Friday 10 March 2017

ಅಂಬೇಗಾಲಿನ ಪ್ರೇಮ ಸಂದೇಶ ---- ಚಂದ್ರು ಎಂ ಹುಣಸೂರು

ಅಂಬೇಗಾಲಿನ ಪ್ರೇಮ ಸಂದೇಶ


ಕಾಡಿಗೆ ಬೆರೆಸಿದ ಕಣ್ಣನು ನೋಡಿ,,,                        
 ಕೂಡುವ ಆಸೆಯು ಬಂದಿದೆ ಓಡಿ….
ಪದೇ ಪದೇ ನಿನ್ನ ಹೆಸರು ಕೂಗೋದು
ನೀ ತಿರುಗಲೆಂದೆ ದಿಟ,,,

ಈಗೀಗ ಅದು ರೂಪುಗೊಂಡಿದೆ
ನೀ ಇರದಾಗಲು ಚಂದ ಚಟ,,,,

            ಎದುರಿನ ಗೆಳತಿಯ ನಗುವಿಗೆ ಕುಲಿತು
            ಬಡಿಯದ ಹೃದಯದ ಬೇಡಿಕೆ ಮರೆತು

ನನ್ನನ್ನೋಡಿ ನಗುತ ಹಾಗೆ
ನೀ ಮೆಲ್ಲ ಸರಿದೆ…
ಅಂತೂ ಬದುಕಿ ನಡÉದು
ಈ ಸಾಲು ಬರೆದೆ…

ಗೆಳತಿ ನಾನಾಗೆ ಮುಗಿಬೀಳುವ ಮನಸು ಹುಚ್ಚು
      ನೀನಾಗೆ ನಗೆಬೀರಿರೆ ಜೀವಕದು ಹೆಚ್ಚು
             
ಅಂಗೀಕರಿಸು ನನ್ನ ಒಲವಾಮೃತ
ಸಂತೈಸುವೆ ಇರುಳಲು ನೆರಲಾಗುತ,,,,

ಭಾಗ್ಯದಂತೆ ಒಳಬಂದ ಒಲವಿನವಳ ಭೇಟಿ
ಹನಿಗಣ್ಣ ಭಾವನೆಗೆ ಮತ್ತಾವುದಿದೆ ಸಾಟಿ,,,,,,

ಇಚ್ಚಿಸಿದವಳುÀ ಮೆಚ್ಚುಗೆ ನೀಡದೆ
ಹೆಚ್ಚೇನು ಹೇಳಲಿ ಅಚ್ಚಾಗದ ಜಗಕೆ,,,,

ಕಪ್ಪನೆ ಇರುಳ ಒಪ್ಪಿಗೆ ಹಾಕದೆ
ರಂಗಲಿ ನಲಿವನೆ ಚಂದ್ರನೆ ನಿಜಕು,,,,

ಸಿಕ್ಕುವ ಘಳಿಗೆಯ ಮೊದಲೆ ತಿಳಿಸು
ಫಕ್ಕನೆ ಕೊಲ್ಲುವ ಚಾಳಿ ಅಳಿಸು,,,

ನೀ ಸೋಕಿದ ಬೆರಳಿಗೆ ಸಾವಿರ ಮುತ್ತು
ಈ ವಿರಹಕೆ ಅರಳದೆ ಇನ್ನೇನು ಗೊತ್ತು,,,,

ಪ್ರಾಣ,ಪ್ರೀತಿ,ಬದುಕು ಮನುಕುಲದ ಮೇರು ನಿಷ್ಠೆ
ಈ ಮೂರು ನಿನ್ನೊಂದಿಗೆ ನಾನು,ನನ್ನೊಂದಿಗೆ ನೀನು ಅಷ್ಠೆ,,

No comments:

Post a Comment