Friday 10 March 2017

ಕೀರುತಿಯ ಕಿರುದೀಪ --- ಚಂದ್ರು ಎಂ ಹುಣಸೂರು

ಕೀರುತಿಯ ಕಿರುದೀಪ

ನಾಮಾಂಕಿತವಿರಿಸಿಹರೋ ಕರುನಾಡು
ಅದರಲ್ಲಡಗಿಹುದೋ ಖರೆಹಾಡು
ಬೆರಳು ತೋರಿಸಿ ಕನ್ನಡ
ತಾಯ ವಂದಿಸುತಿಹ
ಕರುಳ ಛೇದಿಸೋ ಕನ್ನಡ
ಕಾವ್ಯ ಮುಂದಿರಿಸಿಹ
ಇದು ಕರುಣೆಯ ನಾಡೆ
ಇದು ಕಪ್ಪುಮಣ್ಣಿನ ನಾಡೆ
ಇದು ಕಂಪು ಬೀರುವ ನಾಡೆ
ಇದು ಕಣ್ಮನ ಸೆಳೆಯುವ ನಾಡು

ದಿಗ್ಗಜ, ಕವಿ, ಪುಂಗವ
ನಾಟಕ, ಅಭಿನಯ, ಜಂಗಮ
ಸಂಗೀತ, ಸಾಹಿತ್ಯ, ಸೌರಭ
ಜ್ಞಾನ, ವಿಜ್ಞಾಮ, ತಲ್ಲೀನ
ಕರುಣೆ, ಕಾರ್ಪಣ್ಯ, ನಿತ್ಯ ಉತ್ಸವ
ಎಲ್ಲದರಲೂ ಮಿಗಿಲಾಗುವ ಹಾಗೆ
ದಿನಂಪ್ರತಿ ಬೆಳಕಾಗುತಿದೆ.

ಕಾಡು-ಮೇಡಿನ ಬೀಡಿನಲಿ
ಹಾಡುವ ಹಕ್ಕಿಯ ವಂಧಿಸುವ
ಯುವಜನ ನಡೆಯುವ ಹಾದಿಯಲಿ
ಸಂಸ್ಕø, ಸಂಯಮ ಕರುಣಿಸುವ
ಲೇಖಕ, ಸಾಧಕರೆಲ್ಲರ ಪತಾಕೆ
ದಿವ್ಯ ದ್ವಿವರ್ಣ ಧ್ವಜದ ಲಾಂಛಿಕೆ
ಗೌರವ ಗೀತೆಯು ಜೈಭಾರತ ಜನನಿಯ ತನುಜಾತೆ,,,

ಉದ್ಘಾರವೇ ಮಾತೆಗೂ ಸಮರ್ಪಣಾ,,,

No comments:

Post a Comment