದನಂತೆ....
ಭಗವಂತ:- ಇಡೀ ಪ್ರಪಂಚ ಎಷ್ಟೊಂದು ವಿಶಾಲವಾಗಿದೆಯಲ್ಲ, ಇದರಲ್ಲಿ ನಿನ್ನದೇನು ಭಕ್ತ?
ಭಕ್ತ:- ಭಗವಂತ, ಈ ಮನೆ ನಂದು, ಈ ಆಸ್ತಿ ನಂದು, ಈ ಚಿನ್ನಾಭರಣವೆಲ್ಲ ನನ್ನದು.
ಭಗವಂತ:- ನೀ ಹೇಳಿದ ನಿನ್ನವೆಲ್ಲ ನೀ ಹೋದಲ್ಲಿಗೆಲ್ಲ ಬರಲಾಗುವುದಿಲ್ಲ. ಅಲ್ಲದೆ ಅದೆಲ್ಲ ಮಿಕ್ಕವರ ಬಳಿಯೂ ಇದೆ. ಹಾಗಾಗಿ ನಿನ್ನದೇನು?
ಭಕ್ತ:- ಭಗವಂತ ಇವಳು ನನ್ನ ಹೆಂಡತಿ, ಇವರೇ ನನ್ನ ಮಕ್ಕಳು. ಇವರು ನನ್ನವರು.
ಭಗವಂತ:- (ನಗುತ್ತಾ) ನಿನ್ನ ಉಸಿರು ನಿಂತ ಮರುಕ್ಷಣದಿಂದ ನಿನ್ನ ಯಾವ ಬೆಂಬಲವೂ ಅವರಿಗಿರುವುದಿಲ್ಲ. ನೀ ಸತ್ತೆ ಎಂಬ ಕಾರಣಕ್ಕೆ ಅವರಾರು ನಿನ್ನೊಡನೆ ಬರುವುದಿಲ್ಲ. ಹಾಗಾಗಿ ಅವರು ನಿನ್ನವರಲ್ಲ.
ಭಕ್ತ:- ಭಗವಂತ ಹಾಗಾದರೆ ನನ್ನದೇನೂ ಇಲ್ಲವ ಈ ಪ್ರಪಂಚದಲ್ಲಿ?
ಭಗವಂತ:- ಇದೆ. ನೀನು ವ್ಯಯವಾಗಿ ಕಳೆಯುತ್ತಿರುವ ಈ ಒಂದೊಂದು ಕ್ಷಣವೂ ನಿನ್ನದು. ಸಮಯ ಮಾತ್ರ ಅವರವರ ಖಾಯಂ ಹಿಂಬಾಲಕ. ನೀ ಬದುಕಿರುವವರೆಗೂ ನಿನ್ನೊಡನಿದ್ದು ನಿನ್ನ ಪ್ರಗತಿಗೂ, ನಿನ್ನ ಅವನತಿಗೂ ಈ ಸಮಯವೇ ಕಾರಣ. ಸಮಯವನ್ನು ಸರಿಯಾಗಿ ಬಳಸಿಕೊಂಡರೆ ಅದು ನಿನ್ನನ್ನು ಉನ್ನತೀಕರಣಕ್ಕೆ ಕೊಂಡೊಯ್ಯುತ್ತದೆ. ಹಾಗಾಗಿ ಲೋಕದಲ್ಲಿ “ಸಮಯ” ಮಾತ್ರ ನಿನ್ನದು. ಆ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸು. ಸಮಯಕ್ಕಿಂತ ಮತ್ತೊಬ್ಬ ಸಂಬಂಧಿಕ ಇಲ್ಲ. ಸಮಯಕ್ಕಿಂತ ಮತ್ತೊಬ್ಬ ಗೆಳೆಯನಿಲ್ಲ. ಸಮಯಕ್ಕಿಂತ ಬೇರೊಂದು ಉಡುಗೊರೆಯಿಲ್ಲ ಎಂದನಂತೆ ಭಗವಂತ.
ಸಮಯದ ಮಹತ್ವಕ್ಕಾಗಿ ಈ ಕಥೆ ಬಂದಿರಬಹುದು.
ಈ ಸಮಯದ ಸದ್ಭಳಕೆ ಹೇಗೆ??
ನಮ್ಮ ಮನೆ, ನಮ್ಮ ಕುಟುಂಬ, ನಮ್ಮ ನೆಂಟರಿಷ್ಟರು, ನಮ್ಮ ಗದ್ದೆ, ಹೊಲ, ಹಸು-ಕರು, ಹೀಗೆ ಪ್ರತಿಯೊಂದರಿಂದಲೂ ನಾವು ಕಲಿಯುವುದಿರುವಾಗ ನಮ್ಮ ಸಮಯವನ್ನು ಅವಕ್ಕಾಗಿ ಮೀಸಲಿಡುವುದು ಕ್ಷೇಮಕರ.
*ನಮ್ಮ ಮನೆಯ ಕಷ್ಟ-ಸುಖಗಳಿಗಿನ್ನ ಬೇರೆ ಮನೆಯ ನೀತಿ ಪಾಠ ನಮಗೆ ಬೇಕಿಲ್ಲ. ಆದರೆ ನಾವು ನಮ್ಮ ಮನೆಯನ್ನು ಬಿಟ್ಟು ಬೇರೆಲ್ಲ ಕಡೆ ಕಲಿಯಲು ಬಯಸುತ್ತೇವೆ.
* ನೆಂಟರಿಷ್ಟರು “ನಮ್ಮ ಬಳಿ ಸ್ವಾಭಿಮಾನ, ಸಾಧನೆ ಇದ್ದಾಗ ಬಂದು ಹರಸುತ್ತಾರೆ, ಅದೇ ಇಲ್ಲದಾಗ ತಿರುಗಿಯೂ ನೋಡರು”. ನಮ್ಮಲ್ಲಿ ಛಲ ಹುಟ್ಟಲು ಇವರಿಗಿನ್ನ ಬೇರೆ ಗುರುಗಳು ನಮಗೆ ಬೇಕಿಲ್ಲ. ಆದರೆ ನಾವು ಅದನ್ನು ಗಮನಿಸದೆ ಸ್ವಾಭಿಮಾನವನ್ನು ತಿಪ್ಪೆಗುಂಡಿಯಲ್ಲಿ ಬಿಸಾಡಿ ಮತ್ತವರ ಮನೇ ಬಾಗಿಲಿಗೆ ಹಲೆವ ನಾಯಿಯಾಗುತ್ತೇವೆ.
* ನಮ್ಮ ಗದ್ದೆ-ಹೊಲ ನಾವು ಆತ್ಮಸಾಕ್ಷಿಯಿಂದ ದುಡಿದಾಗ ಹಸನಾಗಿ ನಂದನವನವಾಗುತ್ತವೆ. ಸುಮ್ಮನೇ ಕಾಲಹರಣ ಮಾಡಿ ನಾವು ಕೂತರೆ ಕಳೆ ನಗುತ್ತದೆ, ಬೆಳೆ ಕೊರಗುತ್ತದೆ. ನಮ್ಮದೇ ದುಡಿಮೆಯಿಂದ ನಂದನವನವಾಗಬೇಕಾಗಿದ್ದ ನಮ್ಮ ಹೊಲ ನಮ್ಮ ಕಣ್ಣಿಗೆ ನರಕಸದೃಷವಾಗಿ ಸ್ಮಷಾಣದಂತಾಗುತ್ತದೆ.
* ನಮ್ಮ ಹಸು ನಾವು ಪ್ರೀತಿಯಿಂದ ಆರೈಕೆ ಮಾಡಿ ಅದನ್ನು ಸಂತೃಪ್ತಗೊಳಿಸಿದರೆ ಅದು ನಮ್ಮನ್ನು ಹೆಚ್ಚಾಗಿ ಹಾಲು ನೀಡುವ ಮುಖೇನ ನಮ್ಮನ್ನು ಖುಷಿಪಡಿಸುತ್ತದೆ. ನಾವು ಅದನ್ನು ತಾತ್ಸಾರದಿಂದ ನೋಡಿದರೆ ಅದು ನಮ್ಮನ್ನು ತಾತ್ಸಾರದಿಂದಲೇ ನೋಡುತ್ತದೆ.
ಇದಿಷ್ಟೇ ಅಲ್ಲ, ಇನ್ನೂ ಅನೇಕ ಸಂಗತಿಗಳು ನಮಗೆ ಜೀವನ ಪಾಠ ಕಲಿಸುತ್ತವೆ. ಹೃದಯ ತೆರೆದು ನಾವು ಕೈಚಾಚಿ ಕಲಿಯಲು ಸಿದ್ಧರಾದಾಗ ಮಾತ್ರ.
ನಮ್ಮ ಮನೆಯಲ್ಲಿ ಸಾಕಷ್ಟು ಹಣವಿಲ್ಲದಿರುವುದು ನಮಗೆ ಒಳ್ಳೆಯದೇ ಆಗಿದೆ. ಏಕೆಂದರೆ ಅದನ್ನು ಸಂಪಾದನೆ ಮಾಡುವ ಅವಕಾಶ, ಗುರಿ ನಮ್ಮ ಪಾಲಿಗಿದೆ. ಶ್ರೀಮಂತನ ಮನೆಯಲ್ಲಿ ನಾವು ಹುಟ್ಟ ಬೇಕಿತ್ತು ಎಂದುಕೊಳ್ಳುವುದು ನಮ್ಮ ಮೂರ್ಖತನ. ಹಾಗೇನಾದರು ಹುಟ್ಟಿದ್ದರೆ ಹೋರಾಟದ ಬದುಕು ನಮ್ಮದಾಗುತ್ತಿರಲಿಲ್ಲ. ಅಕ್ವೇರಿಯಮ್ ಮೀನು ಅಥವಾ ಪಾಟ್ ನಲ್ಲಿನ ಒಂದೇ ಗುಲಾಭಿ ಹೂ ಬಿಡುವ ಹೂಗಿಡದಂತಾಗುತ್ತಿದ್ದೆವು. ಎಲ್ಲ ಸಿಗುವ, ನಮ್ಮ ಬಳಿ ಎಲ್ಲ ಇದೆ ಎಂದು ಸಂಭ್ರಮಿಸುವ ಬಾವಿಯೊಳಗಿನ ಕಪ್ಪೆಯಂತಾಗುತ್ತಿದ್ದೆವು. ಆದರೆ ಈಗ ನಮ್ಮ ಜೀವನ ವಿಶಾಲ ಸಮುದ್ರದಲ್ಲಿ ಸಾಧನೆ ಮತ್ತು ಸಂಪಾಧನೆಯನ್ನು ನಮ್ಮಿಷ್ಟದಂತೆ ಸ್ವಂತವಾಗಿ ಸೃಷ್ಟಿಸಿಕೊಳ್ಳುವ ಸುವರ್ಣಾವಕಾಶದಲ್ಲಿದೆ. ಆದರೆ ಅದನ್ನು ಗಳಿಸಲು ಸಮಯದ ಸದುಪಯೋಗ ಬಹಳ ಮುಖ್ಯ. ಒಣಗಿ ನಿಂತ ಸಸಿ ಮಳೆ ಬಿದ್ದಾಕ್ಷಣ ಬೇಗ ನೀರನ್ನು ಹೀರಿ ಬದುಕಲು ಹೇಗೆ ಯತ್ನಿಸುತ್ತದೆಯೋ ಹಾಗೆ ನಮಗೆ ಸಮಯ ಬಂದಿದೆ. ಸಮಯವನ್ನು ಹೀರಿಕೊಂಡು ಕ್ರಿಯಾಶೀಲರಾಗುವ ಚಾತಕ ಪಕ್ಷಿ ನಾವಾಗಬೇಕಷ್ಟೆ.
ಸಾಧನೆಗೆ ಕೆಲ ಸಮಯಬೇಕಾಗಬಹುದಷ್ಟೇ. ಸಾಧನೆ ಎಂದರೆ ಈ ಸಮುದ್ರವನ್ನು ಆ ಸಮುದ್ರಕ್ಕೆ ಶಿಫ್ಟ್ ಮಾಡುವುದಲ್ಲ. ಜೀವನವೆಂಬ ಸಮುದ್ರದಲ್ಲಿ ಜ್ಞಾನವೆಂಬ ಶಿಪ್ ಹಿಡಿದು ಎಲ್ಲವನ್ನು ದೃಷ್ಟಿಸುತ್ತಾ ಅನುಭವಿಗಳಾಗಿ ಸಾಗೋದು. ಸ್ವಾಭಿಮಾನಿಯಾಗಿ ಬಾಳೋದು. ಮದುವೆಯಾದ ಮಾರನೇಯ ದಿನವೇ ಹೆಂಡತಿಗೆ ಮಗುವಾದರೆ ಗಂಡನ ಸ್ಥಿತಿ ಹೇಗಾಗಬೇಡ. ಆ ಮಗುವಿಗೆ ಕಾರಣ ನಾನಲ್ಲ ಅಂತ ಗೊತ್ತಿದ್ದರಂತೂ ಆತನ ಜೀವನ ಊಹಿಸಿಯೂ ಇಲ್ಲದ, ಊಹಿಸಲೂ ಆಗದ ಸ್ವರ್ಗದ ಕೊನೆಯ ಬಾಗಿಲನಂತಾಗುತ್ತದೆ. ಆದ್ದರಿಂದ ತಾಳ್ಮೆ ಬಹಳ ಮುಖ್ಯ ಶ್ರಮಿಕರಿಗೆ.
ಅಣ್ಣನಾದ ರವಿಯನ್ನು ಕುರಿತು, ಅವನ ಮನೋಲಹರಿಗೆ ಒಂದೆರೆಡು ಕಿವಿಮಾತು:-
ನಿಜವಾಗಿ ನನಗೆ ನೀನು ಮಾರ್ಗದರ್ಶಕನೋ, ಹಿತೈಷಿಯೋ ಆಗಬೇಕು. ಸಧ್ಯಕ್ಕಂತೂ ಅದು ಕಡಲಾಳದ ಮುತ್ತಾಗಿ ಹೋಗಿದೆ. ಕೆಲಸ, ಸಮಯ, ಜವಬ್ದಾರಿ, ಗುರಿ, ಕುಟುಂಬ ಇವೆಲ್ಲವನ್ನು ಕಿತ್ತೆಸೆಯುವ ಮೂರ್ಖತನಕ್ಕೆ ನಾವು ಕೈ ಹಾಕುವುದು ಬೇಡ. ಸುಸಂಸ್ಕøತರ ಹೊಟ್ಟೆಯಲ್ಲಿ ಜನಿಸಿ ಅಸಂಸ್ಕøತಿಯ ಅಜ್ಞಾತವಾಸ ನಮಗೆ ಬೇಡ.
ಮೊನ್ನೆ ಊರಿಗೆ ಬಂದಾಗ ಗಿರಿಜಾಂಟಿಯವರು ನೀನು ನಿನ್ನ ಮದುವೆ ವಿಷಯವಾಗಿ ಅವರೊಡನೆ ಪ್ರಸ್ಥಾಪಿಸಿದ್ದನ್ನು ಸಾಂಗವಾಗಿ ಹೇಳಿದರು. ನನಗೆ ಕೋಪ ಮತ್ತು ನಗು ಎರಡು ಒಟ್ಟೊಟ್ಟಿಗೆಯಾದವು. ಯಾವತ್ತಿಗೂ ಮದುವೆ ಎಂಬುದು ಮನೆಯವರ ಅನಿಸಿಕೆಯಾಗಬೇಕು. ನೀನು ಈಗಲೇ ಆಗಬೇಕೆಂದು ಕುಳಿತರು ನಿನಗೊಂದು ದುಡಿಮೆ ಬೇಡವೇ? ಕೃಷಿಯನ್ನು ಯದ್ವಾತದ್ವಾ ಮಾಡುವ ನೀನು ಅದರಲ್ಲಿ ಸಫಲನಾಗುತ್ತೀಯ ಅನ್ನೋ ನಂಬಿಕೆಯಂತೂ ನನಗೆ ಎಳ್ಳಷ್ಟೂ ಇಲ್ಲ. ಮದುವೆಗೆ ಯೋಗ್ಯತೆಯೂ ಬೇಕು. ಒಬ್ಬ ಹೆಣ್ಣು ಮಗಳು ಮಲಗನಕೆರೆ ಬಸ್ಸಿನಲ್ಲಿ ಬಂದು ನಿನ್ನ ಹೆಂಡತಿಯಾಗುವುದಿಲ್ಲ. ಅದಕ್ಕೆ ಶಾಸ್ತ್ರವಿದೆ, ಸಂಪ್ರದಾಯವಿದೆ. ಎರಡು ಮನೆತನಗಳ ಸಮ್ಮಿಶ್ರ ಸರ್ಕಾರ ಅದು. ಅದರಲ್ಲಿಯೂ ಇಂದಿನ ಕಾಲದ ಹೆಣ್ಣು ಮಕ್ಕಳಿಗೆ ನಿರೀಕ್ಷೆಗಳು ಜಾಸ್ತಿ. ನಾಳೆಯಾದರೂ ಮದುವೆಯಾಗಿ ಬರುವ ಆ ನನ್ನ ಅತ್ತಿಗೆಯಮ್ಮನವರು
ಉಪ್ಪೆಸರು ರಾಗಿ ಮುದ್ದೆ
ಹಳ್ಳಿದಾರಿ ಹೊಲ ಗದ್ದೆ,
ನೆಲದ ಮಂಜಲಿಗೆಯ ನಿದ್ದೆ,
ಹಾಸಿಗೆಯಷ್ಟು ಕಾಲು ಚಾಚುವ ಮುಗ್ಧೆ,,
ಅತ್ತೆ-ಮಾವನ್ನ ಅಪ್ಪ-ಅಮ್ಮ ಅನ್ನುಕೊಳ್ಳೋ ಶ್ರದ್ದೆ,
ಈ ಎಲ್ಲಾ ಕ್ವಾಲಿಟೀಸ್‍ಗಳನ್ನು ಹೊಂದಿರುತ್ತಾರೆ ಎಂದು ಧೈರ್ಯವಾಗಿ ಹೇಳುವ ಧೈರ್ಯ ನನಗಿಲ್ಲ. ನಾವು ಚೂರು ಪಾರು ನಿನ್ನ ಮೇಲೆ ನಂಬಿಕೆ ಇಡಬಹುದು, ಬರುವವರೂ ಹಾಗೆಯೇ ಇರಬೇಕೆಂಬ ಯಾವ ಕಾನೂನು ಇಲ್ಲ. ಅವರವರ ಜೀವನವಲ್ಲವ, ಹೊಂದಾಣಿಕೆ ಇದ್ದರೆ ನಮ್ಮಭಾಗ್ಯ. ಒಂದು ಹಂತಕ್ಕೆ ಒಬ್ಬ ಹೆಣ್ಣುಮಗಳು ನಮ್ಮ ಮನೆಗೆ ಬರುವುದರಲ್ಲಿ ನಮಗಾವ ಲಾಸಿಲ್ಲ. ನಾಳೆಯಾಗುವುದು ಇಂದೇ ಆಯಿತಲ್ಲ ಎಂದು ಸಮಾಧಾನವಾಗಬಹುದು. ಆದರೆ ಯಾವಾಗ ಬರಬೇಕು, ಹೇಗೆ ಬರಬೇಕು ಎಂಬ ಒಂದು ನೀತಿಯಿರುತ್ತದೆ. ಅದು ನಮ್ಮ ಅಪ್ಪ, ಅಮ್ಮನಿಗೆ ಸಂಪೂರ್ಣ ಬಿಟ್ಟ ವಿಚಾರ. ನಮ್ಮದು ದುಡಿಯುವ ಪರಿಪಕ್ವ ವಯಸ್ಸು. ಹಗಲು-ಇರುಳು ದುಡಿದರೂ ಸಾಕಾಗದ ವಯೋಮಾನದಲ್ಲಿ ಹಾಸಿಗೆಯಲ್ಲೇ 10 ಗಂಟೆ ಕಳೆದರೆ ನಾವು ಬೆಳಕಾಗುವುದು ಅಸಾಧ್ಯ. ಹಾಗಾಗಿ ಮದುವೆ ಎಂಬುದು ಜೀವನಕ್ಕೆ ಬೆಳಕಾಗಬೇಕೇ ಹೊರತು ತೆವಲಿನ ಚಳಿಗಾಲದ ಮುಂಜಾನೆ ಬೆಂಕಿಯಲ್ಲ. ದಯಮಾಡಿ ಇನ್ನೆಂದು ಆ ಗೋಜಿಗೆ ಹೋಗದೆ ಕಾಯಕದ ಕಡೆ ಗಮನವಿಡು. ನಾನು ಅಲ್ಲಿದ್ದರೆ ಟೈಮ್ ಟೇಬಲ್ ಹಾಕಿ ಕೆಲಸ ತೆಗೆಯುತ್ತಿದ್ದೆ, ನಿಜಕ್ಕೂ ಆ ಚಕ್ರವ್ಯೂಹದಿಂದ ಬಚಾವಾಗಿದ್ದೀಯ. ಹಾಗಾಗಿ ನಿನ್ನ ಮನಸ್ಸಿಗೆ ತಂದುಕೊಂಡು ಕೆಲಸಮಾಡು. ಈಗ ನಾವು ದುಡಿಯೋದು ಸಂಪೂರ್ಣ ನಮಗೆ. ಜೀವನಕ್ಕೆ ಈಗ ಕಣ್ಣುಬಿಡುತ್ತಿರುವ ನಾವು ಸೋಮಾರಿಯಾದರೆ ಅನುಭವಿಸಬೇಕಾದ್ದು ಅಷ್ಟಿಷ್ಟಲ್ಲ.
ಪ್ರತಿನಿತ್ಯವೂ ಹೊಸ ಸಮಯ ನಮಗಾಗಿ ಉಚಿತವಾಗಿ ಸಿಗುವಾಗ ಅದನ್ನು ಕೆಲಸಕ್ಕೆ ಬಾರದ ಹರಟೆಯಲ್ಲಿಯೋ, ಅನಾವಶ್ಯಕ ಪಾತ್ರದಲ್ಲಿಯೋ, ಅನಾರೋಗ್ಯಕರ ಮೋಜಿನಲ್ಲಿಯೋ ಯಾಕೆ ವ್ಯಯಮಾಡಬೇಕು.
ನಮ್ಮ ಮನೆ ಉಲ್ಲಾಸಮಯವಾಗುವುದು ನಮ್ಮಿಂದಲೇ,
ನಮ್ಮ ಹೊಲ-ಗದ್ದೆ ನಂದನವನವಾಗುವುದು ನಮ್ಮಿಂದಲೇ,
ನಾನು ಅಲ್ಲಿದ್ದ ಎರಡೂ ದಿನ ನೀನು ಚನ್ನಾಗಿಯೇ ಕೆಲಸ ಮಾಡಿದೆ. ಅದೇ ರೀತಿ ದಿನನಿತ್ಯವೂ ನೀ ದುಡಿದರೆ ಅರಸನಾಗುವುದರಲ್ಲಿ ಸಂಶಯವಿಲ್ಲವೆಂಬುದು ಎಷ್ಟು ಸತ್ಯವೋ ಸುಮ್ಮನೆ ಕುಳಿತರೆ ಹಾಳಾಗಿ ಹೋಗುವುದೂ ಅಷ್ಟೇ ಸತ್ಯ. ನೀನು ಅದೇ ರೀತಿ ದುಡಿದಿದ್ದರೆ ಅದರ ಕಥೆಯೇ ಬೇರೆ.
* ಶುಂಠಿ ಕಿತ್ತು ಒಂದು ತಿಂಗಳ ಮೇಲಾದರೂ ಹೊಲ ಹಾಗೆ ಪಾಳುಬೀಳುತ್ತಿರಲಿಲ್ಲ. ಇಷ್ಟೊತ್ತಿಗೆ ಯಾವುದಾದರೊಂದು ಫಲವತ್ತಾದ ಬೆಳೆಯನ್ನು ನನ್ನ ಹೊಲದವ್ವ ನೀಡುತ್ತಿದ್ದಳು.
*ಗದ್ದೆ ತೆವರಿಗಳಲ್ಲಿನ ಹುಲ್ಲಿಗೆ ಅಷ್ಟೊಂದು ವಯಸ್ಸಾಗಲೂ ಬಿಡುತ್ತಿರಲಿಲ್ಲ. ನೀನು ಕರುಣಾಮಯಿ, ಸಸ್ಯಹಿಂಸೆ ಯಾಕೆ ಅಂತ ಸುಮ್ಮನೆ ಬಿಟ್ಟೆಯೋ ಏನೋ.
* ಬಾಳೇ ತೋಟದ ಸ್ಥಿತಿ, ಅಯ್ಯೋ ಯಾಕೆ ಅದರ ಪಾಡು. ಕುಷ್ಠ ರೋಗ ಬಂದ ಭಿಕ್ಷುಕನಂತೆ, ಮಾನ ಮುಚ್ಚಿಕೊಳ್ಳದ ಹುಚ್ಚನಂತೆ ಅವ್ಯವಸ್ಥಿತವಾಗಿ ಅನಾಗರೀಕವಾಗುತ್ತಿರಲಿಲ್ಲ. ಶಾಲೆಗೋಗುವ ಪುಟಾಣಿಯಂತೆ ನಳನಳಿಸುತ್ತಿತ್ತು. ಸತ್ತೆ, ಸಬರೆಯಿಲ್ಲದೆ ನೀಟಾಗಿರುತ್ತಿತ್ತು.
* ಕಾಲುವೆ ಹಂಚಿನಲ್ಲಿ ಬೆಳೆಯುತ್ತಿರುವ ಸುಬಾಬುಲ್ ಗಿಡಗಳನ್ನು ಗಂಧದ ಮರ ಅಂದುಕೊಂಡೆಯೋ ಏನೋ, ಅವಕ್ಕೆ ಕೊಡಲಿ ಇಟ್ಟು ಸ್ವಚ್ಚವನ್ನೂ ಮಾಡಿಲ್ಲ. ಅದೀಗ ಗವಿಯ ಗೂಡಾಗಿ ಇನ್ನೇನು ಕೆಲವೇ ವರ್ಷಗಳಲ್ಲಿ ಸೂಚಿಪರ್ಣ ಕಾಡಾಗಿ ಪರಿವರ್ತನೆಯಾಗಬಹುದು.
* ಹಂದಿ ದೊಡ್ಡಿಯಂತಾಗಿರುವ ಪಂಪ್ ಸೆಟ್ ಮನೆಯ ನೆರಕೆ ಮನಸ್ಸು ಮಾಡಿದ್ದರೆ ಶಬರಿಯ ಗುಡಿಸಲೂ ಆಗುತ್ತದೆ. ನಾವು ಮಾಡಬೇಕಷ್ಟೆ.
* ಪಂಪ್ ಸೆಟ್ ಮನೆಯೇ ನಿಜವಾದ ನಮ್ಮ ದೇವರ ಮನೆ. ಅದನ್ನು ಪಬ್ಲಿಕ್ ಟಾಯ್ಲೆಟ್ ರೀತಿ ಬೇಕಾಬಿಟ್ಟಿ ಬಳಸುವುದಲ್ಲ. ಅದಕ್ಕೊಂದು ನಿಯಮ ಬೇಕು. ಗುದ್ದಲಿ, ನೇಗಿಲು, ನೊಗ, ದಾರಗಳು, ಖಾಲಿ ಚೀಲಗಳು, ಕುಡ್ಲು, ಔಸ್ತಿಖ್ಯಾನು, ಇವೆಲ್ಲ ನಮ್ಮ ಉದ್ದಾರ ಪೂಜೆಗಿರುವ ಗಂಧದ ಕಡ್ಡಿ, ಬಾಳೇ ಹಣ್ಣು, ಕರ್ಪೂರ, ಹರಿಶಿಣ, ನಾಮದಷ್ಟೇ ಪವಿತ್ರವಾದವು. ನನಗೆ ಫೋಟೋಗೆ ಮಾಡುವ ಗಂಧದ ಕಡ್ಡಿಯ ಪೂಜೆಗಿಂತ ಹೊಲಕ್ಕೆ ಮಾಡುವ ನೇಗಿಲ ಉಳುಮೆ ಪೂಜೆಯಲ್ಲಿಯೇ ಭಕ್ತಿ ಹೆಚ್ಚು. ಗಂಧದ ಕಡ್ಡಿ ಪೂಜೆ ತುಸುಹೊತ್ತಿರುವ ಸುವಾಸನೆ ನೀಡಿ ಮರೆಯಾದರೆ ನೇಗಿಲ ಉಳುಮೆ ನಮ್ಮ ಸಂಸ್ಕಾರ, ನಮ್ಮ ವೃದ್ಧಿ, ನಮ್ಮ ಕಲ್ಯಾಣವನ್ನು ಬಯಸುತ್ತದೆ.
* ಕೆರೆ ಹೊಲದÀ ಗದ್ದೆ ಫಸಲು ಯಾರೋ ಒಬ್ಬ ಸುತ್ತಮುತ್ತಲಿನವನ ಗದ್ದೆಗೆ ಮಿಗಿಲಾದರೂ ಸಾಕು. ಆದರೆ ತೆವರಿಗಳು ಮಾತ್ರ ಎಲ್ಲರಿಗಿಂತಲೂ ಸ್ವಚ್ಛವಾಗಿಯೇ ಇರಬೇಕು. ಅದು ನನ್ನಾಸೆ.
* ಮಾದಯ್ಯನ ಹೊಲದ ಪ್ರತೀ ತೆವರಿಗಳು ಸೂಚಿಪರ್ಣಗಳೇ ಆಗಿವೆ. ಅಲ್ಲಿ ಆವ ಹಾವು ಸಂಸಾರ ಹೂಡಿದೆಯೋ ಗೊತ್ತಿಲ್ಲ, ಆವ ಮೊಲ ಮರಿಮಾಡಿದೆಯೋ ಗೊತ್ತಿಲ್ಲ, ಅದಾವ ಹಂದಿ ಡೈಲಿ ವಿಸಿಟ್ ಕೊಡುತ್ತಿದೆಯೋ ಗೊತ್ತಿಲ್ಲ.
* ಎರಡೇ ಎರಡು ಸಿಲ್ವಾರ್ ಸಸಿಗಳು ಎಷ್ಟು ನಾಜೂಕಾಗಿ ಬೆಳೆದಿವೆ. ಅವಕ್ಕಾವ ಗೊಬ್ಬರವನ್ನು ಹಾಕಿಲ್ಲ. ಅದೇ ರೀತಿ ಇನ್ನುಳಿದ ಜಾಗಕ್ಕೂ ಸಸಿ ಕುಣಿಸಿದ್ದರೆ ನಮ್ಮಪ್ಪನ ಗಂಟು ಹೋಗುತ್ತಿರಲಿಲ್ಲ. ಇನ್ನು ಹೆಚ್ಚಾಗುತ್ತಿತ್ತು. ಆ ಕೆಲಸ ಇನ್ನಾರ ಸರ್ಕಾರದಲ್ಲಿ ಆಗುವುದೋ ಕಾಣೆ. ಅದಕ್ಕೆ ಎಷ್ಟು ಕೋಟಿ ಬಜೆಟ್ ಮಂಡಿಸಬೇಕೋ ಅದೂ ಕಣೆ. ತಂತಿಬೇಲಿ ಇದ್ದು ನಾವು ಸುಮ್ಮನೆ ಇರಬಾರದು. ಸಮೃದ್ಧ ತಾರಸೀ ಮನೆಯಲ್ಲಿ ಗೂಬೆಗಳು ವಾಸವಾದಂತೆ ಕಳೆ ಬೆಳೆಯಲು ಪೆನ್ಷನ್ ಹಾಕಿಸಿದಂತಾಗಿದೆ.
ನನ್ನ ಒಂದು ಅನುಭವದ ಮಾತು.
ಹೊಲ ಅಥವಾ ಗದ್ದೆ ಬೆಳೆಯನ್ನು ಚನ್ನಾಗಿ ಬೆಳೆದಿಲ್ಲವೆಂದಾದರೆ ಅದಕ್ಕೆ ಮಳೆಯಿಲ್ಲ, ಗೊಬ್ಬರ ಸಿಗಲಿಲ್ಲ, ದುಡ್ಡಿರಲಿಲ್ಲ, ಅತಿಯಾದ ಮಳೆ ಎಂದು ಕಾರಣಗಳನ್ನು ನೀಡಿ ಬಚಾವಾಗಬಹುದು. ಆದರೆ ಬೆಳೆಗಿನ್ನ ಕಳೆಯೇ ಜೋರಾಗಿದ್ದರೆ ನೇರವಾಗಿ ಹೇಳಬಹುದು ಅವರು ಸೋಮಾರಿ ನನ್ನ ಮಕ್ಕಳು ಎಂದು.
ಕಷ್ಟವೋ ಸುಖವೋ, ಸರಳ ಜೀವನದಿಂದ ಅಣ್ಣ ಉತ್ತಮರಾಗಿ ಜೀವನ ಸವೆಸುತ್ತಿದ್ದಾರೆ. ನಾವು ಅವರ ಒಂದು ಪರ್ಸೆಂಟ್ ಆದರೂ ಒಳ್ಳೆಯ ಗುಣಗಳನ್ನು, ಉತ್ತಮತೆಯನ್ನು ಮೈಗೂಡಿಸಿಕೊಂಡಿಲ್ಲವಾದರೆ ನಂದಿ ಹೊಟ್ಟೆಯಲ್ಲಿ ಹಂದಿ ಹುಟ್ಟಿದಂತೆಯೆ ಸೈ.
ಇದನ್ನೆಲ್ಲ ಫೋನಿನಲ್ಲಿ ಹೇಳಬಹುದಿತ್ತು. ಆದರೆ ಅದನ್ನು ಒಂದೇ ಮಾತಿಗೆ ಕೇಳಿ ನೀನು ಅರ್ಥೈಸಿಕೊಳ್ಳುತ್ತೀಯ ಅನ್ನೋ ನಂಬಿಕೆ ನನಗಿಲ್ಲ. ಅಥವಾ ಅದನ್ನೆಲ್ಲ ಕೇಳುವ ತಾಳ್ಮೆ, ಸೌಜನ್ಯ, ಸಹನೆ, ಗಮನಶೀಲತೆಯೂ ನಿನ್ನಲ್ಲಿಲ್ಲ. ಹಾಗಾಗಿ ಒಂದಲ್ಲವೆಂದರೆ ಎರೆಡೆರೆಡು ಸಲ ಓದು. ನನ್ನ ಸಾಹಿತ್ಯಿಕ ಭಾಷೆ ಕಷ್ಟವಾಗಬಹುದು. ನೀನು ವಿದ್ಯಾವಂತನೇ ಅಲ್ಲವಾ ಹಾಗಾಗಿ ಅರ್ಥವಾಗುತ್ತದೆ ಎಂಬ ಮೂಢನಂಬಿಕೆ ನನಗೆ. ಇನ್ನು ಮುಂದೆ ಬದಲಾಗುತ್ತೀಯೋ, ಇವನ್ದು ಇದ್ದದ್ದೇ ಪಿಟೀಲು ಚೌಡಯ್ಯ ಅಂತ ಸುಮ್ಮನಾಗುತ್ತೀಯೋ, ಬೆಳಕಾಗಲು ಬಯಸುತ್ತೀಯೋ, ಬದುಕನ್ನು ಕುತೂಹಲವಾಗಿ ಕಳೆಯುತ್ತೀಯೋ, ಶ್ರಮಿಕನಾಗಿ ಗೇಯುತ್ತೀಯೋ, ಕಾಲಾಹರಣ ಮಾಡಿ ಇಲ್ಲದ ಇನ್ನೊಂದು ಜನ್ಮದಲ್ಲಿ ದುಡಿಯುವ ಅಂತ ಈ ಜನ್ಮ ಸೋಮಾರಿಯಾಗುತ್ತೀಯೋ ನಿನಗೆ ಬಿಟ್ಟದ್ದು. ಅವರವರ ಜೀವನದ ಪರ್ಸನಲ್ ನಿಗೂಢಗಳು ನನಗೆ ಬೇಕಿಲ್ಲ. ನನ್ನ ಅಣ್ಣ ಅಂತ ಇಷ್ಟೊಂದು ಕೊರೆದೆ. ನಮಗಾಗಿ ನಾವು ದುಡಿಯೋಣ. ಮಾದರಿಯಾಗಿ ಬದುಕಲು ಕಲಿಯೋಣ.
ಉತ್ತಮ ರೈತನಾಗುವುದು ಒಂದು ಸಾಧನೆಯೇ ಸರಿ. ಪಂಪ್ ಸೆಟ್ ಹಾಕಿಸಿದರೆ ಚನ್ನಾಗಿ ಕೆಲಸ ಮಾಡಬೋದು ಅಂತ ನೀ ಒಮ್ಮೆ ನನಗೆ ಹೇಳುತ್ತಿದ್ದೆ. ಪಂಪ್ ಸೆಟ್ ಹಾಕಿಸಿದ್ದೂ ಆಯಿತು, ನಿನ್ನ ಖಾಸಾ ಬಣ್ಣ ಬಯಲಾಗಿದ್ದು ಆಯಿತು, ನನ್ನ ಹೊಲ ತನ್ನ ಮೈಯ ಹರಿಯುವವನು ಮತ್ತು ಅರಿಯುವವನಿಲ್ಲದೆ ಹೊಳಗೊಳಗೆ ಗೊಳೋ ಎಂದು ಅತ್ತು ಇತ್ತ ಮಕ್ಕಳೆರದ ಬಂಜೆಯೂ ಅಲ್ಲ, ಅತ್ತ ಆರೋಗ್ಯ ಮಕ್ಕಳ ಹೆತ್ತ ತಾಯಿಯೂ ಅಲ್ಲ ಎಂಬಂತೆ ಅಶಕ್ತಳಾಗಿ, ಅಪೌಷ್ಠಿಕ ಮಕ್ಕಳನ್ನೆರುವವಳಾಗಿದ್ದಾಳೆ.
ಬದುಕಿನ ಬಗ್ಗೆ ಚಂಚಲವಾಗುವವರಿಗೆ ನನ್ನ ಮಾತು:- ನಮ್ಮ ಬಳಿ ಏನೂ ಇಲ್ಲದಾಗಲೇ ನಾವು ಚನ್ನಾಗಿಯೇ ಇದ್ದೇವೆಂದರೆ ನಮ್ಮ ಬಳಿ ಎಲ್ಲ ಬಂದ ಮೇಲೂ ನಾವು ಚನ್ನಾಗಿಯೇ ಇರುತ್ತೇವೆ.
ಹಾಗೂ
ದುಡಿಯುವವನಿಗೆ ಕೆಲಸ ಮಾತ್ರ ಕಾಣುತ್ತದೆ. ಸೋಮಾರಿಗೆ ಆ ಕೆಲಸದಿಂದ ತಪ್ಪಿಸಿಕೊಳ್ಳಲು ಅಥವಾ ಕೆಲಸವನ್ನು ನಿಲ್ಲಿಸಿಬಿಡಲು ಕಾರಣಗಳು ಐಡಿಯಾಗಳು ಕಾಣುತ್ತವೆ.
ಓದುವ ಎಲ್ಲರೂ ಅರ್ಥವಾಗದಿದ್ದರೆ ಮತ್ತೊಮ್ಮೆ, ಮಗದೊಮ್ಮೆ ಓದಿ.
ನನ್ನ ಹೊಲವನ್ನು ಮಲೆನಾಡೆಂದೇ ಹೆಮ್ಮೆಯಿಂದ ಹೇಳುವೆ,,
ಮೊಗ್ಗುಗಳ, ಬಳ್ಳಿಗಳ ಸಾರವರಿಯಲು
ಮಲೆನಾಡಿಗೆ ಬಾರೋ ಓ ದಾರಿಹೋಕ
ಗದ್ದೆ ಹೊನಲ ಬಣ್ಣ ಕೊಂಚ ಕಿರಿದಾದರೂ
ಅತ್ತಲೇ ಸುತ್ತುವ ಹಕ್ಕಿಯಾಕೋ ಮೂಕ..
ಬೆವರ ಹನಿಯ ಲೆಕ್ಕವಿಡುವ ಕ್ರೂರಿ
ಭೂತಾಯ ಬಳಿಗಲ್ಲ, ನೀ ಹೋಗೋ ದೂರ
ಕನಸಲ್ಲೂ ಕೈಬೀಸೋ ಹೊಲದವ್ವ ಆಕೆ
ತನುವರ್ಪಿಸಿ ತಂಪಾಗುವ ತಡವಿಲ್ಲ ಬಾರ..
ನಿಮ್ಮೆಲ್ಲರ ಹಿತವನ್ನೇ ಗುರುದೇವರಲ್ಲಿ ಪ್ರಾರ್ಥಿಸುವ,,
ನಿಮ್ಮ ರಕ್ತದವ ಚಂದ್ರ,,,

No comments:
Post a Comment