Friday 10 March 2017

ಸತ್ಸಂಗದ ಉತ್ತುಂಗದಲ್ಲಿ ----- ಚಂದ್ರು ಎಂ ಹುಣಸೂರು

ಸತ್ಸಂಗದ ಉತ್ತುಂಗದಲ್ಲಿ

ಸೀನು ಅದು ಬ್ಯಾಡ, ಇದೇ ಸರಿ
ನೀನಾಗ ಬೇಕಾಗಿರುವ ದಾರಿಯ ಬಿಟ್ಟು
ಹೋಗು, ಅಲ್ಲಿ ಅವರ ಬಳಿ ಹೇಳಿದ್ದೇನೆ,
ಮತ್ತೆ ಮತ್ತೆ ಬಾ, ನಿನಗಾಗೆ ತೆರೆದೇ ಇರುತ್ತದೋ ಕದ
ಅಪ್ಪ ಅಮ್ಮನ ಕೇಳಿದೆ ಎಂದು ಬಿಡು,,

ರಕ್ತದಿಂದ ನನ್ನವರಾದವರು ಹಲವರಾದರೂ ಕೆಲವರೆ
ಜೀವನದಿಂದ ನನ್ನವರಾದವರೂ ಕೆಲವರಾದರೂ ಹಲವರೆ
ದೀಪ ಕೆಲಕಾಲ ಬೆಳಗಬೇಕು
ಇನ್ನು ಕೆಲಕಾಲದ ಗಾಳಿಗೆ ಸೋಲದಿರಲು
ಒಂದೆರೆಡು ಹಸ್ತಗಳ ಕವಚಬೇಕು,,

ಏನಾದರೂ ದುಡ್ಡಿನಾವಶ್ಯಕತೆ ಇದ್ದರೆ ಹೇಳಪ್ಪ
ಯಾಕೋ ಬೇಜಾರಿನಲ್ಲಿದ್ದೀಯ, ಏನೋ?
ಹಬ್ಬಕ್ಕೆ ಮೊದಲೇ ಹೇಳಿದ್ದೇನೆ, ಮರೆಯಬೇಡ
ಊರಿನಿಂದ ಒಂದು ಮೂಟೆ ಜೈವಿಕ ಗೊಬ್ಬರ ಬೇಕಿತ್ತು
ಅಪ್ಪನ ಆರೋಗ್ಯ ಹೇಗಿದೆ?

ಸೀನು ಎರಡು ದೋಣಿಯ ಸಹವಾಸ ಸಲ್ಲದು
ಉತ್ತಮವಾಗಿ ಓದುತ್ತೀಯ, ತಿಳಿಯುತ್ತೀಯ
ಹೆಚ್ಚು ಜಮೀನಿನಲ್ಲೂ ದುಡಿಯುತ್ತೀಯ
ಉತ್ತಮ ಕನಸನ್ನು ಎಣೆಯುವ ನೀನು
ಏನಾಗಬೇಕೆಂಬುದನ್ನು ನೀನೇ ಸಿದ್ದಪಡಿಸು!

ಯಾವ ದಾರಿಯ ಹುಡಗ ಸೀನು
ಮತ್ತಾವುದೋ ಸ್ನೇಹದ ಬಿಗಿ ಹಸ್ತ
ಕೈಚಾಚಿ ಬರಮಾಡಿಕೊಂಡು ಹರಸುವುದು
ಸಲಹುವುದು, ಬೇಕು ಬೇಡಗಳ ಅರಿತು,,,



No comments:

Post a Comment