Friday 10 March 2017

ಕಲ್ಲೂರ ಎರಡು ತಿಂಗಳು ---- ಚಂದ್ರು ಎಂ ಹುಣಸೂರು

ಕಲ್ಲೂರ ಎರಡು ತಿಂಗಳು

ಕನ್ನಡ, ಸಮಾಜ, ಇಂಗ್ಲೀಷ್, ಹಿಂದಿ
ಗಣಿತ, ವಿಜ್ಞಾನ ವಿಷಯಗಳ ವರ್ಷಸಾಲು
ಬೇಸಿಗೆ ಬಂತಪ್ಪ ಬಳಿಗೆ, ಹೋಗುವೆ ಬಾಲ್ಯದಾ ಗೂಡಿಗೆ
ತಾಯಿಯ ತವರಲ್ಲಿ ಬೆಳೆದೆ ಒಂದರಿಂದ ಆರುವರ್ಷ
ಕಲ್ಲೂರೆಂದೊಡನೆ ಎಲ್ಲಿಂದ ಬರುವುದೋ ಅಲೆವ ಹರ್ಷ

ಶ್ರೀನಿವಾಸಜ್ಜ ಬೇಸಿಗೆ ಬಂದೆರೆಡು ದಿನಕ್ಕೆ ಹಾಜರ್
ತಂಗಿಯೊಡಗೂಡಿ ಸೀನಜ್ಜನ ಸಹವಾಸ ಸುಖ
ಕೆ ಆರ್ ನಗರ ಟ್ರೇನು ಸ್ಟ್ಯಾಂಡಿನಿಂದ
ಕಲ್ಲೂರಿಗೋಗುವ ಟ್ರೇನು ಚುಕುಬುಕು ಚುಕುಬುಕು
ನಿಂತ ಎಡಭಾಗದಿಂದ ಮುಂಜಾನೆ ಎಂಟು ಗಂಟೆಗೆ
ಕೂಗುತ್ತಾ ಬರುತ್ತಿದೆ, ಸರಪಳಿಯ ಭೋಗಿಗಳ ಸಾಲು
ಗಾಂಭೀರ್ಯದಿಂದ ನಿಂತ ಟ್ರೇನಿಗೆ ಗಾಬರಿಯಿಂದ ಏರಿ,,

ಅಯ್ಯೋ ನನ್ನ ಗೆಳೆಯ ಮಹಾದೇವ ಅವನೂ ಬರುತ್ತಿದ್ದಾನೆ
ಇದೇ ಟ್ರೇನಿನಲ್ಲಿ, ಇನ್ಯಾರ್ಯಾರೋ ಗೊತ್ತಿಲ್ಲ,
ಸೀನಜ್ಜ ಯಾವನೋ ಮುದುಕನ ಜೊತೆ ಹರಟೆ ಶುರು,
ಕಿಟಕಿಯಲ್ಲೋ, ಬಾಗಿಲಬಳಿಯಲ್ಲೋ ತುದಿಗಾಲಲ್ಲಿ ನಿಂತು
ಅಪರೂಪಕ್ಕೆ ಕಾಣೋ ಸೌಭಾಗ್ಯ ಸವಿಯುವೆ,,

ಸಾಗರಕಟ್ಟೆಯ ಸಾಗರ, ಟ್ರೇನಿನ ಎಡಬಲ
ಪೂರ್ತಿ ಕಿರುಅಲೆಯ ನೀರು, ಬಿಳಿಯ ಹಾಳೆಯ ಮೇಲೆ
ಗೆರೆ ಎಳೆದ ಹಾಗೆ ಟ್ರೇನು, ಕೊಂಚ ಭಯ ಹಿಂದೆಸರಿದು
ದೂರದಲ್ಲಿ ಯಾವನೋ ದೋಣಿ ನಡೆಸುತ್ತಿದ್ದಾನೆ.
ಒಂದೇ ಒಂದು ದೋಣಿ, ದಡದಲ್ಲಿ ಹೆಂಗಸರು
ಯಾವಣ್ಣನೋ ಉಳುಮೆ ಮಾಡುತ್ತಿದ್ದಾನೆ, ಊಟದ ಭುತ್ತಿಯ ಒಡತಿ
ಇವನಿಗೂ ಅವಳಿಗೂ ಅಂತರ ನೋಡುತೀನಿ, ನಿಲ್ಲಲ್ಲವಲ್ಲ

ಇನ್ನೇನು ಕಲ್ಲೂರು ಸಿಗುವ ಮುನ್ನ
ಕಣ್ಣಿಗೆ ಬಿತ್ತು ಅವ್ವನ ಹೊಲ, ಮಾವಿನ ಮರ
ತೆಂಗಿನ ತೋಟ, ಮಲ್ಲಿಗೆ ಮರ, ಇತ್ತಲು ಮನೆ
ಖಾಲಿ ಹೊಲದಲ್ಲಿ ಯಾವನೋ ಧನ ಮೇಯಿಸುತ್ತಿದ್ದಾನೆ
ನನ್ನವ್ವನ ಹೊಲದಲ್ಲಿ ಯಾವನೋ ಅವನು
ಇಲ್ಲೆ ನೆಗೆದು ಹೋಗಿ ನೋಡಲೆ,,

ಬಂತು ಬಂತು ನನ್ನ ಮಡಿಲು
ಯಾವ ಸುಡುಗಾಡಿನಲ್ಲಿದ್ದೆ ಇಲ್ಲಿಯ ತನಕ
ಜೋಪಾನವಾಗಿಸಿಳಿದ ಸೀನಜ್ಜನ ಎಡಗೈ ನಂದು
ಬಲಗೈ ಅವಳದ್ದು, ಅತೀ ಪಕ್ಕದಲ್ಲೋಗಲು
ಬ್ಯಾಗು ಬಿಡದು, ಪುಟ್ಟ ಪುಟ್ಟ ಹೆಜ್ಜೆ, ವೇಗ ಜಾಸ್ತಿ,,

ಕೈಯಂಚಿನ ಮನೆಗೆ ಸೇರಲು ಗಲ್ಲಿಹೈವೆ
ಅದೇ ಬಾವಿ ಹಾಗೆ ಇದೆ, ಅದೇ ಅಕ್ಕ
ಅದೇ ಪೆಟ್ಟೀ ಅಂಗಡಿ, ಅದೇ ಪುರಿಉಂಡೆ
ಅದೇ ಶಾಮಣ್ಣ, ಕಳೆದ ವರುಷ ಗೋಲಿಯಾಡುವಾಗ ಹಿಡಿದಿದ್ದ
ಬಡ್ಡೀಮಗ ಬಾರಿಯು ಹಿಡಿಯಲಿ ಅವನಿಗಿದೆ
ಅವ್ವನಿಗೇಳಿ ಮಾಡಿಸುತ್ತೀನಿ, ಮನೆಗೆ ಹೊಕ್ಕು-ನಕ್ಕು

ಸೀದಾ ಎಲ್ಲರೂ ಹೊಲಕ್ಕೆ ಹೊರಟೆವು,,,

No comments:

Post a Comment