Friday 10 March 2017

ಮಲ್ಲಿಗೆ ಮನೆ ---- ಚಂದ್ರು ಎಂ ಹುಣಸೂರು

ಮಲ್ಲಿಗೆ ಮನೆ

ಕೆಂಪು ಹೊಲದ ನಿಶಾನೆ ಬೇಲಿಯಲಿ
ಯಾರ್ನೆಟ್ಟಿ ಹರಡಿತ್ತೋ ಕಾಣೆ ಬೇಲಿಗೆ ಮಲ್ಲಿಗೆ
ಗೊಬ್ಬರದಾರೈಕೆ ಇಲ್ಲ, ಸುಂದರ ಚಪ್ಪರ ಇಲ್ಲ
ತಾಗಳಿಸಿದ ಸಾವಿರ ಸಾವಿರ ಮಲ್ಲಿಗೇ ಹೂ
ಅಲ್ಲೆ ಬಿದ್ದು ಬಿದ್ದು ಬೇರಿಗೆ ಗೊಬ್ಬರದ ಪಾಲು,,

ಒಬ್ಬಳೆ ಮಗಳು ಸೀತುವನ್ನು ಒಮ್ಮೆ
ಕರೆದೊಯ್ದರು ಕೆಂಚ ಮತ್ತು ಹೊಂಬಮ್ಮ
ತೋಟದ ಮನೆಯ ತೆಂಗಿನ ಕಾಯಿಯ ಲೆಕ್ಕಕ್ಕೆ ದಂಪತಿ
ಚಿಗುರು ಹುಡುಗಿ ಸೀತು ಅಲೆಯ ಹೋಗಿ ಸಂತಸ
ಹಾವು-ಗೀವು, ಸೆತ್ತೆ-ಸೆಬರೆ ಇರುವುದರ ಭಯವಿಲ್ಲ,,

ಹಸಿರ ಮೈತುಂಬ ಮಲ್ಲಿಗೆ ಮುಡಿದ ಗಿಡತಾಯಿ
ಕಣ್ಣಿಗೆ ಬಿದ್ದ ತಡ ಸಂಭ್ರಮದ ಕಣ್ಣುಗಳು
ಬಳಿಹೋಗಿ ಹೂಕಿತ್ತು ಘಮ ಸೆಳೆದು
ಅಸ್ತವ್ಯಸ್ತ ಮಲ್ಲಿಗೆ ಹಂಬಿಗೆ ಮರುಕಪಟ್ಟಳು
ಮಡಿಲು ತುಂಬುವವರೆಗೂ ಮಲ್ಲಿಗೆ ಬಿಡಿಸಿ

ಹಿರಿಯ ಪ್ರಾಥಮಿಕ ಶಾಲೆಯ ಸೀತು
ಏಳನೇ ತರಗತಿ, ಹಾಲಬಣ್ಣ, ಉದ್ದಜಡೆ
ಮುಡಿತುಂಬ ಮುಡಿದ ಘಮಘಮ ಮಲ್ಲಿಗೆ ಕಂಡು
ಗೆಳಯಗೆಳತಿಯರಾದಿಯಾಗಿ ಗುರುಗಳ ಮುಖ ಅರಳಿ
ನನ್ನ ತೋಟದ ಮಲ್ಲಿಗೆ ಬಳ್ಳಿಯಿಂದ ತಂದವು ಎಂದಳು..

ಗಾಂಧೀ ಜಯಂತಿ, ಅಂಬೇಡ್ಕರ್ ಜಯಂತಿ
ಸ್ವತಂತ್ರ ದಿನಾಚರಣೆ, ಮಕ್ಕಳ ದಿನಾಚರಣೆಗೆ
ನೆಲೆಗೊಳ್ಳೋ ಮಹನೀಯರ ಫೋಟೊ ಹಾರ ಇವಳದ್ದೆ
ಶಾಲೆಯಲ್ಲಿಮಲ್ಲಿಗೆ ಸೀತು ಎಂದೇ
ಮರುನಾಮಕರಣವಾಗಿ, ಅವಳಿಗದು ಹೆಮ್ಮೆಯ ವಿಚಾರ,,

ಅಪ್ಪನೊಡಗೂಡಿ ಅತಂತ್ರವಾಗಿ ಹರಡಿದ್ದ
ಮಲ್ಲಿಗೆ ಬಳ್ಳಿಯಂಬುಗಳಿಗೆ ಸುಂದರ ಚಪ್ಪರ ನಿರ್ಮಾಣ,
ಸುತ್ತ ಮುತ್ತಲಿನ ಕೆಲಸಕ್ಕೆ ಬಾರದ ಹಸಿರ ತೆಗೆದು
ಗಿಡದ ಬುಡದಲ್ಲಿ ಪಾತಿಮಾಡಿ ಚಪ್ಪರದಡಿಯನ್ನು
ಸ್ವಚ್ಛ ಮಾಡಿಕೊಟ್ಟ ಅಪ್ಪನನ್ನು ಕೇಳದೆ,
ಸಗಣಿಯಿಂದ ನೆಲಭಾಗ ತಾರಿಸಿ, ಬಿಡಿಸಿದ್ದಾಳೆ ನೋಡಿ ರಂಗವಲ್ಲಿ,

ಸೀತು ಮಲ್ಲಿಗೆ ಮನೆಗೆ ಪದೇ ಪದೇ ಹೋಗಿ
ಅದರ ಶುಶ್ರೂಷೆ ಮಾಡಿ ಮಲ್ಲಿಗೆಯ ಆಪ್ತ ಗೆಳತಿಯಾದಳು
ವರ್ಷಗಳು ಉರುಳುತಿರಲು ಮಲ್ಲಿಗೆ ಮರವಾಗಿ ನಿಂತಿತು
ಗುಬ್ಬಿಲಂಗದ ಸೀತು ಜರತಾರಿ ತೊಟ್ಟು ಗರತಿಯಾಗೋ ಸಮಯ
ಹಸೆಮಣೆ ಏರುವ ನವಬಾಳಿಗೆ ಸೀತು ಕೆಂಪೇರಿದಳು,
ಮಧುವೆಯ ಹಿಂದಿನ ದಿನ ಮಲ್ಲಿಗೆ ಮರದ ಬಳಿನಿಂತು
ಹನಿಗಣ್ಣಾಗುವಳು; ಮತ್ತೆ ಮಲ್ಲಿಗೆ ಅನಾಥೆ
ತಾಪತ್ರೆಯ ಅಪ್ಪ ತಿರುಗಿ ನೋಡುವನೇ??


No comments:

Post a Comment